Sunday, March 1, 2026
30.5 C
Bengaluru
Google search engine
LIVE
ಮನೆ#Exclusive NewsTop News30 ಬಾಂಬ್‌ ದಾಳಿಗೆ ಖಮೇನಿ ಉಡೀಸ್; ಮತ್ತೆ ಬರುತ್ತಾ ರಾಜಮನೆತನದ ಆಡಳಿತ?

30 ಬಾಂಬ್‌ ದಾಳಿಗೆ ಖಮೇನಿ ಉಡೀಸ್; ಮತ್ತೆ ಬರುತ್ತಾ ರಾಜಮನೆತನದ ಆಡಳಿತ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಜಂಟಿ ಕಾರ್ಯಾಚರಣೆಯಲ್ಲಿ ಹೊಡೆದುರುಳಿಸಲಾಗಿದೆ ಎಂದು ಘೋಷಿಸಿದ ಬೆನ್ನಲ್ಲೇ, ಇರಾನ್ ಸರ್ಕಾರ ಮತ್ತು ಇಡೀ ಇರಾನ್ ಸ್ತಬ್ಧವಾಗಿದ್ದು, ಸರ್ಕಾರವು ದೇಶಾದ್ಯಂತ 40 ದಿನಗಳ ಕಾಲ ಸುದೀರ್ಘ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಈ ಭೀಕರ ಕ್ಷಿಪಣಿ ದಾಳಿಯಲ್ಲಿ ಕೇವಲ ಖಮೇನಿ ಮಾತ್ರವಲ್ಲದೆ, ಅವರ ಮಗಳು ಮತ್ತು ಮೊಮ್ಮಕ್ಕಳು ಕೂಡ ಪ್ರಾಣ ಕಳೆದುಕೊಂಡಿರುವುದು ದೃಢಪಟ್ಟಿದೆ.

ಖಮೇನಿಯನ್ನು ಹತ್ಯೆ ಮಾಡಲು ಇಸ್ರೇಲ್ ಮತ್ತು ಅಮೆರಿಕ ಅತ್ಯಂತ ವ್ಯವಸ್ಥಿತವಾದ ರಣತಂತ್ರವನ್ನು ರೂಪಿಸಿದ್ದವು ಎಂಬ ಅಂಶಗಳು ಈಗ ಹೊರಬರುತ್ತಿವೆ. ಮೊದಲ ಹಂತದ ದಾಳಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಏಳು ಕ್ಷಿಪಣಿಗಳನ್ನು ಉಡಾಯಿಸಿದ್ದವು, ಆದರೆ ಆ ಸಮಯದಲ್ಲಿ ಟೆಹ್ರಾನ್ ಕಚೇರಿಯಲ್ಲಿದ್ದ ಖಮೇನಿಯನ್ನು ಇರಾನ್ ಭದ್ರತಾ ಪಡೆಗಳು ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದವು. ಇದರಿಂದ ಮೊದಲ ಪ್ರಯತ್ನ ವಿಫಲವಾದರೂ, ಬಿಗಿ ಭದ್ರತೆಯ ನಡುವೆಯೂ ಇಸ್ರೇಲ್ ಪಡೆಗಳು ಖಮೇನಿಯ ಪ್ರತಿ ನಡೆಯನ್ನು ಹಿಂಬಾಲಿಸುತ್ತಿದ್ದವು.

ಅಂತಿಮವಾಗಿ ನಿನ್ನೆ ಇರಾನ್ ವಾಯುಪ್ರದೇಶಕ್ಕೆ ನುಗ್ಗಿದ ಇಸ್ರೇಲ್ ಯುದ್ಧ ವಿಮಾನಗಳು ಖಮೇನಿ ಅಡಗಿದ್ದ ನಿವಾಸದ ಮೇಲೆ ಬರೋಬ್ಬರಿ 30 ಬಾಂಬ್‌ಗಳನ್ನು ಹಾಕಿ ದಾಳಿ ನಡೆಸಿವೆ. ಆ ಸಮಯದಲ್ಲಿ ಖಮೇನಿ ಅವರು ತಮ್ಮ ಉನ್ನತ ಸಹಾಯಕರಾದ ರಾಷ್ಟ್ರೀಯ ಭದ್ರತಾ ಮಂಡಳಿಯ ಮಾಜಿ ಕಾರ್ಯದರ್ಶಿ ಅಲಿ ಶಮ್ಖಾನಿ ಮತ್ತು ಐಆರ್‌ಜಿಸಿ ಕಮಾಂಡರ್ ಮೊಹಮ್ಮದ್ ಪಾಕ್‌ಪೂರ್ ಅವರೊಂದಿಗೆ ಅತಿ ಮುಖ್ಯವಾದ ಸಭೆ ನಡೆಸುತ್ತಿದ್ದರು. ಅನಿರೀಕ್ಷಿತವಾಗಿ ನಡೆದ ಈ ಭೀಕರ ಬಾಂಬ್ ದಾಳಿಯಿಂದಾಗಿ ಸುಪ್ರೀಂ ಲೀಡರ್ ಖಮೇನಿ ಸ್ಥಳದಲ್ಲೇ ಹತ್ಯೆಗೀಡಾಗಿದ್ದಾರೆ.

ಇಸ್ಲಾಂ ಮೂಲಭೂತವಾದದ ಕಟ್ಟಾ ಪ್ರತಿಪಾದಕನಾಗಿದ್ದ ಖಮೇನಿ ಅವರ ಸರ್ವಾಧಿಕಾರವನ್ನು ಅಂತ್ಯಗೊಳಿಸಿ, ಇರಾನ್‌ನಲ್ಲಿ ಹೊಸ ಪ್ರಜಾಪ್ರಭುತ್ವ ಅಥವಾ ಪರ್ಯಾಯ ಸರ್ಕಾರವನ್ನು ಸ್ಥಾಪಿಸುವುದು ಇಸ್ರೇಲ್ ಪ್ರಧಾನಿಯ ಗುರಿಯಾಗಿತ್ತು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಇರಾನ್‌ನ ಯುವರಾಜ ರೇಜಾ ಪೆಹಲ್ವಿಯನ್ನು ಅಧಿಕಾರಕ್ಕೆ ತರಲು ಇಸ್ರೇಲ್ ಈಗಾಗಲೇ ನಿರ್ಧಾರ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ಮೂಲಕ ರಾಜಮನೆತನದ ಹಿಡಿತವನ್ನು ತಪ್ಪಿಸಿದ್ದ ಖಮೇನಿ ಆಡಳಿತವನ್ನು ಅಂತ್ಯಗೊಳಿಸಿ, ಮತ್ತೆ ದೇಶವನ್ನು ಹಳೆಯ ರಾಜಮನೆತನದ ಸುಪರ್ದಿಗೆ ಒಪ್ಪಿಸಲು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಈ ಬೃಹತ್ ರಣತಂತ್ರವನ್ನು ಯಶಸ್ವಿಗೊಳಿಸಿವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments