ಜಿಲ್ಲೆಸುದ್ದಿ

‘ನಾನು ಮಹ್ಮದ್ ಯೂನೂಸ್ ಅವರ ದೊಡ್ಡ ಅಭಿಮಾನಿ’ : ಡಿ.ಕೆ.ಶಿವಕುಮಾರ್​

ಕಲಬುರಗಿ : ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ  ಡಿಸಿಎಂ ಡಿ.ಕೆ. ಶಿವಕುಮಾರ್ ತಮ್ಮ ಭಾಷಣದಲ್ಲಿ ಬಾಂಗ್ಲಾದ ಹಿಂದೂಗಳ ಮಾರಣ ಹೋಮಕ್ಕೆ ಕಾರಣ ಎನ್ನಲಾದ ಅಲ್ಲಿನ ಪ್ರಧಾನಿ ಮೊಹ್ಮದ್ ಯೂನುಸ್ ಅಭಿಮಾನಿ ಎಂದು ಹೇಳಿಕೊಂಡು ಕಾರ್ಯಕ್ರಮದ ಗಮನ ತಮ್ಮೆಡೆ ಸೆಳೆದರು. ಕಲಬುರಗಿ ನಗರದ ಕೆಸಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ನಡೆಯುತ್ತಿರುವ ಉದ್ಯೋಗ ಮೇಳ ಕಾರ್ಯಕ್ರಮದ ಭಾಷಣದಲ್ಲಿ ಹೊಗಳಿದ ಡಿ.ಕೆ.ಶಿವಕುಮಾರ್​.

ಕೌಶಲ್ಯ ಶಿಕ್ಷಣ, ಆ ಕುರಿತಂತೆ ಹಲವು ನಿದರ್ಶನಗಳನ್ನು ಹೇಳುತ್ತಲೇ, ಬದುಕಲ್ಲಿ ಕೌಶಲ್ಯ ಅದೆಷ್ಟು ಮುಖ್ಯ ಎಂಬುದಕ್ಕೆ ಬಾಂಗ್ಲಾ ಪ್ರಧಾನಿ ಮಾತುಗಳು ಪ್ರೇರಣಾದಾಯಕ ಎಂದರು. ಯುನುಸ್ ನೊಬೆಲ್ ಪ್ರಶಸ್ತಿ ಬಂದಾಗ ನಡೆದ ಸಂದರ್ಶನ ದಲ್ಲಿ ಒಬ್ಬ ವ್ಯಕ್ತಿಗೆ ಒಂದು ಮೀನು ಕೊಟ್ಟರೆ ಅದು ಒಂದು ಹೊತ್ತಿನ ಊಟಕ್ಕೆ ಆಗುತ್ತೆ, ಆದರೆ ಅದೇ ವ್ಯಕ್ತಿಗೆ ಮೀನು ಹಿಡಿಯುವ ಕೆಲಸ ಕೊಟ್ಟರೆ ಅವನ ಜೀವನವೇ ಆಗುತ್ತೆ ಎಂದಿದ್ದರು. ಆ ಮಾತು ನನಗೆ ತುಂಬ ಹಿಡಿಸಿತು. ಅಂದಿನಿಂದ ನಾನು ಅವರ ದೊಡ್ಡ ಅಭಿಮಾನಿ ಎಂದರು.

Comments (0)

Your email address will not be published. Required fields are marked *

Back to top button