ಹುಬ್ಬಳ್ಳಿ : ಸಚಿವ ಸಂತೋಷ್ ಲಾಡ್ ಅವರು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ತರಹ ಮಾತನಾಡುತ್ತಿದ್ದಾರೆ. ಅವರು ಸ್ವಲ್ಪ ಪ್ರಬುದ್ಧತೆಯಿಂದ ಮಾತನಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಂತೋಷ್​​ ಲಾಡ್​ಗೆ ತಿರುಗೇಟು ನೀಡಿದರು.

ಸಂತೋಷ್ ಲಾಡ್ ಅವರು ರಾಮಮಂದಿರ ಕಟ್ಟಿದರೆ ಬಡತನ ನಿರ್ಮೂಲನೆ ಆಗೋಲ್ಲ ಎಂಬ ಹೇಳಿಕೆಗೆ ನಗರದಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಂತೋಷ್ ಲಾಡ್ ಅವರು ಸುಪ್ರೀಂ ಕೋರ್ಟ್ ಮೇಲಿದ್ದಾರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ನಾಯಕರಿಗೆ ಏನಾಗಿದೆ ಎಂಬುದು ಅರ್ಥವಾಗುತ್ತಿಲ್ಲ. ಮನುಷ್ಯನಿಗೆ ಶ್ರದ್ಧೆ, ಸ್ವಾಭಿಮಾನ, ಆತ್ಮಾಭಿಮಾನ ಮುಖ್ಯ. ಅಪಮಾನವನ್ನು ಯಾರು ಸಹಿಸೋಲ್ಲ. ಚರ್ಚ್ ಮಸೀದಿ ಕಟ್ಟುವುದರಿಂದ ಬಡತನ ನಿವಾರಣೆ ಆಗುತ್ತಾ ಎಂದು ಕೇಳಬೇಕು. ಅವರ ಹೊಟ್ಟೆಯಲ್ಲಿ ಹಿಂದುಗಳು ಹಾಗೂ ರಾಮ ಬಗ್ಗೆ ಕಿಚ್ಚು ಏಕೆ..?. ಅಪ್ರಬುದ್ಧ ಹೇಳಿಕೆ ಏಕೆ ನೀಡುತ್ತಿದ್ದಾರೆ ಗೊತ್ತಾಗುತ್ತಿಲ್ಲ‌. ಹಿಂದೂ ವಿರೋಧಿ ನೀತಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಹರಿಹಾಯ್ದರು.

ಇನ್ನೂ ಇದೇ ವೇಳೆ ಹಳೇ ಹುಬ್ಬಳ್ಳಿ ಗಲಭೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಹಳೇ ಹುಬ್ಬಳ್ಳಿ ಗಲಭೆಕೋರರನ್ನು ಅಮಾಯಕರು ಅಂತ ಯಾರು ಹೇಳಿದ್ದು?, ನ್ಯಾಯಾಲಯದಲ್ಲಿ ಸರ್ಕಾರ ಸರಿಯಾಗಿ ವಾದ ಮಂಡಿಸಿಲ್ಲ. ಪರೋಕ್ಷವಾಗಿ ಜಾಮೀನಿಗೆ ಸರ್ಕಾರ ಸಮ್ಮಿತಿ ನೀಡಿದೆ. ಆದರೆ ಮುಂದೆ ಇಂತಹ ಘಟನೆ ನಡೆದಾಗ ಅವರಿಗೆ ಗೊತ್ತಾಗುತ್ತದೆ. ಜೊತೆಗೆ ರಾಜ್ಯ ಸರ್ಕಾರ ಶಾಲೆಗಳಲ್ಲಿ ಕೆಲವು ನಿಗದಿತ ಆಚರಣೆಯ ಸುತ್ತೋಲೆ ಹಾಗೂ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಬದಲಾವಣೆ ಕುರಿತು ಉತ್ತರಿಸಿದ ಅವರು, ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಬದಲಾವಣೆ ವಿಚಾರ, ಇದು ಸರ್ಕಾರದ ಮೂರ್ಖತನದ ವರ್ತನೆಯಾಗಿದೆ. ಇದು ಕಾಂಗ್ರೆಸ್ ಸರ್ಕಾರದ ತುಷ್ಠಿಕರಣ ಪರಮಾವಧಿ. ಇದು ರಾಷ್ಟ್ರಕವಿ ಕುವೆಂಪು ಅವರಿಗೆ ಮಾಡಿರುವ ಅಪಮಾನ. ಹಾಗಿದ್ದರೇ ಇವರು ನಡೆಯಲ್ಲಿ ಕುವೆಂಪು ಅವರು ಜಾತ್ಯಾತೀತ ವ್ಯಕ್ತಿ ಅಲ್ವಾ ಎಂಬ ಪ್ರಶ್ನೆ ಮೂಡಿಸುತ್ತಿದೆ ಎಂದು ಕಿಡಿಕಾರಿದರು.‌

By admin

Leave a Reply

Your email address will not be published. Required fields are marked *

Verified by MonsterInsights