ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್ಸಿಬಿ ಮ್ಯಾಚ್ ವೀಕ್ಷಣೆಗೆ ಬರುವ ಕ್ರಿಕೆಟ್ ಪ್ರೇಮಿಗಳಿಗೆ ಬಿಎಂಟಿಸಿ ಗುಡ್ನ್ಯೂಸ್ ನೀಡಿದೆ.
ಮಾರ್ಚ್ 22, 25, 29 ಮತ್ತು ಏಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಪಂದ್ಯಗಳು ನಡೆಯಲಿವೆ. 12 ಮಾರ್ಗಗಳಿಗೆ ಮಧ್ಯರಾತ್ರಿ 1 ಗಂಟೆವೆರೆಗೆ ವಿಶೇಷ ಬಸ್ ಸೇವೆಯನ್ನು ಆರಂಭಸಿದೆ.
ಬಿಎಂಟಿಸಿ ವತಿಯಿಂದ ಐಪಿಎಲ್ ಮ್ಯಾಚ್ ನೋಡಲು ಹೋಗುವವರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಎಲ್ಲಾ ಐಪಿಎಲ್ ಮ್ಯಾಚ್ಗಳಿಗೂ ವಿಶೇಷ ಬಿಎಂಟಿಸಿ ಸೇವೆ ನೀಡುತ್ತಿದೆ.