Wednesday, April 30, 2025
30.3 C
Bengaluru
LIVE
ಮನೆವೈರಲ್ ನ್ಯೂಸ್ಅಲೆಕ್ಸಾʼ ನೆರವಿನಿಂದ ಮಂಗಗಳಿಂದ ಮಗುವನ್ನು ರಕ್ಷಿಸಿದ ಬಾಲಕಿಗೆ ಆನಂದ್‌ ಮಹೀಂದ್ರಾ ಜಾಬ್‌ ಆಫರ್‌!

ಅಲೆಕ್ಸಾʼ ನೆರವಿನಿಂದ ಮಂಗಗಳಿಂದ ಮಗುವನ್ನು ರಕ್ಷಿಸಿದ ಬಾಲಕಿಗೆ ಆನಂದ್‌ ಮಹೀಂದ್ರಾ ಜಾಬ್‌ ಆಫರ್‌!

ನವದೆಹಲಿ : ತಂತ್ರ ಜ್ಞಾನದ ಅರಿವಿದ್ದರೆ ದೊಡ್ಡ ಸಮಸ್ಯೆಯನ್ನು ಕ್ಷಣಾರ್ಧದಲ್ಲಿ ಹೇಗೆ ಬಗೆಹರಿಸ ಬಹುದು ಎಂಬುದಕ್ಕೆ ಈ ಪ್ರಸಂಗವೊಂದು ಸಾಕ್ಷಿ. ಉತ್ತರ ಪ್ರದೇಶದ 13 ವರ್ಷದ ಬಾಲಕಿ ದಿಢೀರ್ ಮನೆಗೆ ನುಗ್ಗಿದ ಕೋತಿಗಳನ್ನು ಅಲೆಕ್ಸಾ ಸಹಾಯದಿಂದ ನಾಯಿಯ ಸದ್ದು ಮಾಡಿ ಓಡಿಸಿ,15 ತಿಂಗಳ ಮಗುವನ್ನು ರಕ್ಷಿಸಿದ್ದಾಳೆ. ಬಾಲಕಿಯ ಈ ಶೌರ್ಯ ಹಾಗೂ ಸಮಯಪ್ರಜ್ಞೆಯನ್ನು ಜನ ಕೊಂಡಾಡಿದ್ದಾರೆ.

13 ವರ್ಷ ನಿಕಿತಾ ಅಕ್ಕನ ಮನೆಗೆ ತೆರಳಿದ್ದರು ಅಕ್ಕನ 15 ತಿಂಗಳ ಮಗುವಿನೊಂದಿಗೆ ಆಡುವ ವೇಳೆ ಮಂಗಗಳ ಹಿಂಡು ದಿಢೀರ್ ಮನೆ ಒಳಗೆ ಪ್ರವೇಶಿಸಿ ಗದ್ದಲ ಆರಂಭಿಸಿದವು. ಈ ಸದ್ದಿಗೆ ಮಗು ಅಳಲು ಆರಂಭಿಸುತ್ತು ಈ ವೇಳೆ ನಿಕಿತಾ ಕಿಂಚಿತ್ತು ಸಮಯ ವ್ಯರ್ಥ ಮಾಡದೆ ಅಲ್ಲೇ ಇದ್ದ ಅಲೆಕ್ಸಾ ಬಳಿ ನಾಯಿಯ ಸದ್ದು ಮಾಡುತ್ತಿದ್ದಂತೆ ಮನೆಗೆ ಆದೇಶಿಸಿದ್ದ ಪ್ರವೇಶಿಸಿದ್ದ ಮಂಗಗಳು ಬೆದರಿ ಕಾಲ್ಕಿತ್ತು ಹೊರನಡೆಯಿತು.

ಏನಿದು ಅಲೆಕ್ಸಾ : ಅಲೆಕ್ಸಾ ಎಂಬುದು ಅಮೆಜಾನ್ ಕಂಪನಿಯ ಸಾಧನವಾಗಿದ್ದು.ಇದು ಮನುಷ್ಯನ ಆದೇಶದಂತೆ ಹಾಡು ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಹೇಳುತ್ತದೆ.

ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರಾ (Anand Mahindra) ಅವರು ದೇಶಕ್ಕಾಗಿ ಕೊಡುಗೆ ನೀಡಿದವರು, ಸಮಾಜಮುಖಿಯಾಗಿ ಕೆಲಸ ಮಾಡುವವರು, ಬಡವರಿಗೆ ಅಗತ್ಯ ನೆರವು ನೀಡುವ, ಬಹುಮಾನ ಘೋಷಣೆ ಮಾಡುವ, ತಮ್ಮ ಕಂಪನಿ ಉತ್ಪಾದಿಸುವ ಕಾರನ್ನೇ ಉಡುಗೊರೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ (Uttar Pradesh) ಅಮೆಜಾನ್‌ನ ಅಲೆಕ್ಸಾ (Alexa) ವಾಯ್ಸ್‌ ಅಸಿಸ್ಟಂಟ್‌ ಬಳಸಿ ಮಂಗಗಳ ದಾಳಿಯಿಂದ ತನ್ನನ್ನು ಹಾಗೂ ತನ್ನ ಅಕ್ಕನ ಮಗಳನ್ನು ರಕ್ಷಿಸಿದ 13 ವರ್ಷದ ಚಾಣಾಕ್ಷ ಬಾಲಕಿಗೆ ಈಗ ಆನಂದ್‌ ಮಹೀಂದ್ರಾ ಅವರು ಉದ್ಯೋಗ ನೀಡುವ ಆಫರ್‌ ಕೊಟ್ಟಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments