ಹು-ಧಾ : ನಗರದ ಮುಖ್ಯ ರಸ್ತೆಯ ರಾಯಾಪುರದ ಬಳಿ ಇರೋ ಇಸ್ಕಾನ್’ನಲ್ಲಿ ಡಿಸೆಂಬರ್ 23 ರಂದು ವೈಕುಂಠ ಏಕಾದಶಿಯನ್ನು ವಿಶೇಷ ಆಚರಣೆ ಮಾಡಲಾಗುವುದು. ಅಂದು ಮಂದಿರದಲ್ಲಿ ದಿನವಿಡೀ ವಿವಿಧ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಸ್ಕಾನ್ ಪ್ರಮುಖರಾದ ರಾಮಗೋಪಾಲದಾಸ್ ಹೇಳಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಏಕಾದಶಿ ವೃತವನ್ನು ವಿಷ್ಣುವಿನ್ ಭಕ್ತರು ಭಗವಂತನ ನಾಮಸ್ಮರಣೆ, ಜಪ ಹಾಗೂ ಭಕ್ತಿ ಸಂಗೀತದೊಂದಿಗೆ ಆಚರಿಸಲಾಗುತ್ತದೆ. ಅದರಂತೆ ಮಾರ್ಗಶೀರ್ಷ ಮಾಸದ ಶುಕ್ಲಪಕ್ಷದಲ್ಲಿ (ಡಿಸೆಂಬರ್-ಜನೇವರಿ) ಬರುವ ಏಕಾದಶಿಯು ಮಹತ್ವದ್ದಾಗಿದ್ದು, ವೈಕುಂಠ ಏಕಾದಶಿಯೆಂದು ಕರೆಯಲ್ಪಡುತ್ತದೆ. ಇದು ದಕ್ಷಿಣ ಭಾರತದಾದ್ಯಂತ ವಿಷ್ಣುವಿನ ದೇವಾಲಯಗಳಲ್ಲಿ ಆಚರಿಸಲಾಗುತ್ತದೆ. ರಾಯಾಪುರದ ಇಸ್ಕಾನ್ ಟೆಂಪಲ್’ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಆಚರಣೆ ಮಾಡಲಾಗುತ್ತಿದೆ‌. ಈಗಾಗಲೇ ವೈಕುಂಠ ದ್ವಾರಕ್ಕೆ ಸ್ವರ್ಣ ರಂಗಿನಿಂದ ಲೇಪಿತವಾದ ಭವ್ಯವಾದ ವೈಕುಂಠ ದ್ವಾರವನ್ನು ನಿರ್ಮಿಸಲಾಗುತ್ತಿದೆ. ಇದು 15 ಅಡಿ ಎತ್ತರ ಮತ್ತು 11 ಅಡಿ ಅಗಲವಾಗಿದೆ. ಅಂದು ಬೆಳಿಗ್ಗೆ 8 ಕ್ಕೆ ವೈಕುಂಠ ದ್ವಾರದ ಪೂಜೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ದೇವಾಲಯವನ್ನು ವೈಕುಂಠಕ್ಕೆ ಹೋಲಿಕೆಯಾಗುವಂತೆ ಸಜ್ಜುಗೊಳಿಸಲಾಗುವುದು. ಅಂದು ಬೆಳಿಗ್ಗೆ 8 ರಿಂದ ರಾತ್ರಿ 9 ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರಲಿದ್ದು, ಮಂದಿರಕ್ಕೆ ಭೇಟಿ ಕೊಡುವ ಭಕ್ತರಿಗಾಗಿ ಲಕ್ಷಾರ್ಚನೆ ಸೇವೆ ನಡೆಸಲಾಗುತ್ತಿದೆ. ಭಕ್ತರು ದಿನವಿಡಿ ಭಗವಂತನ ಒಂದು ಲಕ್ಷ ನಾಮಗಳು ಜಪಿಸಲ್ಪಡುವ ಲಕ್ಷಾರ್ಚನೆ ಸೇವೆಯಲ್ಲಿ ಭಾಗವಹಿಸಬಹುದು. ಸಂಜೆ 5 ಕ್ಕೆ ವಿಶ್ವಶಾಂತಿಗಾಗಿ ವೆಂಕಟೇಶ್ವರ ಹೋಮ ನಡೆಯಲಿದೆ. ಸಂಜೆ 6 ರಿಂದ 9 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ. ಭಕ್ತರಿಗೆ ಪ್ರಸಾದ್ ಸೇರಿ ಇನ್ನಿತರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

By admin

Leave a Reply

Your email address will not be published. Required fields are marked *

Verified by MonsterInsights