ಬೆಂಗಳೂರು : ಬೆಂಗಳೂರು ಜಲಮಂಡಳಿಯಲ್ಲಿ ನಡೆಯೋ ಅಕ್ರಮಗಳು ಒಂದಾ ಎರಡಾ.. ಅಕ್ರಮಗಳನ್ನ ಮಂಡಳಿ ಹೊದ್ದು ಮಲಗಿದೆ ಅನ್ನುಸುತ್ತೆ. ಇಲ್ಲಿ ನಡೆಯೋ ಅದೆಷ್ಟೋ ಖತನಾರ್ಕ್ ಕೆಲಸ ಹಲವು ಬಾರಿ ಸಾಬೀತು ಆಗಿದೆ. ಇದೀಗ ಮತ್ತೊಂದು ಕಳ್ಳಾಟ ಬಟಾಬಯಲಾಗಿದೆ. ಹೌದು ಇಲ್ಲಿ ಅನರ್ಹ ಸಿಬ್ಬಂದಿಗೆ ಇಂಜಿನಿಯರ್ ಹುದ್ದೆ ನೀಡೋ ಮೂಲಕ ಜಲಮಂಡಳಿ ವಿವಾದ ಮೈಮೇಲೆ ಎಳೆದುಕೊಂಡಿದೆ.ಜತೆಗೆ ಇವ್ರ ಕಳ್ಳಾಟಕ್ಕೆ ಸ್ವತಃ ಮಂಡಳಿ ಹಿರಿಯ ಅಧಿಕಾರಿಗಳೇ ಸಾಥ್ ನೀಡಿರೋದು ಸಹ ಬಯಲಾಗಿದೆ..
ಜಲಮಂಡಳಿ..ಇದು ಇಡೀ ಬೆಂಗಳೂರಿಗೆ ನೀರು ಸರಬರಾಜು ಮಾಡುವ ಮಂಡಳಿ. ಒಂದು ದಿನ ಕಾವೇರಿ ನೀರು ಬಂದಿಲ್ಲ ಅಂದರೆ ನಗರದ ಜನ ತತ್ತರಿಸಿಹೋಗ್ತಾರೆ. ಆದ್ರೆ ಇಂತಹ ಮಂಡಳಿಯಲ್ಲಿ ಅಕ್ರಮಗಳು ಸಿಕ್ಕಪಟ್ಟೆ ನಡೆಯುತ್ತಿರೋ ಆರೋಪ ಇದೆ. ಇವರ ಆಟ ನೋಡಿದ್ರೆ ಇಲ್ಲಿ ಅಧಿಕಾರಿಗಳನ್ನು ಯಾರು ಹೇಳೋರಿಲ್ಲ ಕೇಳೋರಿಲ್ಲ ಅನ್ನಿಸುತ್ತೆ..ಇಲ್ಲಿ ಇವರು ಆಡಿದ್ದೇ ಆಟವಾಗಿದ್ದು,ಸಿಬ್ಬಂದಿ ಕೊರತೆ ಹೆಸರಿನಲ್ಲಿ ಸಿಕ್ಕಸಿಕ್ಕವರಿಗೆ ಆಯಕಟ್ಟಿನ ಜಾಗ ಪಡೆದುಕೊಂಡು ಸಖತ್ ಆಗಿ ಮೇಯುತ್ತಿದ್ದಾರೆ ಅನ್ನೋ ಆರೋಪ ಇದೆ.
ಇದೀಗ ಇಷ್ಟು ಸಾಲದು ಅಂತ ಕೋಟ್ಯಾಂತರ ರೂ ವೆಚ್ಚದ ಕಾಮಗಾರಿ ಯೋಜನೆಗಳಿಗೆ ಅರ್ಹತೆ ಇಲ್ಲದವರನ್ನ ನೇಮಕ ಮಾಡಲಾಗ್ತಿದೆ. ಈಗಾಗಲೇ ಮಂಡಳಿಯಲ್ಲಿ ಕೆಲಸದ ಒತ್ತಡ ಇಲ್ಲದಿದ್ರೂ ಬಡ್ತಿಗಾಗಿಯೇ ಹತ್ತು ಚೀಫ್ ಇಂಜಿನಿಯರ್ ಗಳನ್ನ ನೇಮಕ ಮಾಡಲಾಗಿದೆ.,ಇದೀಗ ಇಷ್ಟು ಸಾಲದು ಅಂತ ಸಿಬ್ಬಂದಿ ಕೊರತೆ ನೆಪವೊಡ್ಡಿ ಮಂಡಳಿಯಲ್ಲಿ ಕೆಲಸ ನಿರ್ವಹಿಸುತ್ತಿರೋ ಟೈಪಿಸ್ಟ್ ,ವಾಟರ್ ಇನ್ಸ್ ಪೆಕ್ಟರ್ ಗಳಿಗೂ ಜೂನಿಯರ್ ಇಂಜಿನಿಯರ್ ಆಗಿ ನೇಮಕ ಮಾಡಲಾಗಿದೆ. ಬೆಂಗಳೂರು ಜಲಮಂಡಳಿ ಮಾತ್ರ ಯಾವ ಇಲಾಖೆಯಲ್ಲೂ ಅನರ್ಹತೆ ಇಲ್ಲದವರನ್ನ ಇಂಜಿನಿಯರ್ ಆಗಿ ನೇಮಕ ಮಾಡೋಕೆ ಅವಕಾಶ ಇಲ್ಲ. ಆದರೆ ಮಂಡಳಿಯಲ್ಲೇ 20-30 ವರ್ಷ ಸೇವೆ ಸಲ್ಲಿಸಿರೋ ಕಡಿಮೆ ವಿದ್ಯಾರ್ಹತೆ ಆಗಿದ್ರೂ ಇಂಜಿನಿಯರ್ ಹುದ್ದೆ ನೀಡಲಾಗಿದೆ. ದುಡ್ಡಿನ ದುರಾಸೆಗಾಗಿ ಡ್ರೈವರ್ ಗಳಿಗೆ ಕಿರಿಯ ಅಭಿಯಂತರ ಹುದ್ದೆ ನೀಡಿರೋದು ಮಂಡಳಿಯಲ್ಲೇ ಅಪಸ್ಪರ ಎದ್ದಿದೆ. ಮಂಡಳಿಯ ಈ ಬೇಕಾಬಿಟ್ಟಿ ನಿರ್ಧಾರಕ್ಕೆ ಆಕ್ರೋಶಕ ಸಹ ಭುಗಿಲೆದ್ದಿದೆ.
ಈ ಹಿಂದೆ ಮೀಟರ್ ರೀಡರ್ ಹಾಗೂ ಚಾಲಕರಿಗೂ ಗೂ ಕಿರಿಯ ಅಭಿಯಂತರ ಹುದ್ದೆ ನೀಡಿದ್ರು. ವಿರೋಧದ ಬಳಿಕ ರದ್ದು ಮಾಡಲಾಗಿತ್ತು.ಆದ್ರೆ ಇದೀಗ ಟೈಪಿಸ್ಟ್, ಆಗಿರೋ ನಳಿನಾಕ್ಷಿ ಹಾಗೂ ವಾಟಾರ್ ಇನ್ಸ್ ಪೆಕ್ಟರ್ ಆಗಿರೋ ವಿಶ್ವನಾಥ್ ಅನ್ನೋ ಸಿಬ್ಬಂದಿಗೆ ಕಿರಿಯ ಅಭಿಯಂತರ ಹುದ್ದೆ ನೀಡಲಾಗಿದೆ. ಹುದ್ದೆ ನೀಡಿರೋ ಹಿಂದೇ ಲಕ್ಷ ಲಕ್ಷ ಡೀಲಿಂಗ್ ನಡೆದಿರೋ ಆರೋಪ ಇದೆ. ಯಾವುದೇ ಸರ್ಕಾರಿ ಇಲಾಖೆಯಲ್ಲಿ ಒಂದು ಹುದ್ದೆಯಿಂದ ಒಬ್ಬ ಅಧಿಕಾರಿ ನಿವೃತ್ತಿ ಅಥವಾ ವರ್ಗಾವಣೆ ಆದ್ರೆ ಆ ಸ್ಥಾನಕ್ಕೆ ಅರ್ಹತೆ ಇರೋ ವ್ಯಕ್ತಿಯನ್ನ ಕೂರಿಸಬೇಕಾಗುತ್ತೆ. ಸಿಬ್ಬಂದಿ ಕೊರತೆ ಎದುರಾಗಿದ್ರೆ ಸೀನಿಯಾರಿಟಿ ಆಧಾರದ ಮೇಲೆ ಅದೇ ಇಲಾಖೆಯ ಅಧಿಕಾರಿಯನ್ನ ಪ್ರಭಾರ ಹುದ್ದೆಯಲ್ಲಿ ಕೂರಿಸಲಾಗುತ್ತೆ. ಕಾನೂನಿನ ಪ್ರಕಾರ ಪ್ರಭಾರ ಸ್ಥಾನದಲ್ಲಿ ಮುಂದುವರೆಯಲು 3 ರಿಂದ 6 ತಿಂಗಳು ಮಾತ್ರ ಅವಕಾಶ ಇದೆ. ಆದ್ರೆ ಈ ನಿಯಮವನ್ನು ಉಲ್ಲಂಘಿಸಿರೊ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಯಮಗಳನ್ನು ಗಾಳಿಗೆ ತಳ್ಳಿ ಮಂಡಳಿ ಬಗ್ಗೆ ಏನು ಅರಿವು ಇಲ್ಲದ ಅಧಿಕಾರಿಯನ್ನ ಆಯಕಟ್ಟಿನ ಜಾಗದಲ್ಲಿ ಕೂರಿಸಲಾಗಿದೆ.ಇದು ಮಂಡಳಿಯಲ್ಲೇ ಕೆಲ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ..
ಒಟ್ಟಿನಲ್ಲಿ ಬೆಂಗಳೂರು ಜಲಮಂಡಳಿಯಲ್ಲಿ ಅತಿ ದೊಡ್ಡ ಹುದ್ದೆಗಳೇ ದುರ್ಬಳಕೆ ಆಗ್ತಿರೋ ಆರೋಪ ಇದೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಕೂಡಲೇ ಅರ್ಹ ಅಧಿಕಾರಿಗಳನ್ನ ನೇಮಕ ಮಾಡುವ ಮೂಲಕ ಹುದ್ದೆಯ ಮಾರ್ಯದೆ ಉಳಿಸಬೇಕಿದೆ.ಇಲ್ಲವಾದ್ರೆ ಮಂಡಳಿ ಮಾರ್ಯಾದೆ ಬೀದಿಪಾಲಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ..