Saturday, January 31, 2026
23.1 C
Bengaluru
Google search engine
LIVE
ಮನೆಜಿಲ್ಲೆಸೋಲಾರ್ ಪ್ಲಾಂಟ್ ನಲ್ಲಿ ಕಾಣಿಸಿಕೊಂಡ ಬೃಹತ್‌ ಹೆಬ್ಬಾವು; ಉರಗ ತಜ್ಞರಿಂದ ರಕ್ಷಣೆ

ಸೋಲಾರ್ ಪ್ಲಾಂಟ್ ನಲ್ಲಿ ಕಾಣಿಸಿಕೊಂಡ ಬೃಹತ್‌ ಹೆಬ್ಬಾವು; ಉರಗ ತಜ್ಞರಿಂದ ರಕ್ಷಣೆ

ತುಮಕೂರು: ತಾಲೂಕಿನ ಹಟ್ಟಿಹಳ್ಳಿಯ ಸೋಲಾರ್ ಪ್ಲಾಂಟ್‌ನಲ್ಲಿ ಕೆಲ ದಿನಗಳಿಂದ ಸಂಚರಿಸುತ್ತಿದ್ದ ಸುಮಾರು 6 ವರ್ಷದ, 42 ಕೆಜಿ ತೂಕದ ಹೆಣ್ಣು ಹೆಬ್ಬಾವನ್ನು ಉರಗ ತಜ್ಞ ಬಾಣಸಂದ್ರ ರವೀಶ್ ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡುಗಡೆ ಮಾಡಿದ್ದಾರೆ.

ಸೋಲಾರ್ ಪ್ಲಾಂಟ್ ಸಿಬ್ಬಂದಿ ದೃಷ್ಟಿಗೆ ಹಾವು ಕಂಡ ತಕ್ಷಣವೇ ರವೀಶ್ ಅವರಿಗೆ ಕರೆಮಾಡಿ ಸಹಾಯ ಕೋರಿದ್ದರು . ತಜ್ಞರು ಸ್ಥಳಕ್ಕೆ ಆಗಮಿಸಿ ಸೂಕ್ಷ್ಮವಾಗಿ ಹೆಬ್ಬಾವನ್ನು ಹಿಡಿದು, ಆಪತ್ತು ಮುಕ್ತವಾಗಿ ಅರಣ್ಯಕ್ಕೆ ಬಿಡುವ ಕಾರ್ಯ ನೆರವೇರಿಸಿದ್ದಾರೆ.

ಹೆಬ್ಬಾವು ಸಂತಾನೋತ್ಪತ್ತಿ ಕಾಲದಲ್ಲಿರುವ ಕಾರಣ ತನ್ನ ಸಂಗಾತಿಯನ್ನು ಹುಡುಕುತ್ತಾ ಅರಣ್ಯ ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ತೆರಳುವುದು ಸಾಮಾನ್ಯ. ಈ ರೀತಿಯಾಗಿ ಸುರಕ್ಷಿತ ಪರಿಸರದಲ್ಲಿ ಹೆಬ್ಬಾವು ಮುಕ್ತಗೊಂಡಿದೆ ಎಂದು ಉರಗ ತಜ್ಞ ಬಾಣಸಂದ್ರ ರವೀಶ್ ಹೇಳಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments