ತುಮಕೂರು: ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಖಂಡಿಸಿ ಬಿಜೆಪಿ ನಾಯಕರು ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಿಜಿಎಸ್ ವೃತ್ತದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದು, ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರ, ಸಿಎಂ ಹಾಗೂ ಕೃಷಿ ಸಚಿವರು ಕುಂಬಕರಣ ನಿದ್ರೆಗೆ ಜಾರಿರುವುದರಿಂದ ರಾಜ್ಯಾದ್ಯಂತ ರೈತರ ಪರ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಂಗಾರು ಮಳೆ ಆರಂಭವಾದರೂ ಸಹ ರೈತರಿಗೆ ಬೇಕಾದ ರಸಗೊಬ್ಬರವನ್ನು ಸರಿಯಾದ ರೀತಿಯಲ್ಲಿ ವಿತರಣೆ ಮಾಡದೇ ಇರುವುದರಿಂದ ಅನ್ನದಾತರು ಕಾಳಸಂತೆಯಲ್ಲಿ ದುಪ್ಪಟ್ಟು ದರದಲ್ಲಿ ಗೊಬ್ಬರ ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ.
ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ ಮಳೆ ಹೆಚ್ಚಾಗಿದೆ ಹಾಗೂ ಬಿತ್ತನೆಯೂ ಹೆಚ್ಚಾಗಿದೆ ಎಂದು. ನಾನು ಸಿಎಂ ಅವರಿಗೆ ಕೇಳಲು ಬಯಸುತ್ತೇನೆ ಮಳೆ ಜಾಸ್ತಿಯಾಗಿದೆ ಬಿತ್ತನೇನೂ ಜಾಸ್ತಿಯಾಗುತ್ತೆ ಅನ್ನೋ ಮುನ್ಸೂಚನೆ ನಿಮಗಿರಲಿಲ್ಲವೇ..? ಎಂದು ಪ್ರಶ್ನೆ ಮಾಡಿದ್ದಾರೆ.
ನಾಡಿಗೆ ಎರಡು ತುತ್ತು ಅನ್ನವನ್ನು ಕೊಡುವ ರೈತರನ್ನು ಇಂತಹ ಪರಿಸ್ಥಿತಿಗೆ ದೂಡಿರುವುದು ರಾಜ್ಯ ಸರ್ಕಾರವೇ ಹೊರತು ಕೇಂದ್ರ ಸರ್ಕಾರವಲ್ಲ.ರಾಜ್ಯದ ಎಲ್ಲಾ ಸಂಸದರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ನಡ್ಡಾರನ್ನು ಭೇಟಿ ಮಾಡಿ ಹೆಚ್ಚುವರಿ ರಸಗೊಬ್ಬರ ನೀಡಬೇಕೆಂದು ವಿನಂತಿ ಮಾಡಿದ್ದಾರೆ.ಅದಕ್ಕೆ ಸಚಿವರು ಪೂರಕವಾಗಿ ಸ್ಪಂದನೆ ಮಾಡಿದ್ದಾರೆ ಎಂದ್ರು.
ಇದು ರಾಜ್ಯ ಸರ್ಕಾರದ ವೈಫಲ್ಯ ಕೇಂದ್ರ ಸರ್ಕಾರದಲ್ಲ.ರೈತರ ವಿರೋಧಿ ಸರ್ಕಾರ ರಾಜ್ಯದಲ್ಲಿದೆ. ರಾಜ್ಯದಲ್ಲಿ ಕೃಷಿ ಸಚಿವರು ಹಾಗೂ ಸಿಎಂ ಸಹ ಇದ್ದಾರೆ. ರಾಜ್ಯದಲ್ಲಿಟ್ಟು ಕೃತಕವಾಗಿ ಅಭಾವ ಸೃಷ್ಟಿ ಮಾಡದೆ ಹೊಗಿದ್ದರೇ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ.ರೈತರು ಬೀದಿಗಿಳಿದು ಹೋರಾಟ ಮಾಡುವ ಸಂದರ್ಭ ಸೃಷ್ಟಿ ಆಗುತ್ತಿರಲಿಲ್ಲ..
ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರತ್ತೆ..ಅಲ್ಲಿ ಕೃತಕವಾಗಿ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರುವಂತಹದ್ದು ಹಲವು ಬಾರಿ ನೋಡಿದ್ದೇವೆ. ಈ ಬಾರಿಯೂ ಅಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಕೃಷಿ ಸಚಿವರೇ ಹೊಟೆಗಾರಿಕೆ ಹೊರಬೇಕು ಎಂದು ಗುಡುಗಿದ್ರು.
ರಾಜ್ಯದ ಸಚಿವರೆಂದು ಮರೆತು ಕೇವಲ ಮಂಡ್ಯ ಮತ್ತು ಬೆಂಗಳೂರಿಗೆ ಸೀಮಿತರಾಗಿದ್ದೀರಿ.. ನೀವು ದಯವಿಟ್ಟು ಕಲಬುರಗಿ, ರಾಯಚೂರು ಹಾಗೂ ಗದಗ ಜಿಲ್ಲೆಗಳಿಗೆ ಹೊಗಿ.. ಅಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ವಾಸ್ತವಿಕ ಪರಿಸ್ತಿತಿ ಅರ್ಥ ಮಾಡಿಕೊಂಡು.. ಎಲ್ಲಿ ಸಮಸ್ಯೆ ಉಂಟಾಗಿದೆ ಅನ್ನೊದನ್ನು ಕಂಡುಕೊಳ್ಳುವುದು ಸಚಿವರ ಕರ್ತವ್ಯ. ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಹೇಳಿದ್ರು.


