ಸಂವಿಧಾನ ಜಾಗೃತಿ ಜಾಥಾ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನವನ್ನ ಅವಮಾನಿಸುತ್ತಿದೆ ಎಂದು ಮಾಜಿ ಶಾಸಕ ಸಿಟಿ ರವಿ ಕಿಡಿಕಾರಿದರು. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ ಕಾಂಗ್ರೆಸ್ ವಿರುದ್ಧ ಕೆಂಡಕಾರಿದ್ದಾರೆ,ಕಾಂಗ್ರೆಸ್ ಪಕ್ಷ ಸಂವಿಧಾನವನ್ನ ೮೧ ಬಾರಿ ತಿದ್ದುಪಡಿ ಮಾಡಿದೆ,ನಿಜವಾದ ಅಂಬೇಡ್ಕರ್ ವಿರೋಧಿಗಳು ಕಾಂಗ್ರೆಸ್ಸಿಗರು ಎಂದರು ,ಸಂವಿಧಾನ ಪೀಠಿಕೆ ಬದಲಿಸುವುದರೊಂದಿಗೆ ಅಂಬೇಡ್ಕರ್ ರವರವನ್ನ ಅವಮಾನ ಮಾಡಿರುವ ಖ್ಯಾತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕಿದೆ.
ಜಾಗೃತಿ ಜಾಥಾದ ಹೆಸರಲ್ಲಿ ಮೋದಿಯನ್ನ ಟೀಕೆ ಮಾಡಿರುವುದು ಖಂಡನೀಯ ,ಕಾಂಗ್ರೆಸ್ಸಿನ ಸಂಸದರೊಬ್ಬರು ಉತ್ತರ ದಕ್ಷಿಣವೆಂದು ಹೇಳಿ ಭಾರತವನ್ನೇ ತುಂಡುಮಾಡಲು ಹೊರಟಿದ್ದಾರೆ ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನದ ಬಗ್ಗೆ ಮಾತಾನಾಡಲು ಯಾವ ನೈತಿಕತೆ ಇದೆ ಎಂದು ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.
https://youtu.be/ZjV1NiFGpiU?si=RO91mxBe8rfvUy1a