ಬೀದರ್ ಏರ್ಪೋರ್ಟ್ಗೆ ಮಹಾತ್ಮ ಬೊಮ್ಮಗೊಂಡೇಶ್ವರ ಹೆಸರು ನಾಮಕರಣ ಮಾಡಲು ಹಲವರು ಮನವಿ ಮಾಡಿದ್ದಾರೆ.
ಮಹಾತ್ಮ ಬೊಮ್ಮಗೊಂಡೇಶ್ವರ ಬೀದರ ಜನತೆಗೆ ಭೂಮಿಯಿಂದ ನೀರು ತೆಗೆದು ನೀರುಣಿಸಿದ ಮಹಾನ್ ಸಂತ. ಬೀದರ್ ಕೋಟೆ ನಿರ್ಮಾಣಕ್ಕೆ ತನ್ನ ತನು ಮನ ಧನದಿಂದ ಕುರಿ ಕಾಯುತ್ತ, ಕಾಯಕ ಮಾಡುತ್ತ ಸೇವೆಗೈದ ಮಹಾನ ಪುರುಷ ಮಹಾತ್ಮ ಬೊಮ್ಮಗೊಂಡರು.
ಬೀದರ್ ಏರಪೋರ್ಟಿಗೆ ಸಮೀಪ ಇರುವ ಚಿದ್ರಿ ಗ್ರಾಮದಲ್ಲಿ, ಬೊಮ್ಮಗೊಂಡೇಶ್ವರರು ಜನಿಸಿದ್ದರು. ಬೀದರ್ ಜಿಲ್ಲೆಯಲ್ಲಿ ಗೊಂಡ ಸಮುದಾಯದ ಮತದಾರರು ಹೆಚ್ಚಿದ್ದಾರೆ. ಹೀಗಾಗಿ ಬೀದರ್ ಏರ್ಪೋರ್ಟ್ಗೆ ಮಹಾತ್ಮ ಬೊಮ್ಮಗೊಂಡೇಶ್ವರ ಹೆಸರು ನಾಮಕರಣ ಮಾಡಿದರೆ ಈ ಭಾಗದ ಜನತೆಗೆ ಸಂತೋಷವಾಗುತ್ತದೆ ಎಂದು ಗೊಂಡ ಸಮುದಾಯ ಆಗ್ರಹಿಸಿದೆ.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪುರ ಗ್ರಾಮದ ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣ (ಖಂಡೋಬಾ) ಪುಣ್ಯ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಬಹು ಪ್ರಸಿದ್ದಿಯನ್ನು ಪಡೆದಿದೆ.
ಇಲ್ಲಿಗೆ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದ ಖಂಡೋಬಾ ದರ್ಶನಕ್ಕೆ ಬರುತ್ತಾರೆ. ಆದುದರಿಂದ ಅವರಿಗೆ ತಂಗುವದಕ್ಕಾಗಿ ಯಾತ್ರಿಕ ನಿವಾಸವನ್ನು ನಿರ್ಮಾಣ ಮಾಡಬೇಕು ಎಂದು ಕೊಮ್ ರಾಮ್ ಭೀಮ್ ಗೊಂಡ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಮದ್ರಕಿ ಮತ್ತು ಸುರೇಶ ಮಾಳಗೆ ಒತ್ತಾಯಿಸಿದ್ದಾರೆ.