Wednesday, November 19, 2025
24.2 C
Bengaluru
Google search engine
LIVE
ಮನೆಜಿಲ್ಲೆಅಣ್ಣ ಸಿಎಂ ಆಗಬೇಕೆಂಬ ಮಾತನ್ನು ಅನೇಕ ಬಾರಿ ಹೇಳಿದ್ದೇನೆ; ಹೈಕಮಾಂಡ್ ತೀರ್ಮಾನವೇ ಅಂತಿಮ- ಡಿ.ಕೆ ಸುರೇಶ್​

ಅಣ್ಣ ಸಿಎಂ ಆಗಬೇಕೆಂಬ ಮಾತನ್ನು ಅನೇಕ ಬಾರಿ ಹೇಳಿದ್ದೇನೆ; ಹೈಕಮಾಂಡ್ ತೀರ್ಮಾನವೇ ಅಂತಿಮ- ಡಿ.ಕೆ ಸುರೇಶ್​

ಬೆಂಗಳೂರು: ಕಾಂಗ್ರೆಸ್​​​ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ಕುರಿತ ಚರ್ಚೆ ನಡೆಯುತ್ತಿದ್ದು, ಮಾಜಿ ಸಂಸದ ಡಿ.ಕೆ ಸುರೇಶ್​​​ ಅವರು ನೀಡಿದ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿವೆ..

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಣ್ಣ ಸಿಎಂ ಆಗಬೇಕು ಎಂಬ ಮಾತನ್ನು ನಾನು ಅನೇಕ ಬಾರಿ ಸ್ಪಷ್ಟವಾಗಿ ಹೇಳಿದ್ದಾನೆ. ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತೆ ಎಂದು ಕಾದು ನೋಡೋಣ ಎಂದು ಪರೋಕ್ಷವಾಗಿ ಸಹೋದರ ಡಿಕೆ ಶಿವಕುಮಾರ್ ಪರವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಡಿಕೆ ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಪುಟ ಪುನಾರಚನೆ ಆದರೆ ನಾಯಕತ್ವ ಬದಲಾವಣೆ ಆಗಲ್ಲ ಎಂಬ ವಿಚಾರ ನನಗೆ ಏನು ಗೊತ್ತು. ಆ ನಿರ್ಧಾರ ಸಿಎಂ ಹಾಗೂ ಹೈಕಮಾಂಡ್‌ಗೇ ಸೇರಿದ್ದು. ಏನಾಗುತ್ತದೆಯೆಂದು ಕಾದು ನೋಡೋಣ, ಎಂದು ಹೇಳಿದ್ದಾರೆ. ಇನ್ನು ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಸೋಲಿನ ಕುರಿತು ಪ್ರತಿಕ್ರಿಯಿಸಿದ ಸುರೇಶ್ ಅವರು, ಪ್ರಜಾಪ್ರಭುತ್ವದಲ್ಲಿ ಗೆಲುವು–ಸೋಲು ಸಹಜ. ಜನರು ನೀಡಿದ ತೀರ್ಪನ್ನು ಸ್ವೀಕರಿಸಬೇಕು. ಅದರಲ್ಲಿ ಯಾವುದೇ ಪ್ರಶ್ನೆಯೇ ಇಲ್ಲ, ಎಂದಿದ್ದಾರೆ.

ನಾಳೆ ದೆಹಲಿಗೆ ನಾನು ಬೇರೆ ಕೆಲಸಕ್ಕಾಗಿ ದೆಹಲಿಗೆ ಹೋಗ್ತೀನಿ. ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿರುವುದು ಮತ್ತು ಇಬ್ಬರು ಸಹೋದರರು ಒಂದೇ ವೇಳೆ ಹೈಕಮಾಂಡ್ ಭೇಟಿಯಾಗುವ ಸಾಧ್ಯತೆ ಕುರಿತು ಕೇಳಲಾದ ಪ್ರಶ್ನೆಗೆ, ಅವರ ಪಾಡಿಗೆ ಅವರು ಹೋಗಿದ್ದಾರೆ, ನನ್ನ ಪಾಡಿಗೆ ನಾನು ಹೋಗ್ತೀನಿ. ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರನ್ನು ನೋಡೋದು ಸಹಜ. ಭೇಟಿ ಯಾಗಬಹುದು, ಎಂದು ಹೇಳಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments