2024 ರ IPL ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಕೆಕೆಆರ್ ಗೆದ್ದು ಬೀಗಿದೆ. ಈ ಮೂಲಕ ಮೂರನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ 18.3 ಓವರ್ನಲ್ಲಿ ಕೇವಲ 113 ರನ್ಗಳಿಗೆ ಆಲೌಟ್ ಆಗಿತ್ತು. ಇನ್ನು ಹೈದ್ರಾಬಾದ್ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಕೆಕೆಆರ್ ಕೇವಲ 10.3 ಓವರ್ ನಲ್ಲಿ 114 ರನ್ ಗಳಿಸುವ ಮೂಲಕ ಗೆದ್ದುಬೀಗಿದೆ..
ರಹ್ಮಾನುಲ್ಲಾ ಗುರ್ಬಾರ್ಜ್ 39 ರನ್ ಗಳಿಸಿದರು.. ವೆಂಕಟೇಶ್ ಅಯ್ಯರ್ 26 ಬಾಲ್ನಲ್ಲಿ, ಮೂರು ಸಿಕ್ಸರ್,ನಾಲ್ಕು ಫೋರ್ ಸಮೇತ 52 ರನ್ ಗಳಿಸಿ ಕೆಕೆಆರ್ ತಂಡವನ್ನು ಗೆಲ್ಲಿಸಿದರು
ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೆಕೆಆರ್ ಮೊದಲ ಎರಡು ಪ್ರಶಸ್ತಿಗಳನ್ನು ( 2012 ಹಾಗೂ 2014 ) ಗೆದ್ದಿತ್ತು. ಈಗ 2024ರಲ್ಲಿ ಕೆಕೆಆರ್ ಪ್ರಶಸ್ತಿ ಗೆದ್ದಾಗ ಗೌತಮ್ ಗಂಭೀರ್ ತಂಡದ ಮೆಂಟರ್ ಆಗಿದ್ದಾರೆ.ತಂಡದ ನಾಯಕತ್ವ ಶ್ರೇಯಸ್ ಅಯ್ಯರ್ ಕೈಯಲ್ಲಿತ್ತು.. ಈ ಮೂಲಕ ಈ ವರ್ಷ ಚಾಂಪಿಯನ್ ಆಗಿದ್ದಾರೆ.
ಐಪಿಎಲ್ 2024ರ ಒಟ್ಟು ಬಹುಮಾನದ ಮೊತ್ತ ಬರೋಬರಿ 46.5 ಕೋಟಿ ಆಗಿದೆ. ವಿಜೇತರು ಮತ್ತು ರನ್ನರ್ ಅಪ್ ಮಾತ್ರವಲ್ಲದೆ ಪ್ಲೇ ಆಫ್ ಗೆ ಅರ್ಹತೆ ಪಡೆದ ತಂಡಗಳಿಗೂ ಬಹುಮಾನ ನೀಡಲಾಗುವುದು.
ಅಂದರೆ ಈ ವರ್ಷ ಕೊಲ್ಕತ್ತಾ ನೈಟ್ ರೈಡರ್ಸ್,ಸನ್ ರೈರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿಗೂ ಐಪಿಎಲ್ ಬಹುಮಾನದ ಮೊತ್ತ ದೊರಕಲಿದೆ..
ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಬರೋಬ್ಬರಿ 20 ಕೋಟಿ ಬಹುಮಾನದ ಮೊತ್ತವನ್ನು ಪಡೆದಿದೆ. ಹಾಗೆಯೇ ರನ್ನರ್ ಅಪ್ ಆಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ 13 ಕೋಟಿ ರೂಪಾಯಿ ಬಹುಮಾನದ ಮೊತ್ತವನ್ನು ಪಡೆದಿದೆ. ಮೂರನೇ ಸ್ಥಾನದಲ್ಲಿರುವ ತಂಡ ರಾಜಸ್ಥಾನ್ ರಾಯಲ್ಸ್ ಮಡಿಲಿಗೆ ಏಳು ಕೋಟಿ ರೂ ಹಾಗೂ ನಾಲ್ಕನೇ ಶ್ರೇಯಾಂಕದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6.5 ಕೋಟಿ ರೂ ದೊರಕಿದೆ.
ಇದರೊಂದಿಗೆ ಐಪಿಎಲ್ 2024ರಲ್ಲಿ ವಿಜೇತ ತಂಡಗಳೊಂದಿಗೆ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ.. ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ.. ಆರೆಂಜ್ ಮತ್ತು ಪರ್ಪಲ್ ಕ್ಯಾಪ್ ಗೆದ್ದ ಆಟಗಾರರಿಗೆ 15 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ..
ಈ ಬಾರಿ 15 ಪಂದ್ಯದಿಂದ ಬರೋಬ್ಬರಿ ದಾಖಲೆಯ 741 ರನ್ ಸಿಡಿಸಿರುವ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದು, ಪಂಜಾಬ್ ಕಿಂಗ್ಸ್ ಬೌಲರ್ ಹರ್ಷಲ್ ಪಟೇಲ್ 14 ಪಂದ್ಯದಿಂದ 24 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com