ಕಲಬುರಗಿ: ಅಕ್ರಮ ಕಲ್ಲು ಗಣಿಗಾರಿಕೆ ಮೇಲೆ ಜೆಸ್ಕಾಂ ವಿಚಕ್ಷಣ ದಳ ದಾಳಿ ಮಾಡಿ ಅಕ್ರಮವಾಗಿ ಕೂಡಿಸಲಾಗಿದ್ದ 13 ವಿದ್ಯುತ್ ಟ್ರಾನ್ಸ್ ಫಾರ್ಮರ್ಗಳನ್ನು ಜಪ್ತಿ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ನಡೆದಿದೆ.
ಮಿರಿಯಾಣ ಮತ್ತು ಕಿಷ್ಟಾಪುರ ಗ್ರಾಮಗಳಲ್ಲಿ ಅನುಮತಿ ಪಡೆಯದೇ ಅಕ್ರಮವಾಗಿ ಟ್ರಾನ್ಸ್ ಫಾರ್ಮರ್ ಅಳವಡಿಸಲಾಗಿತ್ತು. ಈ ಹಿನ್ನೆಲೆ ವಿಚಕ್ಷಣ ದಳದ ಇನ್ಸ್ಪೆಕ್ಟರ್ ದಿವ್ಯಾ ನೇತೃತ್ವದಲ್ಲಿ ದಾಳಿ ನಡೆಸಿ 13 ಟಿಸಿ ಸೇರಿದಂತೆ ಎರಡು ಕಲ್ಲು ಕತ್ತರಿಸೋ ಯಂತ್ರ ಜಪ್ತಿ ಮಾಡಿಕೊಂಡಿದ್ದಾರೆ.


