ಕಲಬುರಗಿ: ಸ್ಯಾಂಡಲ್ವುಡ್ನಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ನಟಿ ರಮ್ಯಾಗೆ ನಿಂದಿಸಿದ ವಿಚಾರ ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ನಟಿ ರಮ್ಯಾ ಪರವಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ನಿಂತಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ನಟಿ ರಮ್ಯಾ ಅವರಿಗೆ ಎಷ್ಟು ನಿಂದಿಸಬೇಕೋ ಅಷ್ಟು ನಿಂದಿಸಿದ್ದಾರೆ. ಒಬ್ಬ ಖ್ಯಾತ ನಟಿಯ ವಿಡಿಯೋ ತೆಗೆದುಕೊಂಡು ನಿಂದಿಸಲಾಗಿದೆ. ಇನ್ನು ಈ ಬಗ್ಗೆ ಈಗಾಗಲೇ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೇವೆ. ಹಾಗೂ ಪ್ರಕರಣದ ತನಿಖೆ ನಡೆಯುತ್ತಿದೆ.
ಈ ಪ್ರಕರಣ ಬಹಳ ಗಂಭೀರ ಸ್ಪರೂಪ ಪಡೆದುಕೊಂಡಿದೆ. ಈಗಾಗಲೇ ಕೆಲವು ಅಕೌಂಟ್ಗಳು ಕ್ಲೋಸ್ ಆಗಿದೆ. ಇನ್ನು ಕೆಟ್ಟ ಕೆಟ್ಟ ಪದ ಬಳುಸವಾಗ ಅವರ ಮನೆಯ ಹೆಣ್ಣು ಮಕ್ಕಳು ನೆನಪು ಬರಲ್ವಾ ಎಂದು ಪ್ರಶ್ನೆ ಮಾಡಿದ್ರು. ಸೋಶಿಯಲ್ ಮೀಡಿಯಾದಲ್ಲಿ ಒಳ್ಳೆಯದನ್ನ ಕಮೆಂಟ್ ಮಾಡಿ ಎಂದು ಹೇಳಿದ್ದಾರೆ.


