Friday, February 13, 2026
23.9 C
Bengaluru
Google search engine
LIVE
ಮನೆಸಿನಿಮಾಸೂರಜ್ ಗೌಡ ನಟನೆಯ 'ಡೈರೆಕ್ಟರ್ಸ್ ಕಟ್' ;ಉತ್ತರಾಖಂಡದಲ್ಲಿ ಶೂಟಿಂಗ್!

ಸೂರಜ್ ಗೌಡ ನಟನೆಯ ‘ಡೈರೆಕ್ಟರ್ಸ್ ಕಟ್’ ;ಉತ್ತರಾಖಂಡದಲ್ಲಿ ಶೂಟಿಂಗ್!

ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಸೂರಜ್ ಗೌಡ ನಾಯಕನಾಗಿ ನಟಿಸುತ್ತಿರುವ ‘ಡೈರೆಕ್ಟರ್ಸ್ ಕಟ್’ ಚಿತ್ರಕ್ಕೆ ಕೆಂಗೇರಿಯ ವಿಶ್ವವಿದ್ಯಾ ಗಣಪತಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ರಾಜೇಶ್ವರಿ ಎಂಟರ್ಪ್ರೈಸ್ ಬ್ಯಾನರ್ ಅಡಿಯಲ್ಲಿ ಹೇಮಲತಾ ಬಿ.ಎಸ್. ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಭರತ್ ವಿ.ಜೆ. ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮತ್ತು ಚಿತ್ರರಂಗದ ಹಲವು ಗಣ್ಯರು ಭಾಗವಹಿಸಿ ಚಿತ್ರಕ್ಕೆ ಶುಭ ಹಾರೈಸಿದರು.

ಈ ಸಿನಿಮಾದ ವಿಶೇಷತೆಯೆಂದರೆ ಇದೊಂದು ‘ಸಿನಿಮಾದೊಳಗಿನ ಸಿನಿಮಾ’ ಕಥೆಯನ್ನು ಹೊಂದಿದೆ. ಕನ್ನಡದ ಚಲನಚಿತ್ರ ನಿರ್ದೇಶಕನೊಬ್ಬ ತನ್ನ ಸಿನಿಮಾದ ಚಿತ್ರೀಕರಣಕ್ಕಾಗಿ ದೇವಭೂಮಿ ಉತ್ತರಾಖಂಡಕ್ಕೆ ಹೋದಾಗ ಅಲ್ಲಿ ಎದುರಾಗುವ ಸವಾಲುಗಳು ಮತ್ತು ರೋಚಕ ಘಟನೆಗಳ ಸುತ್ತ ಕಥೆ ಸಾಗುತ್ತದೆ. ಸೂರಜ್ ಗೌಡ ಅವರು ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಧಾ ಎಸ್. ಭಾಗಿ ದಕ್ಷಿಣ ಭಾರತದ ನಾಯಕಿಯಾಗಿ ಹಾಗೂ ದಿವ್ಯ ಜೈನ್ ಉತ್ತರ ಭಾರತದ ನಾಯಕಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಪಿ.ಡಿ. ಸತೀಶ್ ಮತ್ತು ಸ್ವಾತಿ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

ಚಿತ್ರದ ಬಹುತೇಕ ಭಾಗವನ್ನು ಉತ್ತರಾಖಂಡದ ಸುಂದರ ತಾಣಗಳಲ್ಲಿ ಸೆರೆಹಿಡಿಯಲು ಚಿತ್ರತಂಡ ಯೋಜಿಸಿದೆ. ಪ್ರಮೋದ್ ಗೌಡ ಅವರ ಛಾಯಾಗ್ರಹಣ, ಕಲ್ಯಾಣ್ ಮಂಜುನಾಥ್ ಅವರ ಸಂಗೀತ ಮತ್ತು ಪ್ರಮೋದ್ ಜೋಯಿಸ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ‘ಖೇಲಾ’ ಚಿತ್ರದ ನಂತರ ಭರತ್ ವಿ.ಜೆ. ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ಇದೇ ತಿಂಗಳ 25ರಿಂದ ಚಿತ್ರೀಕರಣ ಆರಂಭವಾಗಲಿದೆ. ಈ ವರ್ಷ ಸೂರಜ್ ಗೌಡ ಅವರ ಒಟ್ಟು ಮೂರು ಚಿತ್ರಗಳು ತೆರೆಗೆ ಬರಲಿರುವುದು ಅವರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments