Thursday, November 20, 2025
21.7 C
Bengaluru
Google search engine
LIVE
ಮನೆಧರ್ಮಕಾಶಿಯಲ್ಲಿ ಪೊಲೀಸ್ರ್ಯಾಕೆ ಅರ್ಚಕರಾದ್ರು..?

ಕಾಶಿಯಲ್ಲಿ ಪೊಲೀಸ್ರ್ಯಾಕೆ ಅರ್ಚಕರಾದ್ರು..?

ಕರ್ತವ್ಯದ ವೇಳೆಯಲ್ಲಿ ಪೊಲೀಸ್ರು ಖಾಕಿಯನ್ನು ಹೊರತುಪಡಿಸಿ ಬೇರೆ ಯಾವುದೇ ಬಣ್ಣದ ವಸ್ತ್ರವನ್ನು ಧರಿಸುವಂತಿಲ್ಲ.ಅಪ್ಪಿತಪ್ಪಿ ಧರಿಸಿದ್ರೆ ದೊಡ್ಡ ಭದ್ರತಾ ಅಪಾಯವನ್ನು ಉಂಟು ಮಾಡುತ್ತದೆ.

ಇದೀಗ ಈ ವಿಚಾರ ಭಾರೀ ಸುದ್ದಿಯಾಗಿದ್ದೂ, ಅಖಿಲೇಶ್ ಯಾದವ್ ಎಕ್ಸ್ ಪೋಸ್ಟ್​ನಲ್ಲಿ ಈ ಕುರಿತು ಪ್ರಶ್ನಿಸಿದ್ದಾರೆ. ಯಾವ ಪೊಲೀಸ್ ನಿಯಮಗಳ ಪ್ರಕಾರ ಪೊಲೀಸರು ಅರ್ಚಕರ ವೇಷ ಧರಿಸುವುದು ಸರಿ? ಇಂತಹ ಆದೇಶ ನೀಡುವವರನ್ನು ಅಮಾನತು ಮಾಡಬೇಕು. ನಾಳೆ ಯಾವುದಾದರೂ ವಂಚಕ ಇದರ ಲಾಭ ಪಡೆದು ಅಮಾಯಕ ಸಾರ್ವಜನಿಕರನ್ನು ಲೂಟಿ ಮಾಡಿದರೆ ಏನಾಗುತ್ತದೆ? ಇದಕ್ಕೆ ಯುಪಿ ಸರ್ಕಾರ ಮತ್ತು ಆಡಳಿತವೇ ಉತ್ತರಿಸಬೇಕು ಎಂದು ಬರೆದುಕೊಂಡಿದ್ದಾರೆ.

ಅಖಿಲೇಶ್​ ಅವರು ಹಂಚಿಕೊಂಡಿರುವ ತಮ್ಮ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಪೊಲೀಸ್ ಅಧಿಕಾರಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವುದನ್ನು ಕಾಣಬಹುದಾಗಿದೆ. ಪುರುಷ ಅಧಿಕಾರಿಗಳು ಧೋತಿ-ಕುರ್ತಾ ಧರಿಸಿದರೆ, ಮಹಿಳಾ ಪೊಲೀಸರು ಸಲ್ವಾರ್ ಕುರ್ತಾ ಧರಿಸಿರುವುದನ್ನು ಕಾಣಬಹುದಾಗಿದೆ.

ಈ ರೀತಿಯ ವಿವಾದಾತ್ಮಕ ನಿರ್ಧಾರವನ್ನು ವಾರಣಾಸಿ ಪೊಲೀಸ್ ಕಮಿಷನರ್ ಮೋಹಿತ್ ಅಗರ್ವಾಲ್ ಸಮರ್ಥಿಸಿಕೊಂಡಿದ್ದಾರೆ. ಜನಸಂದಣಿ ನಿರ್ವಹಣೆ, ಕಳ್ಳತನ ಮತ್ತು ಭಕ್ತರ ಯೋಗಕ್ಷೇಮದ ಬಗ್ಗೆ ಈ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿಕೆ ನೀಡಿದ್ರು. ಪುರೋಹಿತರ ಸಾಂಪ್ರದಾಯಿಕ ಉಡುಗೆಯು ಯಾತ್ರಾರ್ಥಿಗಳೊಂದಿಗೆ ಒಳ್ಳೆಯ ಸಂಪರ್ಕವನ್ನು ಬೆಳೆಸುತ್ತದೆ, ಅಶಾಂತಿ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಮ್ಮ ಇಲಾಕೆಯ ಬಗ್ಗೆ ವಾದಿಸಿಕೊಂಡರು.

ಡಯಾನ ಹೆಚ್ ಆರ್, ಫ್ರೀಡಂ ಟಿವಿ

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments