16 ವರ್ಷದ ಕಾಮ್ಯ ಕಾರ್ತಿಕೇಯನ್ ಮೌಂಟ್ ಎವರೆಸ್ಟ್ (8,849 ಮೀಟರ್) ಏರಿದ ವಿಶ್ವದ ಎರಡನೇ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಮುಂಬೈನ ನೇವಿ ಚಿಲ್ಡ್ರನ್ಸ್ ಸ್ಕೂಲ್ ನಲ್ಲಿ 12ನೇ ತರಗತಿ ಓದುತ್ತಿರುವ ಕಾಮ್ಯಾ, ಸೋಮವಾರ, ತನ್ನ ತಂದೆ ಕಮಾಂಡರ್ ಎಸ್. ಕಾರ್ತಿಕೇಯನ್, ನೌಕಾಪಡೆಯ ಅಧಿಕಾರಿಯೊಂದಿಗೆ ಮೌಂಟ್ ಎವರೆಸ್ಟ್ ಶಿಖರವನ್ನು ತಲುಪಿದ್ದಾಳೆ. ಇದೀಗ ಇವರ ಸಾಧನೆಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
ಕಾಮ್ಯ ಮೂರು ವರ್ಷ ವಯಸ್ಸಿನಲ್ಲೇ ಟ್ರೆಕ್ಕಿಂಗ್ ಪ್ರಾರಂಭಿಸಿದ್ದಳು, ತನ್ನ ತಂದೆಯಿಂದಲೇ ಪ್ರೇರೇಪಿತಳಾದ ಕಾಮ್ಯ ಬಾಲ್ಯದಿಂದಲೇ ಟ್ರೆಕ್ಕಿಂಗ್ನಲ್ಲಿ ಆಸಕ್ತಿಯನ್ನು ಹೊಂದಿದ್ದಾಳೆ. ಇಲ್ಲಿಯವರೆಗೆ ಹರ್-ಕಿ ಡನ್ (13,500 ಅಡಿ), ಕೇದಾರಕಾಂತ ಶಿಖರ (13,500 ಅಡಿ) ಮತ್ತು ರೂಪ್‌ಕುಂಡ್ ಸರೋವರ (16,400 ಅಡಿ) ಸೇರಿದಂತೆ ಹಲವು ಶಿಖರಗಳನ್ನು ಏರಿದ್ದಾರೆ. ಮೇ 2017 ರಲ್ಲಿ, ಕಾಮ್ಯಾ ಅವರು ಎವರೆಸ್ಟ್ ಬೇಸ್ ಕ್ಯಾಂಪ್ (17,600 ಅಡಿ) ಪಾದಯಾತ್ರೆ ಮಾಡಿದಾಗ ಹೊಸ ಮೈಲಿಗಲ್ಲನ್ನು ತಲುಪಿದರು, 13 ನೇ ವಯಸ್ಸಿನಲ್ಲಿ ಈ ಸಾಧನೆಯನ್ನು ಪೂರ್ಣಗೊಳಿಸಿದ ಇತಿಹಾಸದಲ್ಲಿ ಎರಡನೇ ಕಿರಿಯ ಬಾಲಕಿ.
ಕಾಮ್ಯ ಕಾರ್ತಿಕೇಯನ್ ಸಾಧನೆಯನ್ನು ಗುರುತಿಸಿದ ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಈ ಬಾಲಕಿಯ ಸಾಧನೆಯ ಬಗ್ಗೆ ಮಾತನಾಡಿದ್ದರು. ಇದಲ್ಲದೇ ಈ ಬಾಲಕಿ 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾಳೆ.