Friday, February 20, 2026
19.1 C
Bengaluru
Google search engine
LIVE
ಮನೆವೈರಲ್ ನ್ಯೂಸ್ಶಿವನ ಅವತಾರದಲ್ಲಿ ಕಿಶನ್ ಬಿಳಗಲಿ;ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ

ಶಿವನ ಅವತಾರದಲ್ಲಿ ಕಿಶನ್ ಬಿಳಗಲಿ;ಡ್ಯಾನ್ಸ್ ನೋಡಿ ಫ್ಯಾನ್ಸ್ ಫಿದಾ

ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ‘ಲಕ್ಷ್ಮಿ ನಿವಾಸ’ ಧಾರವಾಹಿಯ ನಟಿ ದಿಶಾ ಮದನ್ ಅವರ ಶಿವರಾತ್ರಿ ವಿಶೇಷ ಡ್ಯಾನ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಶಿವನ ಅವತಾರದಲ್ಲಿ ಕಾಣಿಸಿಕೊಂಡಿರುವ ಕಿಶನ್, ಪರಶಿವನ ಭಕ್ತಿಯ ಪರಾಕಾಷ್ಠೆಯನ್ನು ತಮ್ಮ ನೃತ್ಯದ ಮೂಲಕ ಅನಾವರಣಗೊಳಿಸಿದ್ದಾರೆ. ಅದರಲ್ಲೂ ಇತ್ತೀಚೆಗೆ ವೈರಲ್ ಆಗುತ್ತಿರುವ ‘ಏಳಮ್ಮಾ ತುಳಸಿ’ ಹಾಡಿಗೆ ಈ ಜೋಡಿ ಹಾಕಿರುವ ಹೆಜ್ಜೆಗಳು ಅಭಿಮಾನಿಗಳ ಮನಗೆದ್ದಿವೆ.

ಕಳೆದ ವರ್ಷ ನಮ್ರತಾ ಗೌಡ ಜೊತೆ ಶಿವ-ಪಾರ್ವತಿಯರಾಗಿ ಮಿಂಚಿದ್ದ ಕಿಶನ್, ಈ ಬಾರಿ ದಿಶಾ ಮದನ್ ಜೊತೆಗೂಡಿ ಅದ್ಭುತವಾದ ನೃತ್ಯ ಸಂಯೋಜನೆ ಮಾಡಿದ್ದಾರೆ. ಕೇವಲ ನೃತ್ಯ ಮಾತ್ರವಲ್ಲದೆ, ಈ ದೃಶ್ಯಗಳ ತೆರೆಹಿಂದಿನ ಪರಿಶ್ರಮದ ವಿಡಿಯೋ ಕೂಡ ಹಂಚಿಕೊಂಡಿರುವ ಕಿಶನ್ ಅವರ ಹಾರ್ಡ್‌ವರ್ಕ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ. ಕನ್ನಡದ ಬಿಗ್ ಬಾಸ್ ಮಾತ್ರವಲ್ಲದೆ ಹಿಂದಿಯ ‘ಡ್ಯಾನ್ಸ್ ದಿವಾನೆ’ ವಿನ್ನರ್ ಕೂಡ ಆಗಿರುವ ಕಿಶನ್ ಮತ್ತು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಿಂಚಿದ್ದ ದಿಶಾ ಮದನ್ ಅವರ ಈ ಜುಗಲ್‌ಬಂದಿ ಈಗ ಶಿವರಾತ್ರಿ ಸಂಭ್ರಮಕ್ಕೆ ಹೊಸ ಕಳೆ ತಂದಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments