ಸಿನಿಮಾ

KD ‘ನುಗ್ಗಿ ಹೊಡಿ’ ಸಾಂಗ್ ಧಮಾಕಾ!

ಸ್ಯಾಂಡಲ್‌ವುಡ್‌ನಲ್ಲಿ ಈಗ ಜೋಗಿ ಪ್ರೇಮ್ ನಿರ್ದೇಶನದ ‘KD’ ಸಿನಿಮಾದ ಹವಾ ಜೋರಾಗಿದ್ದು, ಬಹುನಿರೀಕ್ಷಿತ ‘ನುಗ್ಗಿ ಹೊಡಿ’ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ . ಶಂಕರ್ ಮಹದೇವನ್ ಅವರ ಗಾಯನ, ಅರ್ಜುನ್ ಜನ್ಯ ಅವರ ಸಂಗೀತ ಹಾಗೂ ಪ್ರೇಮ್ ಅವರ ಸಾಹಿತ್ಯದ ಈ ಅಲ್ಟಿಮೇಟ್ ಕಾಂಬಿನೇಷನ್ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಈ ಚಿತ್ರವು ವಿಂಟೇಜ್ ಕಾಲದ ಮಾಸ್ ಕಥೆಯನ್ನು ಹೊಂದಿದ್ದು, ಈಗಾಗಲೇ ಈ “ಅಲ್ಟಿಮೇಟ್ ಟ್ರಿಯೋ” ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಶಂಕರ್ ಮಹದೇವನ್ ಅವರ ಪವರ್‌ಫುಲ್ ಕಂಠದಲ್ಲಿ ಮೂಡಿಬಂದಿರುವ ಈ ಹಾಡು ಸ್ಯಾಂಡಲ್‌ವುಡ್ ಮ್ಯೂಸಿಕ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸುವುದು ಖಚಿತವಾಗಿದೆ.

ಸದ್ಯ ಈ ಹಾಡಿನ ಬಿಡುಗಡೆಯೊಂದಿಗೆ ‘KD’ ಚಿತ್ರತಂಡ ಸಿನಿಮಾ ಪ್ರಚಾರಕ್ಕೆ ಹೊಸ ವೇಗ ನೀಡಿದ್ದು, ಅಭಿಮಾನಿಗಳು ಸಾಂಗ್ ಲಾಂಚ್‌ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ ಈ ವರ್ಷದ ಬಿಗ್ ಮ್ಯೂಸಿಕ್ ಹಿಟ್ ಲಿಸ್ಟ್‌ಗೆ ಈ ಹಾಡು ಸೇರ್ಪಡೆಯಾಗಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ.

Comments (0)

Your email address will not be published. Required fields are marked *

Back to top button