ರಾಯಚೂರು: ರಾಯಚೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ರಾತ್ರಿಯಿಂದ ನಸುಕಿನವರೆಗೂ ಭಾರೀ ಮಳೆ ಸುರಿದಿದ್ದು, ಮಾರಾಟಕ್ಕೆ ತಂದ ಭತ್ತದ ಬೆಳೆ ನೀರು ಪಾಲಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಕಳೆದ ಎರಡು ತಿಂಗಳನಿಂದ ಬಿಸಿಲಿನ ತಾಪಕ್ಕೆ ತತ್ತರಿಸಿದ ರಾಯಚೂರು ಜಿಲ್ಲೆಯಲ್ಲಿ ಭಾನುವಾರ ರಾತ್ರಿಯಿಂದ ಮಳೆಯಾಗಿದೆ. ರಾಯಚೂರು ನಗರದ ರಾಜೇಂದ್ರ ಗಂಜ್‌ನಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ರೈತರು ಮಾರಾಟಕ್ಕೆ ತಂದಿದ್ದ ಭತ್ತಕ್ಕೆ ಹಾನಿಯಾಗಿದೆ. ಟೆಂಡರ್ ಆಗದೆ ಉಳಿದಿದ್ದ ಭತ್ತ ಮತ್ತು ಟೆಂಡರ್ ಆದ ನಂತರ ರೈಸ್ ಮಿಲ್ ತೆಗೆದುಕೊಂಡು ಹೋಗದೆ ಪ್ರಾಂಗಣದಲ್ಲಿ ಹಾಕಲಾಗಿತ್ತು. ಧಾರಾಕಾರ ಮಳೆಯಿಂದಾಗಿ ಆ ಪ್ರದೇಶಕ್ಕೆ ಮಳೆ ನೀರು ನುಗ್ಗಿದೆ. ಇದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದ್ದು, ಸಂಕಷ್ಟಕ್ಕೆ ಸಿಲುಕಿಸಿದೆ.