
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಗಳ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಏರಿಳಿತ ಕಂಡುಬರುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರು ಗೊಂದಲಕ್ಕೀಡಾಗಿದ್ದಾರೆ.
ಕೊಳ್ಳಿ ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮದಿಂದ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದರಿಂದ ದರಗಳಲ್ಲಿ ಕ್ಷಣಕ್ಷಣಕ್ಕೂ ಬದಲಾವಣೆ ಕಾಣಿಸುತ್ತಿದೆ. ಕೆಲವೇ ಸಮಯದಲ್ಲಿ ದಿಢೀರ್ ಏರಿಕೆ ಕಂಡುಬರುತ್ತಿದ್ದರೆ, ಮತ್ತೊಮ್ಮೆ ಅಚ್ಚರಿಯ ಇಳಿಕೆಯಾಗುತ್ತಿದೆ.
ಪ್ರಸ್ತುತ 10 ಗ್ರಾಂ ಬಂಗಾರದ ಬೆಲೆ ಸುಮಾರು 1 ಲಕ್ಷ 50 ಸಾವಿರ ರೂಪಾಯಿಯಷ್ಟಾಗಿದ್ದು, ಕೆಜಿ ಬೆಳ್ಳಿ ದರವು 2 ಲಕ್ಷ 30 ಸಾವಿರ ರೂಪಾಯಿಗೆ ತಲುಪಿದೆ. ಆದರೆ ಈ ದರಗಳು ಸ್ಥಿರವಾಗಿಲ್ಲದೇ ನಿರಂತರವಾಗಿ ಬದಲಾಗುತ್ತಿರುವುದು ಗಮನಾರ್ಹ.
ದರಗಳ ಈ ಹಾವು-ಏಣಿ ಆಟದಿಂದ ಗ್ರಾಹಕರು ಈಗಲೇ ಖರೀದಿ ಮಾಡಬೇಕೇ ಅಥವಾ ಕಾಯಬೇಕೇ ಎಂಬ ಗೊಂದಲದಲ್ಲಿದ್ದಾರೆ. ಹೂಡಿಕೆದಾರರಿಗೂ ಮುಂದಿನ ಮಾರುಕಟ್ಟೆ ದಿಕ್ಕು ಕುರಿತು ಸ್ಪಷ್ಟತೆ ಇಲ್ಲದೇ ಟೆನ್ಶನ್ ಹೆಚ್ಚಾಗಿದೆ.
ಜಾಗತಿಕ ಪರಿಸ್ಥಿತಿಗಳು ಸ್ಥಿರವಾಗುವವರೆಗೂ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಈ ರೀತಿಯ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ಇದೆ.




