ಬೆಂಗಳೂರು : ಪ್ರತಾಪ್ ಸಿಂಹ ಬದಲು ಕೋತಿ ಅಂತಾ ಹೆಸರಿಡ್ಬೇಕಿತ್ತು. ಅವರ ಅಮ್ಮ ದೈವ ಭಕ್ತರಿರಬೇಕು. ಅದಕ್ಕೆ ಪ್ರತಾಪ್ ಅಂತಾ ಹೆಸರು ಇಟ್ಟಿದ್ದಾರೆ. ಇಲ್ಲ ಅಂದಿದ್ರೆ ಕೋತಿ ಅಂತ ನಾಮಕರಣ ಮಾಡಿರೋರು ಎಂದು ಪ್ರತಾಪ್ ಸಿಎಂ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಲೇವಡಿ ಮಾಡಿದ್ದಾರೆ..
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಾಪ್ ಅವರಿಗೆ ಅಸ್ತಿತ್ವದ ಕೊರತೆ ಕಾಡುತ್ತಿದೆ. ನಾನು ಅವರಿಗೆ ಸಿಂಹ ಅನ್ನಲ್ಲ, ಸಿಂಹ ಘರ್ಜಿಸಬೇಕು, ಬಾಯಿ ಬಡಿದುಕೊಳ್ಳಬಾರದು. ಬಿಜೆಪಿಯವರು ಒದ್ದು ಹೊರಗೆ ಹಾಕಿದ್ದಾರಾ ಗೊತ್ತಿಲ್ಲ, ಹೊರಗಂತೂ ಹಾಕಿದ್ದಾರೆ. ಹಿಂದೂ ಧರ್ಮ ನಿಮಗೆ ಅಂತ ಯತ್ನಾಳ್‌ಗೆ, ಪ್ರತಾಪ್ ಸಿಂಹಗೆ ನಿಮ್ಮ ತಾತಾ ಏನು ವಿಲ್ ಬರೆದುಕೊಟ್ಟಿದ್ದಾರ? ನಾನು ಮಾತನಾಡಿದರೆ ಪ್ರತಾಪ್ ಸಿಂಹ ಈಗ ಮೂರನೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತಾರೆ. ನಿಮ್ಮನ್ನ ಯಾರು ಬಯ್ಯಬಾರದು, ನೀವು ಯಾರನ್ನ ಬೇಕಾದರು ಬಯ್ಯಬಹುದಾ? ನಾನು ಮಾತನಾಡಿದರೆ, ಲಕ್ಷ್ಮಣ್ ಮಾತನಾಡಿದರೆ ಸ್ಟೇ ತರುತ್ತಾರೆ ಎಂದು ಕಿಡಿಕಾರಿದರು.
ಪ್ರತಾಪ್‌ಗೆ ಕೆಲಸವಂತೂ ಇಲ್ಲ, ರಾಜ್ಯ ರಾಜಕಾರಣಕ್ಕೆ ಅವರು ಸೂಟ್ ಆಗಲ್ಲ. ಅಷ್ಟು ಅಹಂಕಾರ, ದುರಹಂಕಾರ ಇದ್ರೆ ರಾಜ್ಯ ರಾಜಕಾರಣಕ್ಕೆ ಒಗ್ಗಲ್ಲ. ಮೈಸೂರು ಎಂಪಿಯವರು ಸ್ಥಾನ ಪ್ರತಾಪ್‌ಗೆ ಬಿಟ್ಟು ಕೊಡ್ತಾರಾ, ಖಂಡಿತ ಇಲ್ಲ. ಮೈಸೂರು ಸಂಸ್ಥಾನವನ್ನೂ ಬಿಡಲ್ಲ, ಎಂಪಿ ಸ್ಥಾನವನ್ನೂ ಅವರು ಬಿಡಲ್ಲ. ಯತ್ನಾಳ್ ಹಾಗೂ ಪ್ರತಾಪ್ ಯುಪಿಯಲ್ಲಿ ಚುನಾವಣೆಯಲ್ಲಿ ನಿಲ್ಲುವುದು ಒಳ್ಳೆಯದು.
ಪ್ರತಾಪ್ ಸೀತೆಯನ್ನು ನೋಡುವುದಕ್ಕೆ ಅಯೋಧ್ಯೆಗೆ ಹೋಗ್ತಾರೇನೋ, ಆದರೆ ನಾವೆಲ್ಲ ತಂದೆ ತಾಯಿಯಲ್ಲೇ ಶ್ರೀರಾಮಚಂದ್ರನನ್ನು, ಸೀತಾ ಮಾತೆಯನ್ನು ನೋಡುವ ಹಿಂದೂಗಳು ನಾವು. ನಿಮಗಿಂತ ದೊಡ್ಡ ಹಿಂದೂ ಭಕ್ತರು ಹಿಂದೂ ಆರಾಧಕರು ನಾವು. ಹಿಂದೂ ಧರ್ಮದ ಬಗ್ಗೆ ಇಷ್ಟು ಮಾತಾಡ್ತಾರಲ್ಲ, ಎಷ್ಟು ಹಿಂದೂ ದೇವಾಲಯಗಳನ್ನು ಉದ್ಧಾರ ಮಾಡಿದ್ದಾರೆ ಇವರು? ಯತ್ನಾಳ್ ಹಾಗೂ ಪ್ರತಾಪ್ ಫೈರ್ ಅಲ್ಲ, ಬಿಜೆಪಿಯವರು ಕಿತ್ತು ಬಿಸಾಡಿರುವ ಪೈರು ನೀವು ಎಂದು ಲೇವಡಿ ಮಾಡಿದರು.