ಅಕ್ಷಯ್ ಕುಮಾರ್ ಹರಿದ ಬಟ್ಟೆ ನೋಡಿ ದಂಗಾದ ಫ್ಯಾನ್ಸ್!

ಬಾಲಿವುಡ್‌ನ ‘ಕಿಲಾಡಿ’ ಅಕ್ಷಯ್ ಕುಮಾರ್ ಯಾವಾಗಲೂ ತಮ್ಮ ಶಿಸ್ತು ಮತ್ತು ಸರಳತೆಗೆ ಹೆಸರಾದವರು. ಆದರೆ ಇತ್ತೀಚೆಗೆ ನಡೆದ ಈವೆಂಟ್ ಒಂದರಲ್ಲಿ ಅವರು ಕಾಣಿಸಿಕೊಂಡ ರೀತಿ ಕಂಡು ಅಭಿಮಾನಿಗಳು ಮಾತ್ರವಲ್ಲದೆ ಇಡೀ ಸೋಷಿಯಲ್ ಮೀಡಿಯಾ ದಂಗಾಗಿದೆ. ಫ್ಯಾಷನ್ ಹೆಸರಲ್ಲಿ ಅಕ್ಷಯ್ ಧರಿಸಿದ್ದ ವಿಚಿತ್ರ ಉಡುಗೆ ಈಗ ಭಾರಿ ಚರ್ಚೆ ಹಾಗೂ ಹಾಸ್ಯಕ್ಕೆ ಆಹಾರವಾಗಿದೆ.
ಅಕ್ಷಯ್ ಕುಮಾರ್ ತಮ್ಮ ಮುಂಬರುವ ಬಹುನಿರೀಕ್ಷಿತ ಸಿನಿಮಾ ‘ಭೂತ್ ಬಂಗ್ಲಾ’ ಪ್ರಚಾರದ ಭಾಗವಾಗಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದರು. ಮೈಮೇಲೆ ಹರಿದ ಶರ್ಟ್, ಅದರ ಮೇಲೆ ಎರಡು ಟೈಗಳನ್ನು ಧರಿಸಿದ್ದ ನಟನ ಲುಕ್ ನೋಡಿ ನೆಟ್ಟಿಗರು ಕಣ್ಣರಳಿಸಿದ್ದಾರೆ. “ಕೋಟಿ ಕೋಟಿ ಆಸ್ತಿ ಇದ್ದರೂ ಅಕ್ಷಯ್ ಕುಮಾರ್‌ಗೆ ಈ ಗತಿ ಬಂತಾ?” ಎಂದು ಕೆಲವರು ಕಿಚಾಯಿಸಿದರೆ, ಇನ್ನು ಕೆಲವರು “ಬಾಲಿವುಡ್‌ನ ಬಿಗ್ ಬಜೆಟ್ ನಟನಿಗೆ ಇದ್ದಕ್ಕಿದ್ದಂತೆ ಬಡತನ ಬಂತಾ?” ಎಂದು ವ್ಯಂಗ್ಯವಾಡುತ್ತಿದ್ದಾರೆ. ಫ್ಯಾಷನ್ ಎಂಬ ಹೆಸರಿನಲ್ಲಿ ಈ ಮಟ್ಟದ ವಿಚಿತ್ರ ಪ್ರಯೋಗ ಬೇಕಿತ್ತಾ ಎಂಬ ಪ್ರಶ್ನೆಗಳು ವ್ಯಕ್ತವಾಗುತ್ತಿವೆ.
ವಾಸ್ತವವಾಗಿ, ಅಕ್ಷಯ್ ಕುಮಾರ್ ಅವರ ಈ ವಿಚಿತ್ರ ಅವತಾರ ಅವರ ಹೊಸ ಸಿನಿಮಾ ‘ಭೂತ್ ಬಂಗ್ಲಾ’ ಚಿತ್ರದ ಪ್ರಚಾರದ ತಂತ್ರವಾಗಿತ್ತು. ಚಿತ್ರದ ಥೀಮ್‌ಗೆ ತಕ್ಕಂತೆ ಅವರು ಈ ರೀತಿ ‘ಹರಿದ ಬಟ್ಟೆ’ಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೂ ಸಹ ಸೋಷಿಯಲ್ ಮೀಡಿಯಾದಲ್ಲಿ ಅವರ ಈ ಫೋಟೋಗಳು ಮತ್ತು ವಿಡಿಯೋಗಳು ಸಖತ್ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಮಾತ್ರ ನಟನ ಕಾಲೆಳೆಯುವುದನ್ನು ನಿಲ್ಲಿಸಿಲ್ಲ. ಹರಿದ ಶರ್ಟ್ ಮತ್ತು ಎರಡು ಟೈಗಳ ಈ ಕಾಂಬಿನೇಶನ್ ಅಕ್ಷಯ್ ಕುಮಾರ್ ವೃತ್ತಿಜೀವನದ ಅತ್ಯಂತ ವಿಚಿತ್ರ ಪಬ್ಲಿಕ್ ಅಪಿಯರೆನ್ಸ್ ಎಂದು ಬಣ್ಣಿಸಲಾಗುತ್ತಿದೆ.




