Thursday, August 21, 2025
24.8 C
Bengaluru
Google search engine
LIVE
ಮನೆಜಿಲ್ಲೆಹುಬ್ಬಳ್ಳಿ ಸಿದ್ದಾರೂಢರ ದರ್ಶನ ಪಡೆದ ಬಾಲಿವುಡ್ ಸಿಂಗರ್ ಜುಬಿನ್ ನೌಟಿಯಾಲ್.

ಹುಬ್ಬಳ್ಳಿ ಸಿದ್ದಾರೂಢರ ದರ್ಶನ ಪಡೆದ ಬಾಲಿವುಡ್ ಸಿಂಗರ್ ಜುಬಿನ್ ನೌಟಿಯಾಲ್.

ಹುಬ್ಬಳ್ಳಿ: ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ಜುಬಿನ್ ನೌಟಿಯಾಲ್ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಸ್ತ ಎಂಜಾಯ್ ಮಾಡಿದ್ದು, ತಮ್ಮ ಕಾರ್ಯಕ್ರಮದ ನಂತರ ಹುಬ್ಬಳ್ಳಿಯ ಐತಹಾಸಿಕ ಮಂದಿರಗಳಿಗೆ ಭೇಟಿ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

ಧಾರವಾಡ ಲೋಕಸಭಾ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಗಾಳಿಪಟ ಉತ್ಸವದ ನಿಮಿತ್ತವಾಗಿ, ಗಾಯನ ಕಾರ್ಯಕ್ರಮಕ್ಕೆ ಕಳೆದ ಎರಡು ದಿನಗಳಿಂದ ಜುಬಿನ್ ನೌಟಿಯಾಲ್‌ ಅವರು ತಮ್ಮ ತಂಡದೊಂದಿಗೆ ಹುಬ್ಬಳ್ಳಿಗೆ ಬಂದಿದ್ದರು. ‌ ಕಾರ್ಯಕ್ರಮದ ಬಳಿಕ ಹುಬ್ಬಳ್ಳಿಯಲ್ಲಿ ರೌಂಡ್ಸ್ ಹಾಕಿದ ನೌಟಿಯಾಲ್ ಅಮರಗೋಳದ ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಸದ್ಗುರು ಶ್ರೀ ಸಿದ್ದಾರೂಢರ ಮಠಕ್ಕೆ ಭೇಟಿ ನೀಡಿದರು.

ನಗರದ ಅಮರಗೋಳ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶಿವಲಿಂಗಗೆ ಪೂಜೆ ಸಲ್ಲಿಸಿದರು. ನಂತರ ಶ್ರೀ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ಸಿದ್ದಾರೂಢ ಹಾಗೂ ಗುರುನಾಥ ರೂಢರ ಗದ್ದುಗೆ ವಿಶೇಷ ಪೂಜೆ ಸಹ ಸಲ್ಲಿಸಿದರು. ಇನ್ನೂ ಇದೇವೇಳೆ ಮಠದ ಆಡಳಿತ ಮಂಡಳಿಯ ವತಿಯಿಂದ ನೌಟಿಯಾಲ್‌ ಅವರಿಗೆ ಸನ್ಮಾನಿಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments