Freedom TV

ಬೆಸ್ಕಾಂಗೆ ಚೆಲ್ಲಾಟ, ಜನರಿಗೆ ಪ್ರಾಣ ಸಂಕಟ

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಹೆಚ್ಚಾಗ್ತಲೇ ಇದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೊನೆ ಯಾವಾಗ ಎಂದು ಜನ ಪ್ರಶ್ನೆ ಮಾಡುವಂತಾಗಿದೆ? ವಿದ್ಯುತ್ ಅವಘಡಕ್ಕೆ ಪದೇ ಪದೇ ಜನ ಬಲಿಯಾಗುತ್ತಿರುವುದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಈ ಹಿಂದೆ ಕಾಡುಗೋಡಿ ದುರಂತ ಬಳಿಕ ವಿದ್ಯುತ್ ಅವಘಡಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಇಂಧನ ಸಚಿವರು ಕಡಿವಾಣದ ಭರವಸೆ ನೀಡಿದ್ದರು. ಆದ್ರೆ ಅವಘಡಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿಲ್ಲ. ಪದೇ ಪದೇ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಜನ ಬೀದಿ ಹಣವಾಗ್ತಿದ್ದಾರೆ. ಜನರ ಜೀವನದ ಜೊತೆ ಚೆಲ್ಲಾಟ ಬೆಸ್ಕಾಂ ಆಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನವೆಂಬರ್ ತಿಂಗಳಲ್ಲಿ ವಿದ್ಯುತ್ ಅವಘಡಕ್ಕೆ ಬಲಿಯಾದವರು ಬರೋಬ್ಬರಿ 8 ಮಂದಿ..ಡಿಸೆಂಬರ್-15, ಜನವರಿ -9,_ಫೆಬ್ರವರಿ12, ಮಾರ್ಚ್ 2 ಮಂದಿ ಬಲಿ ಇನ್ನೆಷ್ಟು ಬಲಿಗಾಗಿ ಕಾಯುತ್ತಿದೆ ಬೆಸ್ಕಾಂ? ರಸ್ತೆಯಲ್ಲಿ ಬಿದ್ದ ವೈರ್,ಹಾಗೂ ವಿವಿಧ ಕಡೆ ವಿದ್ಯುತ್ ತಗುಲಿ ಕಳೆದ ಮೂರು ತಿಂಗಳಲ್ಲಿ 46 ಸಾವು ಅನ್ನೋದು ನಿಜಕ್ಕೂ ಆತಂಕಕಾರಿ ವಿಚಾರ,ಒಟ್ಟಾರೆ ಬೆಸ್ಕಾಮ್ ಎಚ್ಚೆತ್ತು ಅವಘಡಕ್ಕೆ ಕಡಿವಾಣ ಹಾಕಬೇಕೆನ್ನುವುದೇ ಫ್ರೀಡಂ ಟಿವಿ ಆಶಯ.

Comments (0)

Your email address will not be published. Required fields are marked *

Back to top button