Wednesday, April 30, 2025
35.6 C
Bengaluru
LIVE
ಮನೆಜಿಲ್ಲೆಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಮುಂಬೈ, ದೆಹಲಿ ಪ್ರವಾಸ

ಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಮುಂಬೈ, ದೆಹಲಿ ಪ್ರವಾಸ

ಕಲಬುರಗಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳನ್ನು ಶಿಕ್ಷಕರು ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ನೋಡುವ ಐತಿಹಾಸಿಕ ಸ್ಥಳಗಳಿಗೆ ಬಸ್ ಗಳಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯ ಆದರೆ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಮಕ್ಕಳಿಂದ ಸ್ವಲ್ಪ ಹಣ ಸಂಗ್ರಹಿಸಿ, ತಮ್ಮ ಕೈಯಿಂದ ಹೆಚ್ಚಿನ ಹಣವನ್ನು ಹಾಕಿ ತಮ್ಮ ಸರಕಾರಿ ಶಾಲೆಯ ಮಕ್ಕಳನ್ನು ವಿಮಾನದಲ್ಲಿ ಮುಂಬೈ, ದೆಹಲಿ ಪ್ರವಾಸ ಮಾಡಿಸಿದ್ದಾರೆ. ಅದು ಯಾವೂರು ಶಾಲೆ, ಆ ಮುಖ್ಯೋಪಾಧ್ಯಾಯರು ಯಾರು ಅಂತೀರಾ ಈ ಸ್ಟೋರಿ ನೋಡಿ.

ಹೌದು ಹೀಗೆ ವಿಮಾನ ನಿಲ್ದಾಣದ ಟ್ರಾಲಿಗಳಲ್ಲಿ ತಮ್ಮ ಬ್ಯಾಗಗಳನ್ನು ಇಟ್ಟುಕೊಂಡು ಕುತೂಹಲದಿಂದ ವಿಮಾನ ನಿಲ್ದಾಣದಲ್ಲಿ ಹೋಗುತ್ತಿರುವ ಮಕ್ಕಳು ಸರಕಾರಿ ಶಾಲೆಯಲ್ಲಿ ಓದುವ ಬಡ ಮಕ್ಕಳು. ಈ ಶಾಲೆ ಇರುವುದು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಮೈಂದರ್ಗಿ ಗ್ರಾಮದಲ್ಲಿ, ಇದು ಕನ್ನಡ ಮಾಧ್ಯಮ ಶಾಲೆ. ಈ ಗ್ರಾಮ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕರ್ನಾಟಕದ ಗಡಿ ಗ್ರಾಮವಾಗಿದೆ. ಇದು ಅಪ್ಪಟ ಕನ್ನಡಿಗರ ಗ್ರಾಮ, ಈ ಶಾಲೆಗೆ ಕಳೆದ ಒಂದೂವರೆ ವರ್ಷದ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿ ಬಂದಿರುವ ಮಹಾಂತೇಶ್ವರ ಕಟ್ಟಿಮನಿ ಅವರು, ಕಳೆದ ವರ್ಷ ಶಾಲೆಯ ಮಕ್ಕಳನ್ನು ರೈಲು ಮೂಲಕ ಮುಂಬೈ ಹಾಗೂ ಮುಂಬೈನಿಂದ ವಿಮಾನದ ಮೂಲಕ ಬೆಂಗಳೂರು ಪ್ರವಾಸ ಮಾಡಿಸಿದ್ದಾರೆ. ಈ ಬಾರಿಯೂ ರೈಲು ಮೂಲಕ ಮುಂಬೈ, ನಂತರ ಮುಂಬೈನಿಂದ ದೆಹಲಿಗೆ ಮಕ್ಕಳನ್ನು ವಿಮಾನ ಪ್ರವಾಸ ಮಾಡಿಸಿ ದೆಹಲಿ, ಸಂಸತ ಭವನ, ರಾಷ್ಟ್ರಪತಿ ಭವನ ಹಾಗೂ ಕೆಂಪುಕೋಟೆ ಸೇರಿದಂತೆ ಐತಿಹಾಸಿಕ ಸ್ಥಳಗಳನ್ನು ತೋರಿಸಿಕೊಂಡು ಬಂದಿದ್ದಾರೆ. ಮುಖ್ಯಗುರುಗಳಾದ ಮಹಾಂತೇಶ್ವರ ಕಟ್ಟಿಮನಿ ಅವರ ವಿಮಾನ ಪ್ರವಾಸದಿಂದ ಶಾಲೆಯ ಮಕ್ಕಳು ಹಾಗೂ ಅವರ ಪಾಲಕರು ತುಂಬಾ ಖುಷಿಯಾಗಿದ್ದಾರೆ. ನಮ್ಮ ಮಕ್ಕಳು ಈ ಹಳ್ಳಿಯಲ್ಲಿ ಆಕಾಶದಲ್ಲಿ ಹಾರುಡುವ ವಿಮಾನವನ್ನು ನೋಡಿ ಖುಷಿ ಪಡ್ತಿದ್ದರು ಈಗ ಮಹಾಂತೇಶ್ವರ ಕಟ್ಟಿಮನಿ ಸರ್ ಅವರಿಂದ ವಿಮಾನವನ್ನು ಏರಿ ದೆಹಲಿ ನೋಡಿಬಂದಿದ್ದಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಈ ಶಾಲೆಯ ಮುಖ್ಯ ಗುರುಗಳಾದ ಮಹಾಂತೇಶ್ವರ ಕಟ್ಟಿಮನಿ ಅವರು ಈ ಹಿಂದೆ ಕಾರ್ಯನಿರ್ವಹಿಸಿದ ಮೂರು ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿದ್ದಾರೆ. ಅದೆ ರೀತಿ ಕಳೆದ ಒಂದುವರೆ ವರ್ಷದ ಹಿಂದೆ ಅವರು ಮೈಂದರ್ಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಗೂ ಎರಡು ಬಾರಿ ವಿಮಾನ ಪ್ರವಾಸ ಮಾಡಿಸಿದ್ದಾರೆ. ಅಲ್ಪಸ್ವಲ್ಪ ಹಣವನ್ನು ಮಕ್ಕಳಿಂದ ಸಂಗ್ರಹಿಸಿ, ಉಳಿದ ಹಣವನ್ನು ತಮ್ಮ ಕೈಯಿಂದ ಖರ್ಚು ಮಾಡುವ ಮೂಲಕ ಬಡ ಮಕ್ಕಳ ವಿಮಾನ ಏರುವ ಕನಸನ್ನು ನನಸು ಮಾಡಿದ್ದಾರೆ. ಮಕ್ಕಳನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿರುವ ಕುರಿತು ಮಹಾಂತೇಶ ಕಟ್ಟಿಮನಿ ಮತ್ತು ಮಕ್ಕಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳ ಪಾಲಕರು ತುಂಬಾ ಬಡವರಾಗಿರುವ ಕಾರಣ ಮಕ್ಕಳು ವಿಮಾನವೇರಿ ಪ್ರವಾಸ ಮಾಡುವುದು ನಿಜಕ್ಕೂ ಕನಸಿನ ಮಾತು ಎಂದೇ ಹೇಳಲಾಗುತ್ತದೆ. ಆದರೆ ಈ ಮಾತನ್ನು ಸಳ್ಳು ಮಾಡಿ ಶಾಲೆಯ ಪ್ರಾತಿಭಾನ್ವಿತ ಬಡ ಮಕ್ಕಳಿಗೆ ವಿಮಾನದಲ್ಲಿ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿರುವ ಶಾಲೆಯ ಮುಖ್ಯೋಪಾಧ್ಯಾಯರಾದ ಮಹಾಂತೇಶ್ವರ ಕಟ್ಟಿಮನಿ ಅವರ ಕಾರ್ಯವನ್ನು ನಿಜಕ್ಕೂ ಮೆಚ್ಚಲೇಬೇಕು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments