ರಾಜ್ಯಶಿಕ್ಷಣಸುದ್ದಿ

ಸಿ.ಇ.ಟಿ ಮರುಪರೀಕ್ಷೆಗೆ ಅಗ್ರಹ

ಇಂಜಿನಿಯರಿಂಗ್ ಅಥವಾ ಮತ್ತಿತರೆ ಕೋರ್ಸ್ ಗಳಿಗೆ ಸೇರಲು ಸುಮಾರು ಮೂರುವರೆ ಲಕ್ಷ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಳೆದ 2 ವರ್ಷದಿಂದ ಶ್ರಮ ವಹಿಸಿ ಸಿ.ಇ.ಟಿ ಗೆ ತಯಾರಾಗಿ ಪರೀಕ್ಷೆ ಎದುರಿಸಿದ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ಹೊರ ಪಠ್ಯ (ಔಟ್ ಆಫ್ ಸಿಲಬಸ್) ಪ್ರಶ್ನಗಳನ್ನು ನೋಡಿ ದಿಕ್ಕು ಕಾಣದ ಪರಿಸ್ಥಿತಿ ಉಂಟಾಗಿ ದುಃಖ ಮತ್ತು ಆತಂಕಕ್ಕೊಳಗಾಗಿದ್ದಾರೆ.

ವಿದ್ಯಾರ್ಥಿಗಳ ಈ ಪರಿಸ್ಥಿತಿ ಕಂಡ ಉಪನ್ಯಾಸಕರೂ ಕೂಡ ಅಸಾಹಯಕರಾಗಿ ಪರೀಕ್ಷಾ ವ್ಯವಸ್ಥೆ ಕುರಿತು ನಿರಾಶರಾದರು.

ಸಹಜವಾಗಿ ಒಂದು ವಿಷಯದಲ್ಲಿ ಒಂದು ಅಥವಾ ಎರಡು ಪ್ರಶ್ನೆ ಗಳು ತಪ್ಪಾಗಿ, ಪಠ್ಯದಲ್ಲಿ ಇಲ್ಲದವು ಬರುತಿದ್ದವು. ಅವುಗಳಿಗೆ ಗ್ರೇಸ್ ಮಾರ್ಕ್ಸ್ ಕೊಡುವತಹದ್ದು ಸಾಮಾನ್ಯವಾಗಿತ್ತು. ಆದರೆ ಪ್ರಸ್ತುತ ಸಿಇಟಿ ಪರೀಕ್ಷೆ ನಡೆದ ನಾಲ್ಕೂ ವಿಷಯಗಳಲ್ಲಿ ಒಟ್ಟು 46 ಪ್ರಶ್ನೆಗಳು ಪಠ್ಯವನ್ನು ಹೊರತುಪಡಿಸಿ ಕೇಳಿರುವುದು ಇಷ್ಟೆಲ್ಲಾ ಆವಾಂತರಗಳಿಗೆ ಕಾರಣವಾಗಿದೆ.

ಈ ಮೇಲಿನ ಆತಂಕದ ಪರಿಸ್ಥಿತಿ ಅರಿತ ಪಿ.ಯು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು,ಮತ್ತು ರುಪ್ಸ ಅಧ್ಯಕ್ಷರ ಜೊತೆ ದಾವಣಗೆರೆ ಯಲ್ಲಿ ಸಭೆ ಸೇರಿ ಈ ಕೆಳಗಿನ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

1. ಒಟ್ಟು 240 ಅಂಕಗಳಲ್ಲಿ 46 ಪಠ್ಯಗಳಲ್ಲಿ ಇಲ್ಲದ ಪ್ರಶ್ನೆಗಳು ಬಂದಿರುವುದು ಇದೇ ಮೊದಲು. ಈ ಸಮಸ್ಯೆಯನ್ನು ಮರು ಪರೀಕ್ಷೆಯಿಂದ ಮಾತ್ರ ಬಗೆಹರಿಸಲು ಸಾಧ್ಯ. ಅದನ್ನು ಬಿಟ್ಟು ಗ್ರೇಸ್ ಮಾರ್ಕ್ಸ್ ಅಥವಾ 46 ಅಂಕಗಳನ್ನು ಕಳೆದು ಫಲಿತಾಂಶ ಪ್ರಕಟಿಸಲು ಸಾಧ್ಯವಿಲ್ಲ.

2. ಈ ರೀತಿಯ ಬೇಜವಾಬ್ದಾರಿ ಪ್ರಮಾದಕ್ಕೆ ಕಾರಣರಾದವರನ್ನು ತಕ್ಷಣ ತನಿಖೆಗೆ ಒಳಪಡಿಸಿ ತಪ್ಪಿತಸ್ಥರನ್ನು ಶಿಕ್ಷಸಬೇಕು. ಹಾಗೂ ಅವರಿಂದ ಸಿಇಟಿ ಪರೀಕ್ಷೆ ನಡೆಸಲು ಆಗುವ ಖರ್ಚುನ್ನು ವಸೂಲಿ ಮಾಡಬೇಕು.

3. ಅಂತಿಮವಾಗಿ ಸಿ ಇ ಟಿ ಮರು ಪರೀಕ್ಷೆ ನಡೆಸುವ ತೀರ್ಮಾನ ವನ್ನು ಇಲಾಖೆ ಹಾಗೂ ಮಂತ್ರಿಗಳ ನೇತೃತ್ವದಲ್ಲಿ ತಕ್ಷಣ ಪ್ರಕಟಿಸಬೇಕು.

ಇದು ವಿಳಂಬ ಆದರೆ ಮಕ್ಕಳ ಹಿತ ಕಾಯಲು ನಮ್ಮ ಸಂಘಟನೆ ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಳ್ಳಲು ಹಿಂಜರಿಯುವುದಿಲ್ಲ. ಆದ್ದರಿಂದ ದಯಮಾಡಿ ಇಂದೇ ಈ ಕುರಿತು ಶಿಕ್ಷಣ ಮಂತ್ರಿಗಳು ಸಭೆ ಮಾಡಿ ನಿರ್ಧಾರ ಪ್ರಕಟಿಸಲು ರುಪ್ಸ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಕೇಳಿದ್ದಾರೆ.

 

 

 

Comments (0)

Your email address will not be published. Required fields are marked *

Back to top button