Monday, December 8, 2025
16.4 C
Bengaluru
Google search engine
LIVE
ಮನೆಸಿನಿಮಾಸುಶಾಂತ್ ಪ್ರಕರಣದಲ್ಲಿ ರಿಯಾಗೆ ಸಿಬಿಐ ಕ್ಲೀನ್ ಚಿಟ್ ಕುಟುಂಬದ ಅಸಮಾಧಾನ

ಸುಶಾಂತ್ ಪ್ರಕರಣದಲ್ಲಿ ರಿಯಾಗೆ ಸಿಬಿಐ ಕ್ಲೀನ್ ಚಿಟ್ ಕುಟುಂಬದ ಅಸಮಾಧಾನ

ಸುಶಾಂತ್ ಸಿಂಗ್ ರಾಜಪೂತ್ ಸಾವಿನ ಪ್ರಕರಣದಲ್ಲಿ ಸಿಬಿಐ ನಟಿ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್ ಕೊಟ್ಟಿದ್ದು ಆತ್ಮಹತ್ಯೆಗೆ ಪ್ರಚೋದನೆ ಅಥವಾ ಫೈನಾನ್ಸಿಯಲ್ ಸ್ಕ್ಯಾಮ್ ಗೆ ಯಾವುದೇ ದಸ್ತವೇಜು ಸಿಗದ ಕಾರಣ ಸಿಬಿಐ ತನ್ನ ರಿಪೋರ್ಟಲ್ಲಿ ಸ್ಪಷ್ಟಪಡಿಸಿದೆ .

ಆದರೆ ಸುಶಾಂತ್ ಕುಟುಂಬವು ಈ ರಿಪೋರ್ಟ್ ಅಪೂರ್ಣ ಮತ್ತು ಸತ್ಯವನ್ನು ಮರೆ ಮಾಚಲೋ ಪ್ರಯತ್ನಿಸ್ತಾ ಇದೆ. ಎಂದು ಈಗ ಅಸಮಾಧಾನ ಹೊರಹಾಕಿದ.ನಟ ಸುಶಾಂತ್ ಸಿಂಗ್ ರಾಜಪೂತ್ ಅವರು ಜೂನ್ 14, 2020 ರಂದು ಮುಂಬೈನ ಬಾಂದ್ರಾ ಮನೆಯಲ್ಲಿ ಶವವಾಗಿ ಪತ್ತೆಯಾಗಿತ್ತು. ಈ ಘಟನೆ ಇಡೀ ಬಾಲಿವುಡ್‌ ಫಿಲಂ ಇಂಡಸ್ಟ್ರಿ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು . ಪ್ರಮುಖವಾಗಿ ಇದೊಂದು ಆತ್ಮಹತ್ಯೆ ಕೇಸ್ ಎಂದು ಪ್ರಕರಣ ದಾಖಲು ಮಾಡಿದ್ದರು , ಆ ಬಳಿಕ ಅಭಿಮಾನಿಗಳ ಒತ್ತಾಯಕ್ಕೆ ತನಿಖೆಯನ್ನು ಸಿಬಿಐಗೆ ನೀಡಲಾಗಿತ್ತು.

ನಾಲ್ಕು ವರ್ಷಗಳ ತನಿಖೆಯ ಬಳಿಕ ಸಿಬಿಐ ಇದೀಗ ತನ್ನ ಫೈನಲ್ ರಿಪೋರ್ಟ್ ಒಂದನ್ನ ಸಲ್ಲಿಸಿದೆ . ರಿಯಾ ಚಕ್ರವರ್ತಿ ಮತ್ತು ಆಕೆಯ ಫ್ಯಾಮಿಲಿಗೆ ಯಾವುದೇ ರೀತಿಯ ಕಾನೂನು ಬಾಹಿರವಾಗಿ ಯಾವುದೇ ಪಾತ್ರವಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ. ರಿಯಾ ಸುಶಾಂತ್ ಅವರನ್ನು ಬೆದರಿಸಿದ್ದಾರೆ, ಅವರ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಅಥವಾ ಫೈನಾನ್ಸಿಯಲಿ ಮೋಸ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಎವಿಡೆನ್ಸ್ ಸಿಕ್ಕಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಿಪೋರ್ಟ್ ಪ್ರಕಾರ, ರಿಯಾ ಮತ್ತು ಆಕೆಯ ಸಹೋದರ ಶೋವಿಕ್ ಚಕ್ರವರ್ತಿ ಜೂನ್ 8, 2020 ರಂದು ಸುಶಾಂತ್ ಅವರ ನಿವಾಸದಿಂದ ಹೊರಟು ಹೋಗಿದ್ದರು. ಆ ಬಳಿಕ ಅವರು ಜೂನ್ 14 ರವರೆಗೆ ಸಂಪರ್ಕದಲ್ಲಿರಲಿಲ್ಲ. ಆ ಅವಧಿಯಲ್ಲಿ ಸುಶಾಂತ್ ಅವರ ಸಹೋದರಿ ಮೀತು ಸಿಂಗ್ ಅವರೊಂದಿಗೆ ಇದ್ದರು.

ರಿಯಾ ವಿರುದ್ಧದ ಫೈನಾನ್ಸಿಯಲ್ ಫ್ರಾಡ್ ಆರೋಪಗಳಿಗೂ ಸಿಬಿಐ ಸ್ಪಷ್ಟ ವರದಿ ನೀಡಿದೆ — ಸುಶಾಂತ್ ಅವರ ಹಣಕಾಸಿನ ವಹಿವಾಟುಗಳು ಅವರ ಚಾರ್ಟರ್ಡ್ ಅಕೌಂಟೆಂಟ್ ಮತ್ತು ವಕೀಲರ ಮೂಲಕವೇ ನಡೆದಿದ್ದವು; ರಿಯಾ ಅಥವಾ ಇತರರು ಹಣವನ್ನು ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಎವಿಡೆನ್ಸ್ ಪ್ರೂವಾಗಿಲ್ಲ ಎಂದು ಸಿಬಿಐ ಸ್ಪಷ್ಟಪಡಿಸಿದೆ.

ತನಿಖೆಯಲ್ಲಿ ರಿಯಾ ಸುಶಾಂತ್ ನಿವಾಸದಿಂದ ಹೊರಟಾಗ ತನ್ನ ಲ್ಯಾಪ್‌ಟಾಪ್ ಮತ್ತು ವಾಚ್ ಮಾತ್ರ ತೆಗೆದುಕೊಂಡು ಹೋಗಿದ್ದಳು ಎಂಬುದೂ ವರದಿಯಲ್ಲಿದೆ. ಈ ವಸ್ತುಗಳನ್ನು ಸುಶಾಂತ್ ಅವರೇ ಆಕೆಗೆ ಗಿಫ್ಟ್ ಯಾಗಿ ಕೊಟ್ಟಿದ್ದರಿಂದ ಅದನ್ನು “ ಫ್ರಾಡ್ ” ಎಂದು ಪರಿಗಣಿಸೋಕಾಗಲ್ಲ ಎಂದು ಸಿಬಿಐ ಹೇಳಿದೆ.

ಆದಾಗ್ಯೂ, ಸುಶಾಂತ್ ಅವರ ಕುಟುಂಬವು ಈ ರಿಪೋರ್ಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ರಿಪೋರ್ಟ್ ಅಪೂರ್ಣವಾಗಿದೆ; ಸತ್ಯವನ್ನು ಮರೆ ಮಾಚಲು ಪ್ರಯತ್ನಿಸಿದ್ದರು ” ಅವರ ಕುಟುಂಬಸ್ಥರು ಹೇಳಿದ್ದಾರೆ. ಈ ಕೇಸ್ ಮುಂದಿನ ವಿಚಾರಣೆ ಡಿಸೆಂಬರ್ 20 ರಂದು ನಿಗದಿಯಾಗಿದ್ದು , ಸಿಬಿಐ ಸಲ್ಲಿಸಿದ ಮುಕ್ತಾಯ ರಿಪೋರ್ಟ್ ಕುರಿತು ಕೋರ್ಟ್ ಮುಂದಿನ ಕ್ರಮವನ್ನು ನಿರ್ಧರಿಸಲಿದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments