ಸಿನಿಮಾ : ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾಟೇರ ಸಿನಿಮಾ ಮೂರು ವಾರಗಳಲ್ಲೇ 200 ಕೋಟಿ ಗಳಿಕೆ ಮಾಡುವ ಮುಖಾಂತರ ಹೊಸ ದಾಖಲೆಯನ್ನು ಮಾಡಿದೆ. ಈ ಮೂಲಕ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ದರ್ಶನ್ ಅವರ ಅಪ್ಪಟ ಕನ್ನಡದ ಕಾಟೇರ ತಿರುಗೇಟು ನೀಡಿದೆ.
ಈಗಾಗಲೇ 3 ವಾರ ಕಂಪ್ಲೀಟ್ ಮಾಡಿರುವ ಕಾಟೇರ, ನಾಲ್ಕನೇ ವಾರದಲ್ಲಿ ಕೂಡ ಸಕ್ಸಸ್ ಫುಲ್ಲಾಗಿ ರನ್ ಆಗ್ತಿದೆ. ಮೂರುವಾರ ಪೂರ್ತಿ ಮಾಡಿರುವ ಕಾಟೇರ ಇನ್ನೂರ ಆರು ಕೋಟಿ ಗಳಿಕೆ ಮಾಡಿದೆ ಎನ್ನಲಾಗಿದೆ. ತರುಣ್ ಸುಧೀರ್ ನಿರ್ದೇಶನ ಮಾಡಿರುವ ಕಾಟೇರ ಸಿನಿಮಾಗೆ ಬಿಡುಗಡೆಯಾದ ಮೊದಲ ದಿನದಲ್ಲೂ ಕೂಡ ಪಾಸಿಟಿವ್ ರೆಸ್ಪಾನ್ಸ್ ಬಂದಿತ್ತು. ಅಭಿಮಾನಿಗಳು ಕಾಟೇರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು . ವಿಮರ್ಶಕರು ಕೂಡ ಕಾಟೇರ ಸಿನಿಮಾ ಬಗ್ಗೆ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದರು. ಕನ್ನಡದಲ್ಲಿ ಸಕ್ಸಸ್ ಕಂಡ ಕಾಟೇರ ವಿದೇಶದಲ್ಲೂ ಕೂಡ ಕನ್ನಡದಲ್ಲಿ ಬಿಡುಗಡೆಯಾಗಿ ಅಲ್ಲು ಕೂಡ ಯಶಸ್ವಿಯಾಗಿತ್ತು.
ಕೇವಲ ಕನ್ನಡದಲ್ಲಿ ಬಿಡುಗಡೆಯಾಗಿ ಕರ್ನಾಟಕದಲ್ಲೇ 200 ಕೋಟೆ ಗಳಿಕೆ ಮಾಡಿದ ಮೊದಲ ಸಿನಿಮಾ ವಾಗಿ ದರ್ಶನ್ ಅವರ ಕಾಟೇರ ಹೊರಹೊಮ್ಮಿದೆ. ಈ ಮುಖಾಂತರ ಕಾಟೇರ ಕನ್ನಡ ಸಿನಿಮಾ ರಂಗದಲ್ಲಿ ಇಂಡಸ್ಟ್ರಿ ಹಿಟ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ . ಈ ಹಿಂದೆ ಕರ್ನಾಟಕದಲ್ಲಿ ಕಾಂತಾರ, ಕೆಜಿಎಫ್ ಚಾಪ್ಟರ್- 2 , ರಾಜಕುಮಾರ ಸಿನಿಮಾಗಳು ಅತಿ ಹೆಚ್ಚು ಕಲೆಕ್ಷನ್ ಜೊತೆ ಅತಿ ಹೆಚ್ಚು ಟಿಕೆಟ್ ಸೇಲ್ ಆಗಿತ್ತು. ಇದೀಗ ದರ್ಶನ್ ಕಾಟೇರ ಸಿನಿಮಾ ಅತಿ ಹೆಚ್ಚು ಗಳಿಕೆ ಮಾಡುವ ಮುಖಾಂತರ ಹೊಸ ದಾಖಲೆ ಮಾಡಿದೆ. ಮುಂದಿನ ದಿನಗಳಲ್ಲಿ ಕಾಟೇರ ಸಿನಿಮಾ ಇತರೆ ಭಾಷೆಗಳಿಗೆ ಡಬ್ ಆಗಿ ಬಿಡುಗಡೆ ಆಗಬಹುದು.
ಒಟ್ಟಾರೆಯಾಗಿ ಕನ್ನಡ ಸಿನಿಮಾ ರಂಗಕ್ಕೆ ಕಾಟೇರ ಸಿನಿಮಾ ಹೊಸ ಚೈತನ್ಯವನ್ನು ನೀಡಿದೆ. ದರ್ಶನ್ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ದರ್ಶನ್ ಗೆ ಜೋಡಿಯಾಗಿ ಮಾಲಾಶ್ರೀ ಮಗಳು ಆರಾಧನಾ ನಟಿಸಿದ್ರು ತಾರಾ, ಬಿರಾದರ್, ಜಗಪತಿಬಾಬು ಸೇರಿ ದೊಡ್ಡ ಕಲಾವಿದರ ದಂಡೆ ಕಾಟೇರ ಸಿನಿಮಾದಲ್ಲಿತ್ತು.