ವರದಿ : ಚಂದ್ರಶೇಖರ್ ಶಿಡ್ಲಗಟ್ಟ
ಚಿಕ್ಕಬಳ್ಳಾಪುರ : ತಾಯಿಗೆ ಇರೋ ಆಸ್ತಿ ಪಾಲು ಮಾಡಿಕೊಳ್ಳೋಕೆ ರೆಡಿ ಆದ್ರೆ ಹಣ್ಣು ಹಣ್ಣು ಮುದುಕಿ ಮಾತ್ರ ಬೇಡ ಆಕೆಗೆ ಬರುತಿದ್ದ ಪೆನ್ಷನ್ ಹಣ ಇಟ್ಕೊಂಡ್ರು,ಮನೆಗೆ ಅಂತ ಮುಂಜೂರಾಗಿದ್ದ ಹಣ ಇಟ್ಕೊಂಡ್ರು, ಆದ್ರೆ ತಾಯಿ ಮಾತ್ರ ಬೇಡ ಅಂತ ತಾಯಿಯನ್ನೆ ಊರ ಹುಣಸೆ ಮರದ ಕೆಳಗೆ ಬಿಟ್ಹೋದ್ರು, ಮಾಹಿತಿ ತಿಳಿದು ಕೆಲವು ಸಂಘಟನೆಗಳು, ಹಿರಿಯರ ರಕ್ಷಣಾ ಇಲಾಖೆಗಳು ಆಕೆಯನ್ನ ರಕ್ಷಿಸಿ ಪೋಲೀಸ್ ಠಾಣೆಗೆ ದೂರು ನೀಡಿ ಮಕ್ಕಳಿಬ್ಬರನ್ನೂ ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ ಇಂತದೊಂದು ಅಮಾನವೀಯ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಈ ಸ್ಟೋರಿ ತಪ್ಪದೇ ನೋಡಿ.
ಗಂಡು ಮಕ್ಕಳು ಹುಟ್ಟಬೇಕು, ಗಂಡು ಮಕ್ಕಳಿದ್ರೆ ಮುಪ್ಪಿನ ಕಾಲದಲ್ಲಿ ಸಾಕ್ತಾರೆ ಚೆನ್ನಾಗಿ ನೋಡಿಕೊಳ್ತಾರೆ ಅನ್ನೋ ನಂಬಿಕೆಯಿಂದ ಗಂಡು ಮಕ್ಕಳು ಆಗಲಿ ಅಂತ ಆಸೆ ಪಡುತಿದ್ರು ಆ ಅಸೆಗೆ ತಣ್ಣೀರೆರಚಿದ ಗಂಡು ಮಕ್ಕಳು ಆಸ್ತಿಪಾಸ್ತಿಗಾಗಿ ತಂದೆ ತಾಯಿಗಳನ್ನೆ ಬೀದಿಗೆ ತಳ್ಳಿದ ಅದೆಷ್ಟೋ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿವೆ.ಸದ್ಯ ಈಗ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಬೆಸ್ಟ್ ಅವರು ಮದುವೆಯಾಗಿ ಗಂಡನ ಮನೆಗೆ ಹೋದ್ರು ತಂದೆತಾಯಿಗಳನ್ನ ಚೆನ್ನಾಗಿ ನೋಡ್ಕೊಳ್ತಾರೆ ಅನ್ನೋ ಟ್ರೆಂಡ್ ಶುರುವಾಗಿತ್ತು. ಆದರೆ ಇಲ್ಲೊಂದು ಗ್ರಾಮದಲ್ಲಿ ಹೆಣ್ಣು ಮಕ್ಕಳೆ ತಾಯಿ ಹತ್ತಿರ ಇದ್ದ ಹಣ ಆಸ್ತಿಯನ್ನು ಕಿತ್ತುಕೊಂಡು ಹಣ್ಣು ಹಣ್ಣು ಮುದಿಕಿಯಾಗಿದ್ದ ಹೆತ್ತ ತಾಯಿಯನ್ನೆ ಬೀದಿಗೆ ತಳ್ಳಿದ ಘಟನೆಯೊಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಲಿಂಗಶೆಟ್ಟಿಪುರದಲ್ಲಿ ನಡೆದಿದೆ.
ಮೇಲೆ ಕಾಣುತ್ತಿರುವ ಹಿರಿಯ ಅಜ್ಜಿ ಹೆಸರು ಲಕ್ಷ್ಮೀದೇವಿ ಈಕೆಗೆ ಸುಮಾರು ಎಂಬತ್ತು ವರ್ಷ ವಯಸ್ಸಾಗಿರಬಹುದು, ಈಕೆಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳಿದ್ದರು, ಈಕೆಯ ಗಂಡ ಮತ್ತು ಇಬ್ಬರು ಗಂಡು ಮಕ್ಕಳು ತೀರಿಹೋಗಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಡಲಾಗಿದೆ. ಈಕೆ ಒಬ್ಬಳೆ ಅರಕಲು ಮುರುಕಲು ಮನೆಯಲ್ಲಿ ವಾಸಿಸುತಿದ್ದಳು. ಆದರೆ ಕಳೆದ ಎರಡು ವರ್ಷದ ಹಿಂದೆ ಹಿಡಿದ ಜಡಿ ಮಳೆಯಿಂದ ಇದ್ದಿದ್ದ ಮನೆಯೂ ಬಿದ್ದು ಹೋಗಿತ್ತು. ಆವತ್ತಿನಿಂದ ಈ ಅಜ್ಜಿಯನ್ನು ಇವರ ಸಂಬಂಧಿ ಮೊಮ್ಮಗಳು ಗೀತಾ ಎಂಬುವವರು ನೋಡಿಕೊಳ್ಳುತಿದ್ದರು. ಇನ್ನು ಬಿದ್ದು ಹಾಳಾದ ಮನೆ ನಿರ್ಮಾಣಕ್ಕೆಂದು ಸರ್ಕಾರ ಐದು ಲಕ್ಷ ಮುಂಜೂರು ಮಾಡಿದ್ದು ಎರಡು ಲಕ್ಷ ಬಿಡುಗಡೆ ಮಾಡಿದೆ. ಹಣ ಅಕೌಂಟ್ ಗೆ ಬಂದಿದ್ದೆ ತಡ ಇಷ್ಟು ದಿನ ತನ್ನ ತಾಯಿ ಏನಾಗಿದ್ದಾಳೆ ಅನ್ನೊದನ್ನು ಮರೆತ್ತಿದ್ದ ಮಕ್ಕಳು ಕಲಾವತಿ ಮತ್ತು ಲಕ್ಷ್ಮೀಕಾಂತಮ್ಮ ಇದ್ದಕ್ಕಿದ್ದಂತೆ ಬಂದು ಅಮ್ಮನಿಗೆ ಎಲ್ಲಿಲ್ಲದ ಪ್ರೀತಿ ತೋರಿಸಿ ತಮ್ಮ ಗಂಡನೆ ಮನೆಗೆ ಕರೆದುಕೊಂಡು ಹೋಗಿ,ಆಕೆ ಖಾತೆಯಲ್ಲಿದ್ದ ಹಣವನ್ನ ಡ್ರಾ ಮಾಡಿದರು. ಆಕೆಗೆ ಬರುತಿದ್ದ ಪೆನ್ಷನ್ ಹಣ ಕಿತ್ತುಕೊಂಡ್ರು, ನಂತರ ಪೋಸ್ಟ್ ಆಫೀಸ್ ನಲ್ಲಿ ಇದ್ದ ಹಣವನ್ನೂ ಕಿತ್ತುಕೊಂಡ್ರು ಇನ್ನೂ ಹಣ ಖಾಲಿಯಾಗುತ್ತಿದಂತೆ ಸರಿಯಾಗಿ ಊಟ ಹಾಕದೆ ಕಾಟ ಕೊಟ್ಟು, ಮಗಳು ಅಳಿಯ ಸೇರಿಕೊಂಡು ತಲೆ ಮೇಲೆ ಮೊಟಕಿ, ಇನ್ನೂ ಇವಳಿಂದೇನು ಪ್ರಯೋಜನ ಇಲ್ಲಾ ಅಂತ ಕಳೆದ ಎರಡು ದಿನಗಳ ಹಿಂದೆ ಆಟೋದಲ್ಲಿ ಕರೆತಂದು ಊರಲ್ಲಿದ್ದ ಹುಣುಸೆ ಮರದ ಕೆಳಗೆ ಬಿಸಾಡಿ ಹೊರಟೋಗಿದ್ದಾರೆ.
ಎರಡು ದಿನಗಳಿಂದ ಉಪವಾಸ ವಿದ್ದ ಅಜ್ಜಿಯನ್ನ ಮತ್ತೆ ಅದೇ ಗ್ರಾಮದ ಗೀತಾ ಅನ್ನೋರು ಊಟ ಕಾಫಿ ಟೀ ಕೊಟ್ಟು ನೋಡಿಕೊಂಡಿದ್ದರು. ಈ ವಿಷಯ ಸಮಾಜ ಸೇವಕಿ ನಂದಿನಿ ಹಾಗೂ ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ ಆರ್ ಮತ್ತು ಪದಾಧಿಕಾರಿಗಳು ಬಂದು ಆಕೆಯ ದುಸ್ತಿತಿ ನೋಡಿ ಹಿರಿಯ ನಾಗರೀಕರ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹಿರಿಯ ನಾಗರೀಕರ ರಕ್ಷಣಾ ಸಮಿತಿ ಹೆಲ್ಪ್ ಲೈನ್ ಅಧಿಕಾರಿ ಗ್ರಾಮಕ್ಕೆ ಬಂದು ಅಜ್ಜಿಯ ಪರಿಸ್ಥತಿ ನೋಡಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು. ಪೊಲೀಸರು ಗಂಡನ ಮನೆಯಲ್ಲಿದ್ದ ಇಬ್ಬರು ಹೆಣ್ಣುಮಕ್ಕಳನ್ನ ಕರೆಸಿ ವಿಚಾರಣೆ ನಡೆಸಿದಾಗ ಇಬ್ಬರಲ್ಲಿ ಯಾರು ಆಕೆಯನ್ನ ನೋಡಿಕೊಳ್ಳಲು ಒಪ್ಪಿಕೊಂಡಿಲ್ಲಾ ಎಂದು ಠಾಣೆಗೆ ಕರೆಸಿ ದೂರು ಧಾಖಲಿಸಿಕೊಂಡಿದ್ದಾರೆ.
ಊರ ಜನರೆಲ್ಲಾ ಸೇರಿ ಇಬ್ಬರು ಮಕ್ಕಳಗೆ ತರಾಟೆಗೆ ತೆಗೆದುಕೊಂಡು ಆಕೆ ಖಾತೆಯಲ್ಲಿದ್ದ ಹಣ ಏನ್ಮಾಡಿದಿರಿ ಪೋಸ್ಟ್ ಆಫೀಸಲ್ಲಿ ಇದ್ದ ಹಣ ಏನಾಯ್ತು ಅಂತ ಕೇಳುತಿದ್ದಂತೆ ತಬ್ಬಿಬ್ಬಾದ ಮಗಳು ಕಲಾವತಿ ಇನ್ಮುಂದೆ ತಾಯಿಯನ್ನ ಸಾಕಿಕೊಳ್ತೇವೆ ಬೀದಿಗೆ ಬಿಡೊಲ್ಲ ಮನೆಯಲ್ಲಿ ಕಿರುಕುಳ ನೀಡೊಲ್ಲ ಅನ್ನೋ ಹೇಳಿಕೆ ನೀಡಿದ್ದಾರೆ. ಮಕ್ಕಳಿಬ್ಬರೂ ತಾಯಿಯನ್ನು ಸಾಕಿಕೊಳ್ಳುವ ಭರವಸೆ ನೀಡಿದರು.ಆದರೆ ಗ್ರಾಮದವರಿಗೆ ನಂಬಿಕೆ ಬಂದಿಲ್ಲ.ಇಂತಹಾ ಮಕ್ಕಳು ಕರೆದುಕೊಂಡು ಹೋದ್ರು ಸರಿಯಾಗಿ ಊಟ ಹಾಕುವುದಿಲ್ಲಾ, ಬೇಗ ಸಾಯಿಸಿಬಿಡ್ತಾರೆ ನಾವೇ ನೋಡಿಕೊಳ್ತೇವೆ ಎಂದು ತಿಳಿಸಿದ್ದಾರೆ. ಆದ್ರೆ ಕಾನೂನಿನ ಪ್ರಕಾರ ಏನು ಮಾಡಬೇಕು ಅನ್ನೋದನ್ನ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ತೀರ್ಮಾನ ಕೈಗೊಳ್ಳಬೇಕು ಅಷ್ಟೆ.