Freedom TV

ಮುಸ್ಲಿಂ ಗುಂಡಾಗಳಿಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿದೆ -ಕೆ‌.ಎಸ್ ಈಶ್ವರಪ್ಪ

ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ, ಮುಸ್ಲಿಂ ಗುಂಡಾಗಳಿಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆ‌.ಎಸ್ ಈಶ್ವರಪ್ಪ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆಯುತ್ತಿದ್ದಾರೆ. ಹುಬ್ಬಳ್ಳಿ ಯುವತಿಯ ಕಗ್ಗೋಲೆ ಆಗಿದೆ. ಕಾಲೇಜ್ ಆವರಣದಲ್ಲಿ ನುಗ್ಗಿ ಮುಸ್ಲಿಂ ಯುವಕ ಕೊಲೆ ಮಾಡಿದ್ದಾನೆ  ರಾಜ್ಯ ಸರ್ಕಾರ ಕೂಲೆಗಡುಕನ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ಆಗಬೇಕು, ಸರ್ಕಾರ ಇದುವರೆಗೆ ಹಿಂದೂಗಳಿಗೆ ರಕ್ಷಣೆ ಕೊಡುತ್ತೇವೆ ಎಂದು ಹೇಳಿಲ್ಲ, ಕೊಲೆಗಡುಕರನ್ನು ನೇಣುಗೆ ಹಾಕಬೇಕು. ಆಗ ಹಿಂದೂ ಸಮಾಜಕ್ಕೆ ಸ್ವಲ್ಪ ಸಮಾಧಾನ ಆಗಬಹುದು. ಸಿಎಂ, ಗೃಹ ಸಚಿವರು ರಾಜ್ಯದ ಜನರ ಜೊತೆ ಇದ್ದೇವೆ ಅನ್ನುವ ಮಾತು ಹೇಳಬೇಕು. ಸೋಮವಾರ ದಿನ ನೇಹ ಹತ್ಯೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ರಾಷ್ಟ್ರಭಕ್ತ ಬಳಗದಿಂದ ಪ್ರತಿಭಟನೆ ಮಾಡುತ್ತೇವೆ ಎಂದರು.

ಪ್ರತಿಭಟನೆಗೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಚೆನ್ನಗಿರಿಯಲ್ಲಿ ಸಹ ಯುವಕನಿಗೆ ಚಾಕು ಇರಿಯಲಾಗಿದೆ. ಹಿಂದೂಗಳಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ ಆಗಿದೆ. ಹಿಂದೂ ಸಮಾಜ ಜಾಗೃತ ಆದರೆ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯಲ್ಲ, ಸರ್ಕಾರ ಅಧಿಕಾರ ಕಳೆದುಕೊಳ್ಳಬಹುದು. ಹುಬ್ಬಳ್ಳಿ ಪ್ರಕರಣದ ಬಗ್ಗೆ ಬಹಳ ಬೆಜವ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಹಿಂದೂ ವಿರೋಧಿ ಸರ್ಕಾರ ಬಹಳ ದಿನ ಉಳಿಯಲ್ಲ ಸಂತೋಷ ಲಾಡ್ ಮಗಳಿಗೆ ಹೀಗೆ ಆಗಿದ್ದರೆ ಹೀಗೆ ಹೇಳುತ್ತಿದ್ದರಾ.? ಎಂದರು.

Comments (0)

Your email address will not be published. Required fields are marked *

Back to top button