Thursday, November 20, 2025
19.5 C
Bengaluru
Google search engine
LIVE
ಮನೆಜಿಲ್ಲೆರಾಜ್ಯದಲ್ಲಿ ಸಿಗರೇಟ್‌ ನಿಷೇಧ ಆಗುತ್ತಾ.?

ರಾಜ್ಯದಲ್ಲಿ ಸಿಗರೇಟ್‌ ನಿಷೇಧ ಆಗುತ್ತಾ.?

ಬೆಂಗಳೂರು: ರಾಜ್ಯದಲ್ಲಿ ಸಿಗರೇಟ್‌ ನಿಷೇಧ ವಯೋಮಿತಿ ಹೆಚ್ಚಳ ಹಾಗೂ ಹುಕ್ಕಾ ಬಾರ್ ನಿಷೇಧ ಮಾಡುವ ನಿಟ್ಟಿನಲ್ಲಿ ಮಹತ್ವದ ವಿಧೇಯಕವನ್ನು ವಿಧಾನಸಭೆಯಲ್ಲಿ ‌ಅಂಗೀಕಾರ ಮಾಡಲಾಯಿತು.
2024 ನೇ ಸಾಲಿನ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ ಕರ್ನಾಟಕ ತಿದ್ದುಪಡಿ ವಿಧೇಯಕಯನ್ನು ಆರೋಗ್ಯ ‌ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದರು. ವಿರೋಧ ಪಕ್ಷಗಳ ಮೆಚ್ಚುಗೆ ಜೊತೆಗೆ ಈ ವಿಧೇಯಕ ಅಂಗೀಕಾರಗೊಂಡಿತು.

ವಿಧೇಯಕ ಮಂಡಿಸಿ ಮಾತನಾಡಿದ ಆರೋಗ್ಯ ‌ಸಚಿವ ದಿನೇಶ್ ಗುಂಡೂರಾವ್, ‘ ಬಾರ್ ಹಾಗೂ ರೆಸ್ಟೋರೆಂಟ್ ಮತ್ತು ಇತರ ಕಡೆಗಳಲ್ಲಿ ಹುಕ್ಕಾ ಬಾರ್ ನಡೆಸಲಾಗ್ತಿದೆ. ಹುಕ್ಕಾ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಹುಕ್ಕಾ ಬಾರ್ ನಲ್ಲಿ ತಂಬಾಕು, ನಿಕೋಟಿನ್, ನಾರ್ಕೋಟಿಸ್ಸ್ ಬಳಕೆ ಮಾಡಲು ಅವಕಾಶ ಇದೆ. ಅನೇಕ ಬಾರ್ ಹಾಗೂ ರೆಸ್ಟೋರೆಂಟ್ ನಲ್ಲಿ ಹುಕ್ಕಾ ಬಾರ್ ಇದೆ. ಇದನ್ನು ನಿಯಂತ್ರಣ ಮಾಡಲು ವಿಧೇಯಕ ತರಲಾಗಿದೆ ಎಂದರು.
ಹುಕ್ಕಾ ಬಾರ್ ಗಳು ಯುವಕರಿಗೆ ತಂಬಾಕು ಬಳಕೆಯ ಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಬಗ್ಗೆ ಹುಕ್ಕಾ ಬಾರ್ ಮಾಲೀಕರು ನ್ಯಾಯಾಲಯಕ್ಕೆ‌ ಹೋಗಿದ್ದಾರೆ. ಆದರೆ ಕೋರ್ಟ್ ಸ್ಟೇ ಕೊಟ್ಟಿಲ್ಲ ಎಂದರು.

ಅನಧಿಕೃತ ಹುಕ್ಕಾ ಬಾರ್ ನಡೆಸಿದರೆ ಜೈಲು ಶಿಕ್ಷೆ ಹುಕ್ಕಾ ಬಾರನ್ನು ಅನಧಿಕೃತವಾಗಿ‌ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆಗೆ ಅವಕಾಶ ಇದೆ. ಮತ್ತು 50 ರಿಂದ ಒಂದು ಲಕ್ಷ ದಂಡ ವಿಧಿಸಲು ಅವಕಾಶ ವಿಧೇಯಕದಲ್ಲಿದೆ.

ಅತ್ಯಂತ ಯೋಗ್ಯವಾದ ವಿಧೇಯಕ ವಿಧೇಯಕಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್, ವಿಧೇಯಕವನ್ನು ಮುಕ್ತ ಕಂಠದಿಂದ ಸ್ವಾಗತ‌ ಮಾಡುತ್ತೇವೆ ಎಂದರು. ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಮೆಚ್ಚುಗೆ ಸೂಚಿಸಿ,‌ ‘ಅತ್ಯಂತ ಯೋಗ್ಯವಾದ ವಿಧೇಯಕ ಇದಾಗಿದೆ. ಇದಕ್ಕಾಗಿ ಆರೋಗ್ಯ ‌ಸಚಿವರಿಗೆ ಧನ್ಯವಾದ. ಯುವ ಜನಾಂಗವನ್ನು ಕಳೆದುಕೊಂಡರೆ ಹೊರ ದೇಶ ನಮ್ಮ ಮೇಲೆ ಆಕ್ರಮಣ ಮಾಡುವ ಅಗತ್ಯ ಇಲ್ಲ .ಇದು ಅತ್ಯಂತ ಪ್ರಗತಿಪರ ವಿಧೇಯಕ. ಯುವ ಜನರ ಪರವಾಗಿ ಸ್ವಾಗತ ಮಾಡ್ತೇನೆ‌’ ಎಂದರು.

ಸಿಗರೇಟು ನಿಷೇಧ ವಯೋಮಿತಿ 18 ರಿಂದ‌ 22 ಕ್ಕೆ ಏರಿಕೆ ಇನ್ನು ವಿಧೇಯಕದಲ್ಲಿ ಸಿಗರೇಟು ನಿಷೇಧದ ವಯೋಮಿತಿಯನ್ನು‌ 18 ವರ್ಷದಿಂದ 21 ವರ್ಷಕ್ಕೆ ಏರಿಕೆ ಮಾಡಲಾಗಿದೆ. ಜೊತೆಗೆ ಶಾಲಾ ಕಾಲೇಜು ಆವರಣದಲ್ಲಿ‌‌ ತಂಬಾಕು ಮಾರಾಟ ವಿಷೇಧ ಮಿತಿ‌. ನೂರು ಯಾರ್ಡ್ ಇದ್ದಿದ್ದನ್ನು ನೂರು ಮೀಟರ್ ಎಂದು ಬದಲಾವಣೆ ಮಾಡಲಾಗಿದೆ. ಇದನ್ನು ಉಲ್ಲಂಘನೆಗೆ ಮಾಡಿದ್ದಲ್ಲಿ ಈ ಹಿಂದೆ ಇದ್ದ ದಂಡ ಪಾವತಿ ದರವನ್ನು 100 ರೂ ಬದಲಾಗಿ 1,000 ರೂಗೆ ಏರಿಕೆ ಮಾಡಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments