ಧಾರವಾಡ : ಸರಿಯಾದ ದಾಖಲೆ ಇಲ್ಲದ 300 ಸೀರೆಗಳನ್ನು ಪೋಲಿಸರು ವಶಕ್ಕೆ ಪಡೆದಿರುವಂತಹ ಘಟನೆ ಧಾರವಾಡ ಜಿಲ್ಲೆಯ ತೇಗೂರು ಚೆಕ್ ಪೋಸ್ಟ್ ಬಳಿ ನಡೆದಿದೆ. ಲೋಕಸಭಾ ಚುನಾವಣೆಯ ಹಿನ್ನಲೆ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲಾ ವಾಹನಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಲಾಗ್ತಾ ಇದೆ.
ಸಧ್ಯ KA 22 Z 8098 ಮಾರುತಿ ಓಮಿನಿ ಕಾರಿನಲ್ಲಿ ದಾಖಲೆ ಇಲ್ಲದ ಸೀರೆಗಳನ್ನು ಪ್ರಶಾಂತ್ ಸಾಗಿಸುತ್ತಿದ್ದ ಎಂಬುದು ತಿಳಿದು ಬಂದಿದೆ. ಸಧ್ಯ ಚೆಕ್ ಪೋಸ್ಟ್ ಪೋಲಿಸರು ವಾಹನ ಮತ್ತು 300 ಸೀರೆಗಳನ್ನ ವಶಕ್ಕೆ ಪಡೆದಿದ್ದಾರೆ.