ಮನರಂಜನೆಲೈಫ್ ಸ್ಟೈಲ್ಸಿನಿಮಾ

‘ಸಿಟಿಸ್ಕೇಪ್’ ಗೌನ್‌ನಲ್ಲಿ ಮಿಂಚಿದ ಆಲಿಯಾ ಭಟ್’; ಬೆಲೆ ಮತ್ತು ವಿಶೇಷತೆ ಏನು ಗೊತ್ತೇ?

ಬಾಲಿವುಡ್ ಸುಂದರಿ ಆಲಿಯಾ ಭಟ್ ಅವರು ತಮ್ಮ ಫ್ಯಾಷನ್ ಸೆನ್ಸ್ ಮೂಲಕ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಖ್ಯಾತ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ‘ಸಿಟಿಸ್ಕೇಪ್’ ಸಂಗ್ರಹದ ಅದ್ಭುತ ಗೌನ್‌ನಲ್ಲಿ ಆಲಿಯಾ ಮಿಂಚಿದ್ದು, ಸುಮಾರು 1,370 ಗಂಟೆಗಳ ಕಾಲ ಡಿಸೈನರ್ ಅಂದರೆ ಸುಮಾರು ಎರಡು ತಿಂಗಳುಗಳ ಕಾಲ ನಿರಂತರವಾಗಿ ಶ್ರಮಿಸಿ ಈ ಉಡುಪನ್ನು ಸಿದ್ಧಪಡಿಸಿದ್ದಾರೆ. ಗಾಜಿನ ಮಣಿಗಳು, ಸ್ಫಟಿಕದ ಮಣಿಗಳು ಮತ್ತು ಅತ್ಯಾಕರ್ಷಕ ದಾರದ ಕಸೂತಿಯಿಂದ ಈ ಉಡುಪು ಕಂಗೊಳಿಸುತ್ತಿದೆ.

ರಾಹುಲ್ ಮಿಶ್ರಾ ಅವರ ಸ್ಪ್ರಿಂಗ್ 2025 ಕೌಚರ್ ಸಂಗ್ರಹದ ‘ದಿ ಪೇಲ್ ಬ್ಲೂ ಡಾಟ್’ ಸರಣಿಯಿಂದ ಆಲಿಯಾ ಈ ‘ಸಿಟಿಸ್ಕೇಪ್’ ಉಡುಪನ್ನು ಆರಿಸಿಕೊಂಡಿದ್ದಾರೆ. ನೋಯ್ಡಾದಲ್ಲಿರುವ ತಮ್ಮ ಅಟೆಲಿಯರ್‌ನಲ್ಲಿ ರಾಹುಲ್ ಮಿಶ್ರಾ ಅವರು ಅತ್ಯಂತ ನಾಜೂಕಾಗಿ ಈ ಗೌನ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೆ, ಇಂದಿನ ಆಧುನಿಕ ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮತ್ತು ಮಾನವ ನಿರ್ಮಿತ ಹವಾಮಾನ ಬದಲಾವಣೆಯ ಬಗ್ಗೆ ಜಾಗೃತಿ ಮೂಡಿಸುವ ಮಹತ್ತರ ಉದ್ದೇಶವನ್ನು ಈ ವಿನ್ಯಾಸ ಹೊಂದಿದೆ.

ಈ ಅದ್ದೂರಿ ಉಡುಪಿಗೆ ಪೂರಕವಾಗಿ ಆಲಿಯಾ ಭಟ್ ಅವರು ವಜ್ರದ ಹಾರ ಮತ್ತು ಆಕರ್ಷಕ ಕಿವಿಯೋಲೆಗಳನ್ನು ಧರಿಸುವ ಮೂಲಕ ದೇವತೆಯಂತೆ ಕಂಗೊಳಿಸಿದರು. ರಾಹುಲ್ ಮಿಶ್ರಾ ಅವರ ವಿನ್ಯಾಸಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಭಾರಿ ಮನ್ನಣೆ ಇದೆ. ಈ ಹಿಂದೆ ಹಾಲಿವುಡ್ ಸೆಲೆಬ್ರಿಟಿಗಳಾದ ಝೆಂಡಾಯಾ, ಸೆಲೆನಾ ಗೊಮೆಜ್ ಮತ್ತು ಗಿಗಿ ಹಡಿದ್ ಅವರಂತಹ ಖ್ಯಾತನಾಮರು ಕೂಡ ರಾಹುಲ್ ಮಿಶ್ರಾ ಅವರ ವಿನ್ಯಾಸದ ಉಡುಪುಗಳನ್ನು ತೊಟ್ಟು ಫ್ಯಾಷನ್ ಲೋಕದಲ್ಲಿ ಸಂಚಲನ ಮೂಡಿಸಿದ್ದರು.

ಈ ‘ಸಿಟಿಸ್ಕೇಪ್’ ಗೌನ್ ಮೂಲಕ ಕರಕುಶಲತೆ ಮತ್ತು ಸಾಮಾಜಿಕ ಕಳಕಳಿಯನ್ನು ಒಟ್ಟಿಗೆ ಪ್ರದರ್ಶಿಸಿದ ಆಲಿಯಾ ಭಟ್ ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕಲಾವಿದರ ಶ್ರಮ ಮತ್ತು ಪರಿಸರ ಜಾಗೃತಿಯ ಸಂಕೇತವಾಗಿರುವ ಈ ಉಡುಪು ಫ್ಯಾಷನ್ ಪ್ರಿಯರ ಮನಗೆದ್ದಿದೆ.

Comments (0)

Your email address will not be published. Required fields are marked *

Back to top button