ಬೆಂಗಳೂರು : ಬಿಗ್ ಬಾಸ್ ಸೀಝನ್ ೧೦ ಮುಗಿಯುವ ಹಂತದಲ್ಲಿರುವಾಗಲೇ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿದೆ ,ಡ್ರೋನ್ ಪ್ರತಾಪ್ ವಿರುದ್ಧ ೮೦ ಲಕ್ಷ ದೋಖಾ ಆರೋಪ ಮಾಡಿದ್ದ ಸಾರಂಗ್ ಮಾನೆ ಈಗ ತನ್ನ ಹಣಕ್ಕಾಗಿ ಪಟ್ಟು ಹಿಡಿಯುತ್ತಿದ್ದಾರೆ ,ಕಾನೂನು ಹೋರಾಟ ಮಾಡುವೆ ಎನ್ನುತ್ತಿದ್ದ ಸಾರಂಗ್ ಮಾನೆ, ಈಗ ಡ್ರೋನ್ ಪ್ರತಾಪ್ಗೆ ಗಡುವು ಕೊಟ್ಟಿದ್ದಾರೆ , ಡೆಡ್ ಲೈನ್ ಕೊಟ್ಟಿರುವ ಸಾರಂಗ್ ರೋಷ ವೇಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ,ಬಿಗ್ ಬಾಸ್ ಶೋ ಮುಗಿಯುತ್ತಿದ್ದಂತೆ ನನ್ನ ಹಣ ವಾಪಸ್ ಕೊಡಬೇಕು ಇಲ್ಲದಿದ್ದರೆ ,ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿಕೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ಡ್ರೋನ್ ಪ್ರತಾಪ್ ನನ್ನನ್ನು ನಂಬಿಸಿ ದ್ರೋಹ ಮಾಡಿದ್ದಾನೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ ಎಂದು ಎರಡು ದಿನಗಳ ಹಿಂದೆಯಷ್ಟೇ ಸಾರಂಗ್ ಮಾನೆ ಎನ್ನುವವರು ಆರೋಪ ಮಾಡಿದ್ದರು. ಈ ಕುರಿತಂತೆ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಅವರು ತಿಳಿಸಿದ್ದರು. ಇದೀಗ ಪ್ರತಾಪ್ ಅವರಿಗೆ ಸಮಯ ನೀಡುವುದಾಗಿ ತಿಳಿಸಿದ್ದಾರೆ.
ಪ್ರತಾಪ್ ನ ಕಂಪೆನಿಯಾದ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜೊತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಸಾರಂಗ್ ಮಾನೆ, ನಮ್ಮ ಜೊತೆ ಪ್ರತಾಪ್ ಬ್ಯುಸಿನೆಸ್ ಒಪ್ಪಂದಕ್ಕೆ ಒಪ್ಪಿದ್ದು ಕೊಡಬೇಕಿದ್ದ ಡ್ರೋನ್ ಗಳನ್ನ ಕೊಟ್ಟಿಲ್ಲ, ಅವುಗಳಿಗಾಗಿ ಕೊಟ್ಟಿದ್ದ ಹಣವನ್ನ ಕೂಡ ನೀಡದೆ ವಂಚನೆ ಮಾಡ್ತಿರುವುದಾಗಿ ಆರೋಪ ಮಾಡಿದ್ದಾರೆ ಸಾರಂಗ್ ಮಾನೆ.
ಪ್ರತಾಪ್ ಕಳೆದ ಎಂಟು ತಿಂಗಳ ಹಿಂದೆ ಮಹಾರಾಷ್ಟ್ರದ ದುಲೇನಲ್ಲಿ ಭೇಟಿ ಮಾಡಿದ್ರಂತೆ. ಅವಾಗ ಬ್ಯುಸಿನೆಸ್ ಪಾಟ್ನರ್ ಮಾಡಿಕೊಂಡು 9 ಡ್ರೋನ್ ಗಳನ್ನ ನೀಡುವುದಾಗಿ ಹೇಳಿ 35 ಲಕ್ಷ ತೆಗೆದುಕೊಂಡಿದ್ರಂತೆ ಪ್ರತಾಪ್. ಆದರೆ ಡ್ರೋನ್ ಗಳನ್ನ ನೀಡಲು ಸತಾಯಿಸಿದ್ದಾರೆ ಪ್ರತಾಪ್ .ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದ ಹಾಗೂ ಎರಡು ಡ್ರೋನ್ ಗಳನ್ನ ನೀಡಿದ್ದ ಪ್ರತಾಪ್ ಅದಾದ ನಂತರ ಮತ್ತೆ ಡಿಲೇ ಮಾಡಿ ಮತ್ತೆರಡು ಡ್ರೋನ್ ಕಳುಹಿಸಿದ್ದರಂತೆ.
ಆದರೆ ಕೊಟ್ಟಿರುವ ನಾಲ್ಕು ಡ್ರೋನ್ ಗಳು ಈಗ ಕೆಲಸ ಮಾಡುತ್ತಿಲ್ಲ. ಬ್ಯಾಟರಿಗಳ ಕ್ವಾಲಿಟಿ ಸರಿಯಿಲ್ಲದೆ ಒಂದು ಡ್ರೋನ್ ಹಾಳಾಗಿದ್ರೆ , ಮತ್ತೊಂದು ಡ್ರೋನ್ ಹಾರಬೇಕಾದರೆ ಕೆಳಗಡೆ ಬಿದ್ದು ಹೋಗಿ ಮೂಲೆ ಸೇರಿವೆ ಎಂದಿದ್ದಾರೆ ಸಾರಂಗ್. ಇತ್ತ ಡ್ರೋನ್ ಕೊಡುವುದಾಗಿ ಹೇಳಿ ರೈತರಿಂದ ಹಣ ಪಡೆದಿದ್ದ ಸಾರಂಗ್, ಇದೀಗ ಹಣನೂ ಹಿಂದಿರುಗಿಸಲು ಆಗದೆ ಕಂಪೆನಿ ಕೂಡ ಲಾಸ್ ನಲ್ಲಿ ನಡೆಯುತ್ತಿದ್ದು ಕಷ್ಟ ಪಡುತ್ತಿರುವುದಾಗಿ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ 30 ನೇ ತಾರೀಖಿನವರೆಗೂ ಸಮಯ ಕೊಟ್ಟು, ಆನಂತರ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ ಸಾರಂಗ್ ಮಾನೆ .
ಒಟ್ಟಾರೆ ಬಿಗ್ ಬಾಸ್ ಗೆದ್ದು ಬೀಗೋ ಹುಮ್ಮಸ್ಸಿನಲ್ಲಿರುವ ಯುವ ಡ್ರೋನಾಚಾರ್ಯನಿಗೆ ಸಾರಂಗ್ ಕಂಟಕರಾಗ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.