Friday, August 29, 2025
27.2 C
Bengaluru
Google search engine
LIVE
ಮನೆ#Exclusive NewsTop Newsಅಭಿಮಾನ್‌ ಸ್ಟುಡಿಯೋ ಜಾಗ ಮುಟ್ಟುಗೋಲು: ಸಂತಸ ವ್ಯಕ್ತಪಡಿಸಿದ ಅನಿರುದ್ಧ್‌

ಅಭಿಮಾನ್‌ ಸ್ಟುಡಿಯೋ ಜಾಗ ಮುಟ್ಟುಗೋಲು: ಸಂತಸ ವ್ಯಕ್ತಪಡಿಸಿದ ಅನಿರುದ್ಧ್‌

ಬೆಂಗಳೂರು: ವಿವಾದದಿಂದ ಕೂಡಿದ್ದ ಬೆಂಗಳೂರಿನಲ್ಲಿರುವ ಅಭಿಮಾನ್‌ ಸ್ಟುಡಿಯೋ ಜಾಗವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.. ನಿಯಮ, ಷರತ್ತಿನ ಉಲಂಘನೆಯ ಕಾರಣದಿಂದ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇತ್ತೀಚೆಗೆ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವ ಘಟನೆ ಭಾರೀ ಸುದ್ದಿಯಾಗಿತ್ತು.

ಇದೀಗ ಜಾಗ ಮುಟ್ಟುಗೋಲು ಹಾಕಿಕೊಂಡಿರೋದಕ್ಕೆ ಡಾ.ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರ ಅಭಿಮಾನ್ ಸ್ಟುಡಿಯೋ ಜಾಗ ವಶಪಡಿಸಿಕೊಳ್ಳಬಹುದು ಅಂತಾ ಮೊದಲೇ ಗೊತ್ತಿತ್ತು. ಆ ನಿಟ್ಟಿನಲ್ಲಿ 6 ವರ್ಷದಿಂದ ಪ್ರಯತ್ನ ಪಟ್ಟಿದ್ವಿ, ಆದರೆ ಆಗಿರಲಿಲ್ಲ. ಈಗ ನಮಗೆ ತುಂಬಾ ಖುಷಿಯಾಗಿದೆ. ಅಪ್ಪಾಜಿ ಅಂತ್ಯ ಸಂಸ್ಕಾರದ ಜಾಗದಲ್ಲಿ ಭಾರತಿ ಅಮ್ಮ ಸ್ಮಾರಕ ಕಟ್ಟಿದ್ದರು. ಆದರೆ ವಿರೋಧಿಗಳು ನೆಲಸಮ ಮಾಡಿಬಿಟ್ಟರು.

ಮುಟ್ಟುಗೋಲು ಬಗ್ಗೆ ಅಧಿಕೃತ ಘೋಷಣೆ ಬಂದಿರಲಿಲ್ಲ, ಈಗ ಬಂದಿದೆ. ಕೇವಲ 10 ಗುಂಟೆ ಜಾಗ ಕೇಳ್ತೀವಿ. ನಿನ್ನೆಯ ದಿನ ಸಿಎಂ ಭೇಟಿಯಾದಾಗ ಈ ಬಗ್ಗೆ ಚರ್ಚೆ ಮಾಡಿರಲಿಲ್ಲ. ನಾನು ಏನು ಹೇಳ್ತಿದ್ದಿನೋ, ಅದನ್ನೇ ಅಮ್ಮ ಹೇಳ್ತಿರೋದು. ಸಿಎಂ ಕಳೆದ ಬಾರಿ ಹೋದಾಗಲೂ ‘ಕರ್ನಾಟಕ ರತ್ನ’ ಬಗ್ಗೆ ಭರವಸೆ ಕೊಟ್ಟಿದ್ದರು. ಈ ಬಾರಿಯೂ ಭರವಸೆ ನೀಡಿದ್ದಾರೆ. ಭಿನ್ನಾಭಿಪ್ರಾಯ ಇರುವ ಅಭಿಮಾನಿಗಳು ಅಭಿಮಾನಿಗಳಲ್ಲ. ನಿಜವಾದ ಅಭಿಮಾನಿಗಳು ಸದಾ ನಮ್ಮ ಜೊತೆ ಇರೋರು ಎಂದು ಹೇಳಿದ್ದಾರೆ..

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments