ಜಿಲ್ಲೆರಾಜ್ಯ

ರಸ್ತೆ ಕಣಗಳನ್ನು ತ್ಯಜಿಸಿ : ಕೃಷಿ ಕಣಗಳನ್ನು ಉಪಯೋಗಿಸಿ

ಮಂಡ್ಯ: ಯಾತ್ರೀಕತೆ ಕಾಲದಲ್ಲಿ ಕಣ ಸಂಸ್ಕೃತಿ ಕಾಣೆಯಾಗುತ್ತಿದೆ. ರೈತರು ಧಾನ್ಯ ಸಂಸ್ಕರಣೆ ಮಾಡಲು ತಮ್ಮ ಜಮೀನುಗಳಲ್ಲಿ ಕಣ ಮಾಡಿ, ಹಬ್ಬ ಆಚರಣೆ ಮಾಡುತ್ತಿದ್ದನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಿ. ಆದರೆ ಈಗ ನೀವು ನೋಡಲು ಸಾಧ್ಯವಿಲ್ಲ. ಯಾಕೆಂದರೆ ಯಾತ್ರೀಕರಣ ಮತ್ತು ರಸ್ತೆಯ ಒಕ್ಕಣೆ ಕಣ ಸಂಸ್ಕೃತಿಯನ್ನು ನಾಶ ಮಾಡಿತ್ತು. ಜಿಲ್ಲೆಯಲ್ಲಿ ಮತ್ತೆ ಕಣ ಸಂಸ್ಕೃತಿಗೆ ಮರುಜೀವ ನೀಡಲಾಗುತ್ತಿದೆ.

ಮದ್ದೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸ್ಥಳೀಯ ಕಲಾವಿದರೊಬ್ಬರು ರೈತರ ಜೊತೆಗೂಡಿ ಕಣಗಳಿಗೆ ಮರುಜೀವ ನೀಡುತ್ತಿದ್ದಾರೆ. ಭತ್ತದ ಒಕ್ಕಣೆ ಮಾಡಲು ಜಮೀನುಗಳಲ್ಲಿ ಕಣ ನಿರ್ಮಾಣ ಮಾಡುವ ರೈತರಿಗೆ ಪ್ರೋತ್ಸಾಹ ಮತ್ತು ಉತ್ಸಾಹ ನೀಡುತ್ತಾ ಬೆಂಬಲವಾಗಿ ನಿಂತಿದ್ದಾರೆ. ತೂಬಿನಕೆರೆ ಗೋವೀಂದರಾಜು ಮತ್ತು ತಂಡ ಕಣ ಸಂಸ್ಕೃತಿಗೆ ಮರುಜೀವ ನೀಡುತ್ತಿದ್ದಾರೆ.

ರಸ್ತೆಯಲ್ಲಿಯೇ ಧಾನ್ಯ ಒಕ್ಕಣೆ ಮಾಡುವುದರಿಂದ ಅಪಘಾತ ಹೆಚ್ಚಾಗುತ್ತಿತ್ತು. ಇದರಿಂದ ರೈತರು ಸಮಸ್ಯೆಗೆ ಒಳಗಾಗುತ್ತಿದ್ದರು. ಯಾತ್ರಗಳ ಸಹಾಯದಿಂದ ಭತ್ತ ಕಟಾವು ಮಾಡಿಸಿದರೆ ಆರ್ಥಿಕ ಹೊರೆ ಹೆಚ್ಚಾಗುತ್ತಿದೆ. ಆದ್ದರಿಂದ ರೈತರ ಆರ್ಥಿಕ ಹೊರೆ ತಪ್ಪಿಸಲು ಮತ್ತು ರೈತ ಸಂಸ್ಕೃತಿ ಉಳಿಸಲು ಹೋರಾಡ ಶುರು ಮಾಡಿದ್ದಾರೆ‌.
ಕಣ ನಿರ್ಮಾಣ ಮಾಡುವುದು, ಜಾನಪದ ಸಂಸ್ಕೃತಿ ಅನಾವರಣ ಮಾಡುವುದು, ಕಣ ಪೂಜೆ, ಕುಟುಂಬಗಳನ್ನು ಒಗ್ಗೂಡಿಸುವುದು, ಆರ್ಥಿಕ ಹೊರೆ ಕಡಿಮೆ ಮಾಡುವುದರ ಜೊತೆಗೆ ರೈತ ಸಂಸ್ಕೃತಿಯ ಅನಾವರಣಕ್ಕೆ ಮುಂದಾಗಿದ್ದಾರೆ. ರೈತ ಸಂಸ್ಕೃತಿ ರಕ್ಷಣೆ, ಕುಟುಂಬಗಳ ಒಗ್ಗೂಡಿಸುವಿಕೆಗೆ ಕಾರಣವಾಗುತ್ತಿರುವ ತಂಡಕ್ಕೆ ರೈತರು ಬೆಂಬಲವಾಗಿ ನಿಂತಿದ್ದಾರೆ.

Comments (0)

Your email address will not be published. Required fields are marked *

Back to top button