ತುಮಕೂರು: ರಾಜ್ಯದಲ್ಲಿ ಯೂರಿಯಾ ಗೊಬ್ಬರ ಕೊರತೆ ಮುಂದುವರಿದಿದೆ. ರೈತರು ಯೂರಿಯಾ ಖರೀದಿಗೆ ಮುಗಿಬಿದ್ದಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆದಿದೆ.
ಯೂರಿಯಾ ಖರೀದಿಗೆ ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಸಾಲಿನಲ್ಲಿ ನಿಂತ ರೈತರು ತಾ ಮುಂದು ನಾ ಮುಂದು ಎಂದು ಯೂರಿಯಾ ಖರೀದಿಗೆ ಮುಗಿ ಬಿದ್ದಿದ್ದಾರೆ. ರೈತರ ನೂಕಾಟ- ತಳ್ಳಾಟ ಕಂಡು ಸೂಸೈಟಿ ಸಿಬ್ಬಂದಿ ಪೊಲೀಸರ ಮೊರೆ ಹೋಗಿದ್ದು, ಪೊಲೀಸರ ನೆರವಿನೊಂದಿಗೆ ರಸಗೊಬ್ಬರ ವಿತರಣೆ ಮಾಡಿದ್ದಾರೆ. ಇನ್ನು ಸೊಸೈಟಿಯಲ್ಲಿ ಕಳೆದ ಮೂರ್ನಾಲ್ಕು ದಿನದಿಂದ ಗೊಬ್ಬರ ಖಾಲಿಯಾಗಿದ್ದು, ಈಗ ಬಂದಿರುವುದರಿಂದ ಖರೀದಿಗೆ ನೂರಾರು ರೈತರು ಮುಗಿ ಬಿದ್ದಿದ್ದರು.