ಜಿಲ್ಲೆಸುದ್ದಿ

ಅಭ್ಯರ್ಥಿ ಗೆಲುವಿಗೆ ಅಭಿಮಾನಿಯ ಉರುಳುಸೇವೆ..

ಗದಗ: ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗೆಲುವಿಗಾಗಿ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಅಭಿಮಾನಿ ರಾಜು ಮುಗಳಿ ಉರುಳುಸೇವೆ ಮಾಡುವ ಮೂಲಕ ಗಮನ ಸೆಳೆದರು.

 

 

ಪುಟ್ಟರಾಜ ಗವಾಯಿಗಳ ಪುತ್ಥಳಿಯಿಂದ ಹನುಮ ದೇವರ ದೇವಸ್ಥಾನದ ವರೆಗೆ ಸುಮಾರು 100 ಮೀಟರ್ ಉರುಳು ಸೇವೆ ಮಾಡಿ ದೇವರಲ್ಲಿ ಪ್ರಾರ್ಥಿಸಲಾಯಿತು.

ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ, ಶಾಸಕ ಜಿ.ಎಸ್.ಪಾಟೀಲ, ಯುವ ಮುಖಂಡ ಮಿಥುನ್ ಪಾಟೀಲ, ಚನ್ನಬಸು ದೊಡ್ಡಮೇಟಿ, ಮುತ್ತಣ್ಣ ಮೇಟಿ ಮತ್ತಿತರರು ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button