New delhiರಾಜಕೀಯಸುದ್ದಿ

ಕೇಂದ್ರದಿಂದ ಮತ್ತೆ ಸೀಮೆಣ್ಣೆ ಭಾಗ್ಯ!

ನವದೆಹಲಿ: ದೇಶದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸೀಮಿತ ಅವಧಿಗೆ ಮತ್ತೆ ಸೀಮೆಎಣ್ಣೆ ಪೂರೈಕೆ ಮಾಡಲು ಮುಂದಾಗಿದೆ.
ಕಚ್ಚಾ ತೈಲ ಹಾಗೂ ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಪರಿಣಾಮ, ಅಡುಗೆ ಅನಿಲದ ಮೇಲಿನ ಒತ್ತಡ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆಯ್ದ ಪೆಟ್ರೋಲ್ ಬಂಕ್ಗಳಲ್ಲಿ ಸೀಮೆಎಣ್ಣೆ ಲಭ್ಯವಾಗಲಿದ್ದು, ಪ್ರತಿ ಜಿಲ್ಲೆಯಲ್ಲಿ ಎರಡು ಪೆಟ್ರೋಲ್ ಬಂಕ್ಗಳ ಮೂಲಕ ವಿತರಣೆ ಮಾಡುವ ಯೋಜನೆ ರೂಪಿಸಲಾಗಿದೆ.
ಅಡುಗೆ ಮತ್ತು ಬೆಳಕಿನ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ 60 ದಿನಗಳ ಅವಧಿಗೆ ಸೀಮೆಎಣ್ಣೆ ಪೂರೈಕೆ ಮಾಡಲಾಗುತ್ತದೆ. ವಿಶೇಷವಾಗಿ ಬಡ ಮತ್ತು ಗ್ರಾಮೀಣ ಕುಟುಂಬಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.


ಈ ಹಿಂದೆ 21 ರಾಜ್ಯಗಳಲ್ಲಿ ಸೀಮೆಎಣ್ಣೆ ಮುಕ್ತ ರಾಜ್ಯಗಳೆಂದು ಘೋಷಿಸಲಾಗಿದ್ದರೂ, ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದಕ್ಕೆ ಮಧ್ಯೆ, ನಿನ್ನೆ ಮಾತ್ರ ಸೌದೆ ಒಲೆ ಬಳಸುವಂತೆ ಹೇಳಿಕೆ ನೀಡಿದ್ದ ಸಚಿವ ಮುನಿಯಪ್ಪ ಅವರ ಮಾತು ಚರ್ಚೆಗೆ ಗ್ರಾಸವಾಗಿರುವುದು ಗಮನಾರ್ಹFuelCrisisIndia,

Comments (0)

Your email address will not be published. Required fields are marked *

Back to top button