Tuesday, March 3, 2026
20.2 C
Bengaluru
Google search engine
LIVE
ಮನೆ#Exclusive NewsTop Newsಮದ್ಯಪ್ರಿಯರಿಗೆ ಸರ್ಕಾರದಿಂದ ‘ಕಿಕ್’;ಬಜೆಟ್‌ನಲ್ಲಿ ಎಣ್ಣೆ ಬೆಲೆ ಏರಿಕೆ ಫಿಕ್ಸ್!

ಮದ್ಯಪ್ರಿಯರಿಗೆ ಸರ್ಕಾರದಿಂದ ‘ಕಿಕ್’;ಬಜೆಟ್‌ನಲ್ಲಿ ಎಣ್ಣೆ ಬೆಲೆ ಏರಿಕೆ ಫಿಕ್ಸ್!

ರಾಜ್ಯದ ಮದ್ಯಪ್ರಿಯರಿಗೆ ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಬಿಗ್ ಶಾಕ್ ನೀಡಲು ಸಜ್ಜಾಗಿದ್ದು, ಗ್ಯಾರಂಟಿ ಯೋಜನೆಗಳ ಭಾರ ಹೊರಲು ಅಬಕಾರಿ ಸುಂಕವನ್ನು ಮತ್ತಷ್ಟು ಏರಿಸುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಮದ್ಯದ ದರವನ್ನು ಶೇಕಡಾ 10 ರಿಂದ 12ರಷ್ಟು ಹೆಚ್ಚಿಸಲು ಅಬಕಾರಿ ಇಲಾಖೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಸತತವಾಗಿ ದರ ಏರಿಕೆಯಾಗುತ್ತಿದ್ದರೂ, ಸರ್ಕಾರಕ್ಕೆ ನೀಡಿರುವ ಆದಾಯ ಸಂಗ್ರಹದ ಬೃಹತ್ ಗುರಿಯನ್ನು ತಲುಪಲು ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿಯ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಗೆ ಸರ್ಕಾರ ಬರೋಬ್ಬರಿ 40 ರಿಂದ 43 ಸಾವಿರ ಕೋಟಿ ರೂಪಾಯಿಗಳ ಸುಂಕ ಸಂಗ್ರಹದ ಟಾರ್ಗೆಟ್ ನೀಡಿದೆ. ಆದರೆ ಗ್ಯಾರಂಟಿ ಯೋಜನೆಗಳಿಗೆ ಸುಮಾರು 59 ಸಾವಿರ ಕೋಟಿ ರೂಪಾಯಿಗಳಷ್ಟು ಭಾರಿ ಮೊತ್ತದ ಅಗತ್ಯವಿರುವುದರಿಂದ, ಸಂಪನ್ಮೂಲ ಕ್ರೋಢೀಕರಿಸಲು ಮದ್ಯದ ಬೆಲೆ ಏರಿಕೆಯೇ ಸರ್ಕಾರಕ್ಕೆ ಪ್ರಮುಖ ದಾರಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿರುವ ಜನ ಸಾಮಾನ್ಯರಿಗೆ, ಈಗ ಎಣ್ಣೆ ಬೆಲೆ ಏರಿಕೆಯು ಗಾಯದ ಮೇಲೆ ಬರೆ ಎಳೆದಂತಾಗಲಿದೆ.

ವಿಶೇಷವಾಗಿ ಮಧ್ಯಮ ವರ್ಗದ ಜನರು ಬಳಸುವ ಮದ್ಯದ ಬ್ರ್ಯಾಂಡ್‌ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಲು ಪ್ಲ್ಯಾನ್ ಮಾಡಲಾಗಿದ್ದು, 90 ML ಪೆಗ್ ಹಾಕುವವರ ಜೇಬಿಗೆ ನೇರವಾಗಿ ಕತ್ತರಿ ಬೀಳಲಿದೆ. ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿಗೆ 2,000 ರೂಪಾಯಿ ನೀಡುತ್ತಿರುವ ಸರ್ಕಾರ, ಈಗ ಮದ್ಯದ ದರ ಏರಿಸುವ ಮೂಲಕ ಗಂಡನ ಜೇಬಿನಿಂದ ಆ ಹಣವನ್ನು ಮರಳಿ ಪಡೆಯುತ್ತಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಬಜೆಟ್ ಘೋಷಣೆಯ ನಂತರ ಈ ಹೊಸ ದರಗಳು ಜಾರಿಗೆ ಬರಲಿದ್ದು, ಮದ್ಯಪ್ರಿಯರ ಕಿಕ್ ಇಳಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments