ಸಿನಿಮಾ

ಲಾಂಗ್ ಹಿಡಿದು ಪೋಸ್ ನೀಡಿದ ‘ಜೆಸಿ’ ನಟನಿಗೆ ಸಂಕಷ್ಟ: ಸೂರ್ಯ ಪ್ರಖ್ಯಾತ್ ವಿರುದ್ಧ ಕೇಸ್ ದಾಖಲು!

ಚಿತ್ರಮಂದಿರದಲ್ಲಿ ಲಾಂಗ್ ಹಿಡಿದು ಪೋಸ್ ನೀಡಿದ ಜೆಸಿ ಸಿನಿಮಾ ನಟ ಸೂರ್ಯ ಪ್ರಖ್ಯಾತ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೋವಿಂದರಾಜ ನಗರ ಪೊಲೀಸರು ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಸೂರ್ಯ ಪ್ರಖ್ಯಾತ್ ನಟನೆಯ ‘ಜೆಸಿ’ ಸಿನಿಮಾ ಬಿಡುಗಡೆಯಾಗಿತ್ತು. ಈ ಸಂಭ್ರಮದ ಸಮಯದಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ನಟ ಸೂರ್ಯ, ಅಭಿಮಾನಿಗಳ ಜೊತೆ ಸೇರಿ ಸಿನಿಮಾ ವೀಕ್ಷಿಸಿದ್ದರು. ಈ ವೇಳೆ ಅಭಿಮಾನಿಗಳ ಮಧ್ಯೆ ನಿಂತು ಲಾಂಗ್ ಹಿಡಿದು ಪೋಸ್ ನೀಡಿದ್ದರು. ಅಭಿಮಾನಿಗಳು ಈ ದೃಶ್ಯವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು, ಅದು ವೈರಲ್ ಆಗಿತ್ತು.

ಸಾರ್ವಜನಿಕವಾಗಿ ಮಾರಕಾಸ್ತ್ರ ಪ್ರದರ್ಶನ ಮಾಡಿರುವುದು ಕಾನೂನು ಬಾಹಿರವಾದ್ದರಿಂದ, ಪೊಲೀಸರು ವಿಡಿಯೋ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ. ಸದ್ಯ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಟ ಸೂರ್ಯ ಪ್ರಖ್ಯಾತ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇದರಿಂದಾಗಿ ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿದ್ದ ನಟನಿಗೆ ಈಗ ಪೊಲೀಸ್ ವಿಚಾರಣೆಯ ಭೀತಿ ಎದುರಾಗಿದೆ.

Comments (0)

Your email address will not be published. Required fields are marked *

Back to top button