ಉದ್ಯೋಗಟೆಕ್ ಲೈಫ್

ಎಲಾನ್ ಮಸ್ಕ್ ಕಂಪ್ಯೂಟರ್ ಬಳಸೋದೇ ಇಲ್ವಂತೆ..!

ವಿಶ್ವ ದಿಗ್ಗಜ ಉದ್ಯಮಿ, ಟೆಸ್ಲಾ, ಸ್ಟಾರ್ ಶಿಪ್ ಸೇರಿದಂತೆ ಏನೇನೆಲ್ಲ ಆವಿಷ್ಕರಿಸಿರುವ ಎಲಾನ್ ಮಸ್ಕ್ ಕಂಪ್ಯೂಟರ್ ಅನ್ನೇ ಬಳಸಲ್ವಂತೆ.. ಹೀಗೊಂದು ಹೊಸ ಸುದ್ದಿ ಬಯಲಿಗೆ ಬಂದಿದೆ.

ಎಲಾನ್ ಮಸ್ಕ್ ಮತ್ತು ಓಪನ್‌ ಎಐ ನಡುವೆ ಕಾನೂನು ಹೋರಾಟ ನಡೀತಿದೆ. ಈ ವೇಳೆ  ಮಸ್ಕ್ ಪರ ವಕೀಲರು “ಎಲಾನ್ ಮಸ್ಕ್ ಕಂಪ್ಯೂಟರ್ ಬಳಸುವುದಿಲ್ಲ” ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ.

ಆದರೆ ಮಸ್ಕ್ ಅವರ ಹಳೆಯ ಪೋಸ್ಟ್‌ಗಳಲ್ಲಿ ಕಂಪ್ಯೂಟರ್ ಬಳಸಿರೋದು ಕಂಡುಬಂದಿದೆ.

ಎಕ್ಸ್ (ಹಿಂದಿನ ಟ್ವಿಟ್ಟರ್) ನಲ್ಲಿ ಮಸ್ಕ್ ಹಲವಾರು ಬಾರಿ ಲ್ಯಾಪ್‌ಟಾಪ್ ಬಳಸುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ. 2024ರ ಡಿಸೆಂಬರ್‌ನಲ್ಲಿ ಅವರು ತಮ್ಮ ಲ್ಯಾಪ್‌ಟಾಪ್‌ನ ಫೋಟೋ ಹಂಚಿಕೊಂಡು, Diablo ಆಟವಾಡುತ್ತಾ ಸ್ಟಾರ್‌ಲಿಂಕ್ ಸ್ಟ್ರೀಮಿಂಗ್ ಪರೀಕ್ಷೆ ನಡೆಸುತ್ತಿದ್ದೆನೆ ಎಂದಿದ್ದರು. ಆ ಲ್ಯಾಪ್‌ಟಾಪ್‌ನಲ್ಲಿ ದೊಡ್ಡ ಡೋಜ್‌ಕಾಯಿನ್ ಸ್ಟಿಕರ್ ಇತ್ತು.

2025ರ ಜೂನ್‌ನಲ್ಲಿ, “ಇನ್ನೂ ನಾನು ಹಳೆಯ ಲ್ಯಾಪ್‌ಟಾಪ್ ಬಳಸುತ್ತಿದ್ದೇನೆ” ಎಂದಿದ್ದರು. ಫೋಟೋದಲ್ಲಿ ಅದು Gigabyte Aero ಲ್ಯಾಪ್‌ಟಾಪ್ ಆಗಿತ್ತು.

2024ರ ಫೆಬ್ರವರಿಯಲ್ಲಿ, ಅವರು ಹೊಸ ಲ್ಯಾಪ್‌ಟಾಪ್ ಖರೀದಿಸಿ ಮೈಕ್ರೋಸಾಫ್ಟ್‌ ಖಾತೆ ಸೆಟಪ್ ಮಾಡುವ ನಿರ್ಬಂಧದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

Comments (0)

Your email address will not be published. Required fields are marked *

Back to top button