ಬೆಂಗಳೂರು : ಬೆಂಗಳೂರಲ್ಲಿ ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ..ಹೀಗೆ ಯಾವ ಕಾಲ ಬಂದ್ರೂ ಇಲ್ಲಿ ನೀರಿಗೆ ಬರಗಾಲ ತಪ್ಪಿದ್ದಲ್ಲ..ರಾಜ್ಯಧಾನಿ ಅಂತ ಕರೆಸಿಕೊಂಡ್ರು, ಇಲ್ಲಿ ನೀರಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ..ಕೇವಲ ಕಾವೇರಿ ನದಿಯನ್ನೇ ಬದುಕು ಸ್ಥಿತಿ ನಮ್ಮದು..ಕೆಆರ್ಎಸ್ ಜಲಾಶಯ ತುಂಬಿ ಸಮೃದ್ದವಾದ್ರೆ, ಮಾತ್ರ ಬೆಂಗಳೂರಿನ ಜನ ನೆಮ್ಮದಿಯಾಗಿ ನೀರು ಕುಡಿಯಬಹುದು..ಇಲ್ಲವಾದ್ರೆ, ಇಲ್ಲಿನ ಏರಿಯಾ ಏರಿಯಾಗಳಲ್ಲೂ, ಗಲ್ಲಿ ಗಲ್ಲಿಯಲ್ಲೂ ಕಾವೇರಿ ನೀರಿಗಾಗಿ, ಪರದಾಟ..ಕಿತ್ತಾಟ ಶುರುವಾಗಿದೆ.

ಕಾವೇರಿ ನದಿಯಿಂದ ಬೆಂಗಳೂರಿಗೆ ಪತ್ರಿನಿತ್ಯ 1450 ಎಂಎಲ್ಡಿ ನೀರು ಪೂರೈಕೆಯಾಗುತ್ತೆ. ಆದ್ರೆ, ಬರುತ್ತಿರೋ ನೀರಲ್ಲಿ ಶೇಖಡ, 25ರಿಂದ 30 ರಷ್ಟು ನೀರು ಸೋರಿಕೆಯಲ್ಲಿ ಮಾಯವಾಗುತ್ತಿದೆ. ಈ ಸೋರಿಕೆಯನ್ನ ತಡೆಗಟ್ಟೋ ಅಧಿಕಾರಿಗಳಿಂದ ಆಗ್ತಾ ಇಲ್ಲ. ಇನ್ನು ಬೆಂಗಳೂರಿನ ಜನರಿಗೆ ಯಾವ ಮಟ್ಟದಲ್ಲಿ ನೀರಿನ ಪರದಾಟ ಹೋಗಲಾಡಿಸೋದಕ್ಕೆ ಸಾಧ್ಯವಾಗ್ತ ಇಲ್ಲ.

ಸಧ್ಯ ಕೆ,ಆರ್ ಎಸ್ ಜಲಾಶಯದಲ್ಲಿ 18ರಿಂದ 19 ಟಿಎಂಸಿ ನೀರು ಮಾತ್ರ ಲಭ್ಯವಿದೆ.. ಇದ್ರಲ್ಲಿ 10 ಟಿಎಂಸಿ ನೀರು ಡಸ್ಟ್ ಸ್ಟೋರೇಜ್ ಹೋಗುತ್ತೆ. ಈ ನೀರನ್ನ ಡಂಪ್ ಮಾಡೋಕಾಗಲಿ, ಬಳಕೆಗಾಗಲಿ, ಕುಡಿಯೋಕಾಗಲಿ ಬಳಸಲು ಸಾಧ್ಯವಿಲ್ಲ..ಇನ್ನು ಉಳಿಯೋದು ಜಸ್ಟ್ 8 ರಿಂದ 9 ಟಿಎಂಸಿ ನೀರು..ಈ ನೀರಲ್ಲಿ ಬೇಸಿಗೆಯನ್ನ ಎದುರಿಸೋದು ಹೇಗೆ ಅನ್ನೋದು ಜಲಮಂಡಳಿ ಅಧಿಕಾರಿಗಳ ಟೆನ್ಷನ್ ಗೆ ಕಾರಣವಾಗಿದೆ. ಅಂತರ್ಜಲ ಮಟ್ಟ ಕುಸಿತ ಕಂಡಿದೆ. ಇನ್ನು ಕೊಳವೆ ಬಾವಿಗಳ ಕಥೆ ಕೇಳೋದೇ ಬೇಡ.. ಬೆಂಗಳೂರಿನ ಬಹುತೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ.. ಅತ್ತ ಕಾವೇರಿಯೂ ಇಲ್ಲ, ಇತ್ತ ಕೊಳವೆ ಬಾವಿಯ ನೀರು ಇಲ್ಲ..ಹೀಗಾಗಿ ಬೆಂಗಳೂರಿಗೆ ಜಲಕ್ಷಾಮ ಎದುರಾಗೋ ಎಲ್ಲಾ ಮುನ್ಸೂಚನೆಗಳಿವೆ.

ಬೇಸಿಗೆ ಆರಂಭದಲ್ಲೆ ಬೆಂಗಳೂರಿನ ಬಹುತೇಕ ಭಾಗದಲ್ಲಿ ನೀರಿನ ಕೊರತೆ ಕಾಡುತ್ತಿದೆ. ವಾರಕ್ಕೆ ಮೂರು ದಿನ ನೀರು ಕೊಡ್ತಿದ್ದ ಜಲಮಂಡಳಿ..ಈಗ ವಾರ ತುಂಬಿದ್ರು, ತೊಟ್ಟಿ ತುಂಬುತ್ತಿಲ್ಲ..ಹೀಗಾಗಿ ಬೆಂಗಳೂರಿನ ಜನ ಹನಿ ನೀರಿಗೂ ಪರದಾಡುತ್ತಿದ್ದಾರೆ..ಬೇಸಿಗೆ ಆರಂಭದಲ್ಲೆ ಇಂತಹ ದುಸ್ತಿತಿ ಬಂದ್ರೆ, ಇನ್ನು ಬೇಸಿಗೆಯಲ್ಲಿ ಏನ್ ಕಥೆ ಅನ್ನೋದೆ ಗೊತ್ತಾಗ್ತಿಲ್ಲ…ಇನ್ನು ಈ ಬಗ್ಗೆ ಆತಂಕಕ್ಕೆ ಒಳಗಾಗಿರುವ ಸರ್ಕಾರ ಜಲಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಸರ್ಕಾರಕ್ಕೆ ಡ್ಯಾಮೇಜ್ ಆಗಬಾರದು… ಬರುತ್ತಿರುವ ನೀರನ್ನ, ಸೋರಿಕೆಯಾಗದಂತೆ ತಡೆದು, ಬೆಂಗಳೂರಿನ ಮನೆ ಮನೆಗಳಿಗೆ ನೀರು ಕೊಡಿ ಸೂಚನೆ ಕೊಟ್ಟಿದೆ.

ಒಟ್ನಲ್ಲಿ ಬೆಂಗಳೂರಿಗೆ ಜಲಗಂಡಾಂತರ ಇರೋದು ಸತ್ಯ..ಇದನ್ನ ಜಲಮಂಡಳಿ ಯಾವ ರೀತಿ ಪರಿಹಾರ ಮಾರ್ಗ ಕಂಡುಕೊಳ್ಳುತ್ತೋ ಅಥವಾ ಖಾಸಗಿ ಟ್ಯಾಂಕರ್ ಗಳ ಮೊರೆ ಹೋಗುತ್ತೋ ಅಥವಾ ಕಾವೇರಿ ಹೊರತು ಪಡಿಸಿ ಬೇರೆ ಜಲಾಶಯಗಳ ಮೂಲಕ ನೀರು ತರುತ್ತೋ ದೇವರೇ ಬಲ್ಲ.


