ಬೆಂಗಳೂರು : ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾರಂಗದಲ್ಲಿ ತಮ್ಮದೇ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಸಂದ ಗೌರವ ಈ ಪದ್ಮ ವಿಭೂಷಣ ಅಂತಲೇ ಹೇಳಬಹುದು. 68 ವರ್ಷದ ಮೆಗಾ ಸ್ಟಾರ್ ಚಿರಂಜೀವಿ, ಪದ್ಮ ವಿಭೂಷಣ ಪ್ರಶಸ್ತಿಯನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಸ್ವೀಕರಿಸಿದ್ದಾರೆ. ಅಸಾಧಾರಣ ಮತ್ತು ವಿಶಿಷ್ಟ ಸೇವೆಗಾಗಿಯೇ ಈ ಒಂದು ಪ್ರಶಸ್ತಿಯನ್ನ ಕೊಡಲಾಗುತ್ತದೆ.
ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ 2006 ರಲ್ಲಿ ಪದ್ಮಭೂಷಣ ಪ್ರಶಸ್ತಿ ಕೊಡಲಾಗಿದೆ. ಇದೀಗ 2024 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ ಚಿರಂಜೀವಿ ಸಿನಿ ಜರ್ನಿಗೆ ಮತ್ತೊಂದು ಗೌರವ ಸಿಕ್ಕಂತೆ ಆಗಿದೆ.
ಬಹುಭಾಷಾ ನಟಿ ವೈಜಯಂತಿಮಾಲಾ ಅವಿಗೆ ಪದ್ಮವಿಭೂಷಣ ಗೌರವ.!
ಬಾಲಿವುಡ್, ಟಾಲಿವುಡ್, ಕಾಲಿವುಡ್ ಹೀಗೆ ಬಹು ಭಾಷೆಯಲ್ಲಿ ಹೆಸರು ಮಾಡಿರೋ ಹಿರಿಯ ನಟಿ ವೈಜಯಂತಿಮಾಲಾ ಅವರಿಗೂ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮೂಲಕ 90 ವರ್ಷದ ನಟಿ ವೈಜಯಂತಿಮಾಲಾ ಅವರು ಸಿನಿಮಾ ರಂಗದಲ್ಲಿ ಮಾಡಿರೋ ವಿಶಿಷ್ಟ ಸೇವೆಗಾಗಿಯೇ ಈ ಒಂದು ಪ್ರಶಸ್ತಿ ನೀಡಿ ಗೌರವಿಸಲಾಗಿದೆ.