ಖಡಕ್ ಅಧಿಕಾರಿಯಾಗಿರುವ IAS ಪಲ್ಲವಿ ಅಕುರಾತಿ, ಸಿಂಪಲ್ ಆಗಿ ಸದಾ ಸೀರೆಯಲ್ಲೇ ಕಾಣಿಸಿಕೊಳ್ಳುತ್ತಾರೆ. 2009ರ ಬ್ಯಾಚ್‌ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಸಕಾಲ ಮಿಷನ್‌ನ ಹೆಚ್ಚುವರಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಮ್ಮೆ ಶಾಪಿಂಗ್ಗೆ ಟೈಂ ಇಲ್ಲ ಅಂತಾ ಆನ್ಲೈನ್ನಲ್ಲಿ 850 ರೂಪಾಯಿ ಕೊಟ್ಟು ಮಧುರೈ ಸೀರೆ ಖರೀದಿಸಿದ್ರು. ಯೂಟ್ಯೂಬ್ನಲ್ಲಿ ನೋಡಿ ಪೂರ್ಣಿಮಾ ಕಲೆಕ್ಷನ್ನಲ್ಲಿ ಸೀರೆ ಆರ್ಡರ್ ಮಾಡಿದ್ರು. ಇವತ್ತು ಬರುತ್ತೆ.. ನಾಳೆ ಬರುತ್ತೆ.. ಅಂತಾ ಕಾದು ಕಾದು ಸುಸ್ತಾದ ಪಲ್ಲವಿ ಮೇಡಂಗೆ, ಕೊನೆಗೂ ಬುಕ್ ಮಾಡಿದ್ದ 850 ಮೌಲ್ಯದ ಸೀರೆ ಬರಲೇ ಇಲ್ಲ. ಫೋನ್ ಮಾಡಿದ್ರೆ ನೋ ರೆಸ್ಪಾನ್ಸ್.. ಮೆಸೇಜ್ಗೆ ನೋ ರಿಪ್ಲೇ.. ಇದ್ರಿಂದ ಕೆರಳಿ ಕೆಂಡದಂತಾದ ಪಲ್ಲವಿ ಅಕುರಾತಿ, ನನ್ನಂತೆ ಹಲವರಿಗೂ ದೋಖಾ ಆಗಿರಬಹುದೆಂದು ತಿಳಿದು, ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.ಇತ್ತೀಚೆಗೆ ಆನ್ಲೈನ್ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಿವೆ. ಆದೆಷ್ಟೋ ಮಂದಿಗೆ ಈ ರಿತಿ ವಂಚನೆ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಹೀಗಾಗಿ ಇನ್ಮುಂದೆ ಈ ರೀತಿ ವಂಚನೆ ಘಟನೆಗಳು ಆಗದಿರಲೆಂದು, 850 ರೂಪಾಯಿಯನ್ನಷ್ಟೇ ಕಳೆದುಕೊಂಡಿದ್ರು, ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಫ್ರೀಡಂ ಟಿವಿ, ಪಲ್ಲವಿ ಅಕುರಾತಿ ಅವರನ್ನು ಸಂಪರ್ಕಿಸಿದಾಗ, ಅವರು ಇದು ನನ್ನ ಖಾಸಗಿ ವಿಚಾರ. ಈ ವಿಚಾರ ಹೇಗೆ ಬಯಲಿಗೆ ಬಂತು ಎಂಬುದು ಗೊತ್ತಿಲ್ಲ. ಈ ಬಗ್ಗೆ ನಾನು ಮಾತಾಡಲ್ಲ. ಡೋಂಟ್ ಡಿಸ್ಟರ್ಬ್ ಮೀ ಎಂದು ಹೇಳಿದ್ರು.
ಐಎಎಸ್ ಅಧಿಕಾರಿಣಿಯ ಒಂದು ಸೀರೆಯ ಕತೆ
0
19
RELATED ARTICLES