Tuesday, January 27, 2026
24.7 C
Bengaluru
Google search engine
LIVE
ಮನೆಜಿಲ್ಲೆಬೆಳಗಾವಿ ವಕೀಲ ಸಂತೋಷ ಪಾಟೀಲ ಹತ್ಯೆ ಪ್ರಕರಣ; 8 ಆರೋಪಿಗಳ ಬಂಧನ

ಬೆಳಗಾವಿ ವಕೀಲ ಸಂತೋಷ ಪಾಟೀಲ ಹತ್ಯೆ ಪ್ರಕರಣ; 8 ಆರೋಪಿಗಳ ಬಂಧನ

ಬೆಳಗಾವಿ: ಜಮೀನಿನ ಆಸ್ತಿ ವಿವಾದ ಹಿನ್ನೆಲೆಯಲ್ಲಿ ವಕೀಲ ಸಂತೋಷ್​ ಪಾಟೀಲ ಹತ್ಯೆಯಾಗಿದ್ದು, 8 ಆರೋಪಿಗಳನ್ನು ಬಂಧಿಸಲಾಗಿದೆ. ಪರಾರಿಯಾದ ಇಬ್ಬರಿಗಾಗಿ ಬಲೆ ಬೀಸಲಾಗಿದೆ ಎಂದು ಬೆಳಗಾವಿ ಜಿಲ್ಲೆ ಎಸ್​​ಪಿ ಭೀಮಾಶಂಕರ್​ ಗುಳೇದ್​​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಬಂಧಿತರು ರಾಯಬಾಗ ತಾಲೂಕಿನ ಬಸ್ತವಾಡದ ಶಿವನಗೌಡ ಬಸಗೌಡ ಪಾಟೀಲ, ಭರತ ಕೋಳಿ, ಬಿರನಾಳದ ಕಿರಣ ಕೆಂಪವಾಡೆ, ಗೋಕಾಕ್​ ತಾಲೂಕಿನ ಗುಜನಾಳದ ಉದಯ ಮುಶೆನ್ನವರ, ಬೈಲಹೊಂಗಲ ತಾಲೂಕಿನ ಚಂದೂರಿನ ಸುರೇಶ ನಂದಿ, ಹೊನ್ನಿಹಾಳದ ಮುಂಜುನಾಥ ತಳವಾರ ಬಂಧಿತರಾಗಿದ್ದಾರೆ . ರಾಯಬಾಗ ತಾಲೂಕಿನ ಅಳಗವಾಡಿಯ ಮಹಾವೀರ ಹಂಜೆ, ಹೊನ್ನಿಹಾಳದ ನಾಗರಾಜ ನಾಯಕ್​ ಪರಾರಿಯಾಗಿದ್ದು, ಬಲೆ ಬೀಸಲಾಗಿದೆ ಎಂದ್ರು.

ಏಪ್ರಿಲ್ 29ರಂದು ಸವಸುದ್ದಿಯಿಂದ ರಾಯಬಾಗದ ನ್ಯಾಯಾಲಯಕ್ಕೆ ಬರುತ್ತಿದ್ದ ಸಂತೋಷನನ್ನು ಕಾರಿನಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳು ಕಿಡ್ನಾಪ್​ ಮಾಡಿದ್ದರು. ಬಳಿಕ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗಣೇಶಗುಡಿಗೆ ಕರೆದೊಯ್ದು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಸುಟ್ಟು ಹಾಕಿದ್ದರು.

ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾಗ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments