ರಾಜ್ಯಸುದ್ದಿ

ಸಿಲಿಂಡರ್‌ ಸ್ಫೋಟ: ಓರ್ವ ಸಾವು.. ಮೂವರಿಗೆ ಗಂಭೀರ ಗಾಯ

ಬೆಂಗಳೂರು: ಅಡುಗೆ ಮನೆಯ ಸಿಲಿಂಡರ್​ ಸ್ಫೋಟಗೊಂಡು ಬೃಹತ್​​​​​​ ಕಟ್ಟಡ ನೆಲಸಮಗೊಂಡಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಬೆಂಗಳೂರಿನ ಕೆ.ಆರ್​​​​ ಪುರಂನ ತ್ರಿವೇಣಿ ನಗರದಲ್ಲಿ ಅವಘಡ ಸಂಭವಿಸಿದೆ..

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡ್ತಿದ್ದಾರೆ. ಬೆಳಗ್ಗೆ 7 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದ ತೀವ್ರತೆಗೆ ಭಾರೀ ಕಟ್ಟಡವೇ ನೆಲಸಮ ಆಗಿದೆ. ಅಕ್ಕಪಕ್ಕದ ಮನೆಗಳ ಕಿಟಕಿಗಳು ಹಾನಿಯಾಗಿದೆ.

ಘಟನಾ ಸ್ಥಳದಲ್ಲಿ ಕೆ.ಆರ್‌ ಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬಾಂಬ್ ಸ್ಕ್ವಾಡ್‌ ಹಾಗೂ ಡಾಗ್ ಸ್ಕ್ವಾಡ್ ಅಧಿಕಾರಿಗಳಿಂದಲೂ ಸ್ಥಳ ಪರಿಶೀಲನೆ ನಡೆಯುತ್ತಿದೆ. ಸ್ಫೋಟಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿಯಬೇಕಿದೆ.

Comments (0)

Your email address will not be published. Required fields are marked *

Back to top button