ಕೊಪ್ಪಳ : ಜಿಲ್ಲೆಯ ಹಲವಡೆ ಬರದ ನಡುವೆ ಕೂಡಾ ಬಣ್ಣದಾಟ. ಜಿಲ್ಲೆಯಲ್ಲಿ ಹೋಳಿ ಆಚರಣೆಯಲ್ಲಿ ಗೊಂದಲ ಎದುರಾಗಿದ್ದು ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯ ಕೆಲ ಭಾಗಗಳಲ್ಲಿ ಇಂದೇ ಹೋಳಿ ಆಚರಣೆ ಮಾಡಲಾಯಿತು. ಕೆಲ ಭಾಗಗಳಲ್ಲಿ ನಾಳೆ ಹೋಳಿ ಆಚರಣೆ ಮಾಡಲಾಗುವುದು.
ನಗರ ಸೇರಿದಂತೆ ಕೆಲ ಭಾಗಗಳಲ್ಲಿ ಬೆಳಿಗ್ಗೆಯಿಂದಲೇ ಹೋಳಿ ಹುಣ್ಣಿಮೆ ಅಂಗವಾಗಿ ಬಣ್ಣದಾಟ ಶುರುವಾಗಿದೆ. ಬಣ್ಣಗಳೊಂದಿಗೆ ಹೋಳಿಯಲ್ಲಿ ಮಕ್ಕಳು, ಯುವಕರು ಪಾಲ್ಗೊಂಡಿದ್ದಾರೆ. ಪರಸ್ಪರ ಬಣ್ಣ ಎರಚಿಕೊಂಡು ಜನರು ಸಂಭ್ರಮಿಸುತ್ತಿದ್ದಾರೆ. ಮಕ್ಕಳು ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸುತ್ತಿದ್ದಾರೆ. ಹೋಳಿ ಆಚರಣೆಯಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಬಸವರಾಜ ಭಾಗಿಯಾಗಿ ಜನರಿಗೆ ಬಣ್ಣ ಹಚ್ಚಿ, ಡ್ಯಾನ್ಸ್ ಮಾಡಿದರು.